ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಉಚಿತ ವಿದ್ಯುತ್‌ ಯೋಜನೆ : ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆಯಡಿ “ಮಾದರಿ ಸೌರ ಗ್ರಾಮಗಳʼ ನಿರ್ಮಾಣದ ಅನುಷ್ಠಾನಕ್ಕಾಗಿ ಭಾರತ ಸರ್ಕಾರದಿಂದ ಕಾರ್ಯಾಚರಣೆಯ ಮಾರ್ಗಸೂಚಿ ಬಿಡುಗಡೆ


ಪ್ರತಿ ಜಿಲ್ಲೆಯ ವಿಜೇತ ಗ್ರಾಮಕ್ಕೆ ₹ 1 ಕೋಟಿ ಕೇಂದ್ರ ಹಣಕಾಸು ನೆರವು ಅನುದಾನ.

Posted On: 12 AUG 2024 1:36PM by PIB Bengaluru

ನವ ಮತ್ತು ನವೀಕೃತ ಇಂಧನ ಸಚಿವಾಲಯ 2024 ರ ಆಗಸ್ಟ್‌ 9 ರಂದು ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆಯಡಿ “ಮಾದರಿ ಸೌರ ಗ್ರಾಮಗಳʼ ನಿರ್ಮಾಣದ ಅನುಷ್ಠಾನಕ್ಕಾಗಿ ಭಾರತ ಸರ್ಕಾರದಿಂದ ಕಾರ್ಯಾಚರಣೆಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಯೋಜನೆಯಡಿ ʼಮಾದರಿ ಸೌರ ಗ್ರಾಮʼಗಳನ್ನು ನಿರ್ಮಾಣ ಮಾಡುವುದು ಯೋಜನೆಯ ಒಂದು ಭಾಗವಾಗಿದ್ದು, ಭಾರತದ ಪ್ರತಿಯೊಂದು ಜಿಲ್ಲೆಯಲ್ಲಿ ತಲಾ ಒಂದೊಂದು ಮಾದರಿ ಸೌರ ವಿದ್ಯುತ್‌ ಗ್ರಾಮಗಳನ್ನು ನಿರ್ಮಿಸಲು ಉತ್ತೇಜನ ಮತ್ತು ಗ್ರಾಮದ ಸಮುದಾಯಗಳು ತಮ್ಮ ಶಕ್ತಿಯ ಅಗತ್ಯತೆಗಳನ್ನು ಈಡೇರಿಸುವ ಜೊತೆಗೆ ಸ್ವಾವಲಂಬಿಯಾಗುವಂತೆ ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಗೆ 800 ಕೋಟಿ ರೂಪಾಯಿ ಹಣಕಾಸು ನಿಗದಿ ಮಾಡಿದ್ದು, ಪ್ರತಿಯೊಂದು ಮಾದರಿ ಸೌರ ಗ್ರಾಮಗಳಿಗೆ ತಲಾ 1 ಕೋಟಿ ರೂಪಾಯಿ ಒದಗಿಸಲಾಗುವುದು.

ಸ್ಪರ್ಧೆಯ ಮಾದರಿಯಲ್ಲಿ ಆಯ್ಕೆಯಾಗಲು ಆ ಗ್ರಾಮ ಕಂದಾಯ ಗ್ರಾಮವಾಗಿರಬೇಕು, 5,000ಕ್ಕಿಂತ ಹೆಚ್ಚು [ರಾಜ್ಯಗಳ ವಿಶೇಷ ವರ್ಗದಡಿ 2,000] ಜನಸಂಖ್ಯೆ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಕ್ರಮವನ್ನು ಒಳಗೊಂಡಿರುತ್ತದೆ, ಅಲ್ಲಿ ಜಿಲ್ಲಾ ಮಟ್ಟದ ಸಮಿತಿಯು (ಡಿ ಎಲ್‌ ಸಿ) ಸಂಭವನೀಯ ಘೋಷಣೆಯ ತರುವಾಯ 6 ತಿಂಗಳ ನಂತರ ಸ್ಥಾಪಿಸಲಾದ, ಒಟ್ಟಾರೆ ವಿತರಿಸಿದ ನವೀಕರಿಸಬಹುದಾದ ಇಂಧನ (ನವೀಕೃತ ಇಂಧನ) ಸಾಮರ್ಥ್ಯದ ಮೇಲೆ ಗ್ರಾಮಗಳ ಮೌಲ್ಯಮಾಪನ ಮಾಡಲಾಗುತ್ತದೆ.

ಸ್ಪರ್ಧೆಯಲ್ಲಿ ಅತಿ ಹೆಚ್ಚು ನವೀಕೃತ ಇಂಧನ ಸಾಮರ್ಥ್ಯ ಹೊಂದುವ ಮೂಲಕ ಆಯ್ಕೆಯಾಗುವ ಗ್ರಾಮಗಳು ಕೇಂದ್ರದಿಂದ 1 ಕೋಟಿ ರೂಪಾಯಿ ಆರ್ಥಿಕ ನೆರವು ಪಡೆಯಲಿವೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನವೀಕೃತ ಇಂಧನ ಅಭಿವೃದ್ದಿ ಸಂಸ್ಥೆಯ ಸಹಯೋಗದಡಿ ಜಿಲ್ಲಾ ಸಮಿತಿ [ಡಿಎಲ್‌ ಸಿ] ಕಣ್ಗಾವಲಿನಡಿ ಸಮುದಾಯಕ್ಕೆ ಪರಿಣಾಮಕಾರಿಯಾಗಿ ಸೌರ ವಿದ್ಯುತ್‌ ಒದಗಿಸಿದ, ದೇಶದಲ್ಲಿ ಮಾದರಿ ಗ್ರಾಮಗಳಾಗಿ ರೂಪುಗೊಂಡ ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತದೆ. ಭಾರತ ಸರ್ಕಾರ ಪಿಎಂ ಸೂರ್ಯಘರ್‌ ಉಚಿತ ವಿದ್ಯುತ್‌ ಯೋಜನೆಗೆ 2024 ರ ಫೆಬ್ರವರಿ 29 ರಂದು ಅನುಮೋದನೆ ನೀಡಿದೆ. ಮನೆಗಳ ಮೇಲ್ಛಾವಣಿಯಲ್ಲಿ ಸ್ವಂತ ವಿದ್ಯುತ್‌ ಉತ್ಪಾದಿಸಿ ಸ್ವಾವಲಂಬಿಯಾಗಲು ಅವಕಾಶ ಮಾಡಿಕೊಡಲಿದೆ. ಹಣಕಾಸು ವರ್ಷ 2026-27 ರ ವರೆಗೆ ಈ ಯೋಜನೆಗೆ 75,021 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.

ಯೋಜನೆಯ ಮಾರ್ಗಸೂಚಿ ಈ ಕೆಳಗಡೆ ಲಭ್ಯವಿದೆ.

https://mnre.gov.in/notice/guidelines-for-implementation-of-component-model-solar-village-under-pm-surya-ghar-muft-bijli-yojana/

 

*****

 



(Release ID: 2044741) Visitor Counter : 7