ಸಂಪುಟ

FY 2024-25 ರಿಂದ 2028-29 ರ ಅವಧಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (PMAY-G) ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ  ಅನುಮೋದನೆ

Posted On: 09 AUG 2024 10:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಆರ್ಥಿಕ ವರ್ಷ 2024-25 ರಿಂದ 2028-29 ರ ಅವಧಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (ಪಿಎಂಎವೈ-ಜಿ) ಅನುಷ್ಠಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ  ಅನುಮೋದನೆ ನೀಡಿದೆ. ಎರಡು ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಸಮತಲದ ಪ್ರದೇಶಗಳಲ್ಲಿ ಪ್ರಸ್ತುತ ರೂ.1.20 ಲಕ್ಷ ಮತ್ತು ಈಶಾನ್ಯ ರಾಜ್ಯಗಳು ಮತ್ತು ಗುಡ್ಡಗಾಡು ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರೂ.1.30 ಲಕ್ಷ ಆರ್ಥಿಕ ನೆರವು ನೀಡಲಾಗುವುದು. 

ವಿವರಗಳು:

ಸಚಿವ ಸಂಪುಟದ ಅನುಮೋದನೆಯ ವಿವರಗಳು ಹೀಗಿವೆ. 

i. ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ್‌ (PMAY-G) ಮುಂದುವರಿಕೆ ಆವಾಸ್ + (2018) ಪಟ್ಟಿಯನ್ನು (ಅಪ್‌ಡೇಟ್ ಮಾಡಿದ ನಂತರ) ಮತ್ತು 2011 ರ ಸಾಮಾಜಿಕ ಆರ್ಥಿಕ ಜಾತಿ ಜನಗಣತಿಯಲ್ಲಿ (SECC) 2011 ರ ಖಾಯಂ ಕಾಯುವ ಪಟ್ಟಿಯೊಳಗೆ (ಒಟ್ಟಾರೆ) ಸಹಾಯವನ್ನು ಒದಗಿಸುವ ಮೂಲಕ ಅರ್ಹ ಕುಟುಂಬಗಳನ್ನು ಸಮತೋಲನಗೊಳಿಸಿ ಏಪ್ರಿಲ್, 2024 ರಿಂದ ಮಾರ್ಚ್, 2029 ರವರೆಗೆ ಮೂಲ ಸೌಲಭ್ಯಗಳೊಂದಿಗೆ 2 ಕೋಟಿ ಪಕ್ಕಾ ಮನೆಗಳಿಗೆ  ಸೌಕರ್ಯ ಒದಗಿಸಲಾಗುವುದು.
 
ii ಆರ್ಥಿಕ ವರ್ಷ 2024-25 ರಿಂದ 2028-29 ರವರೆಗೆ ರೂ.3,06,137 ಕೋಟಿ ಅನುದಾನ ವೆಚ್ಚ ಮೀಸಲಿರಿಸಲಾಗಿದೆ. ಇದರಲ್ಲಿ ಕೇಂದ್ರದ ಪಾಲು ರೂ.2,05,856 ಕೋಟಿ ಮತ್ತು ರೂ.1,00,281 ಕೋಟಿ ರಾಜ್ಯ ಹೊಂದಾಣಿಕೆಯ ಪಾಲು ಸೇರಿದೆ.

iii NITI ಆಯೋಗದಿಂದ PMAY-G ಮೌಲ್ಯಮಾಪನ ಮತ್ತು EFC ಮೂಲಕ ಯೋಜನೆಯ ಮರು-ಮೌಲ್ಯಮಾಪನದ ನಂತರ ಮಾರ್ಚ್, 2026 ರ ನಂತರ ಯೋಜನೆ ಮುಂದುವರಿಸಲಾಗುವುದು.

iv. ತಿದ್ದುಪಡಿ ಮಾಡಿದ ಮಾನದಂಡಗಳನ್ನು ಬಳಸಿಕೊಂಡು ಅರ್ಹ ಗ್ರಾಮೀಣ ಕುಟುಂಬಗಳನ್ನು ಗುರುತಿಸಲು ಆವಾಸ್ + ಪಟ್ಟಿಯನ್ನು ನವೀಕರಿಸಲಾಗುತ್ತಿದೆ.

v. ಫಲಾನುಭವಿಗಳಿಗೆ ಸಹಾಯದ ಘಟಕ ವೆಚ್ಚ ಹಾಲಿ ಇರುವಂತೆ  ಬಯಲು ಪ್ರದೇಶಗಳಲ್ಲಿ ರೂ.1.20 ಲಕ್ಷ ಮತ್ತು ಈಶಾನ್ಯ ಪ್ರದೇಶ/ಗುಡ್ಡಗಾಡು ರಾಜ್ಯಗಳಲ್ಲಿ ರೂ.1.30 ಲಕ್ಷ ನೀಡುವುದನ್ನು ಮುಂದುವರಿಸಲಾಗುವುದು.

vi. ಕಾರ್ಯಕ್ರಮದ ನಿಧಿಯ ಶೇಕಡ 2 ರಷ್ಟು ಆಡಳಿತಾತ್ಮಕ ನಿಧಿಗಳು, ಆಡಳಿತಾತ್ಮಕ ನಿಧಿಗಳ ವಿಭಜನೆಯೊಂದಿಗೆ 1.70% ರಷ್ಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗುವುದು ಮತ್ತು 0.30% ಕೇಂದ್ರ ಮಟ್ಟದಲ್ಲಿ ಉಳಿಸಿಕೊಳ್ಳಬೇಕು. 

vii. ಅಸ್ತಿತ್ವದಲ್ಲಿರುವ ದರಗಳ ಪ್ರಕಾರ 2024-25ರ ಆರ್ಥಿಕ ವರ್ಷದ ಅವಧಿಯಲ್ಲಿ 31.03.2024 ರಂತೆ PMAY-G ಯ ಹಿಂದಿನ ಹಂತದ ಅಪೂರ್ಣ ಮನೆಗಳನ್ನು ಪೂರ್ಣಗೊಳಿಸುವುದು.

ಪ್ರಯೋಜನಗಳು:

* ಹಿಂದಿನ ಹಂತದ 2.95 ಕೋಟಿ ಮನೆಗಳ ಸಂಚಿತ ಗುರಿಯನ್ನು ಸಾಧಿಸಲು 31.03.2024 ರವರೆಗೆ ಅಪೂರ್ಣವಾಗಿರುವ 35 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು.

* ಈಗ, ಪಿಎಂಎವೈ-ಜಿ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 2024-2029 ರ ಆರ್ಥಿಕ ವರ್ಷದಲ್ಲಿ ವಸತಿ ಅಗತ್ಯಗಳನ್ನು ಪರಿಹರಿಸಲು ಎರಡು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುವುದು. ಇನ್ನೂ ಎರಡು ಕೋಟಿ ಮನೆಗಳ ನಿರ್ಮಾಣದಿಂದ ಸುಮಾರು 10 ಕೋಟಿ ಮಂದಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

* ಅನುಮೋದನೆಯು ಎಲ್ಲಾ ವಸತಿ ರಹಿತರಿಗೆ ಮತ್ತು ಶಿಥಿಲಗೊಂಡ ಮತ್ತು ಕಚ್ಚಾ ಮನೆಗಳಲ್ಲಿ ವಾಸಿಸುವ ಜನರಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಉತ್ತಮ ಗುಣಮಟ್ಟದ ಸುರಕ್ಷಿತ ಮತ್ತು ಸುಭದ್ರ ಮನೆಯನ್ನು ನಿರ್ಮಿಸಲು ಅನುಕೂಲವಾಗುತ್ತದೆ.  ಇದು ಫಲಾನುಭವಿಗಳ ಸುರಕ್ಷತೆ, ನೈರ್ಮಲ್ಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ.

ಹಿನ್ನೆಲೆ:

ಗ್ರಾಮೀಣ ಪ್ರದೇಶಗಳಲ್ಲಿ "ಎಲ್ಲರಿಗೂ ವಸತಿ" ಎಂಬ ಉದ್ದೇಶವನ್ನು ಸಾಧಿಸಲು, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ -ಗ್ರಾಮೀಣ್‌ (PMAY-G) ಅನ್ನು ಏಪ್ರಿಲ್ 2016 ರಿಂದ ಜಾರಿಗೆ ತಂದಿದ್ದು, ಮಾರ್ಚ್ 2024 ರವರೆಗೆ ಮೂಲ ಸೌಕರ್ಯಗಳೊಂದಿಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಇವುಗಳನ್ನು ಹಂತಗಳಲ್ಲಿ ಸಾಧಿಸುವ ಉದ್ದೇಶವಿದೆ.

 

*****



(Release ID: 2043954) Visitor Counter : 7


Read this release in: English , Marathi , Gujarati