ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಮಿಥ್ಯೆ ವರ್ಸಸ್ ಫ್ಯಾಕ್ಟ್ಸ್ (ಸುಳ್ಳು ವರ್ಸೆಸ್ ವಸ್ತುಸ್ಥಿತಿ)


ನೀಟ್-ಪಿಜಿ 2024 ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ಮಾಧ್ಯಮ ವರದಿಗಳು ಸುಳ್ಳು ಮತ್ತು ದಾರಿ ತಪ್ಪಿಸುವಂಥವು

ನೀಟ್-ಪಿಜಿ 2024 ರ ಪ್ರಶ್ನೆಗಳನ್ನು ಹಣಕ್ಕಾಗಿ ಒದಗಿಸುವ ಹೆಸರಿನಲ್ಲಿ ನೀಟ್-ಪಿಜಿ ಆಕಾಂಕ್ಷಿಗಳನ್ನು ಮೋಸಗೊಳಿಸಲು ಪ್ರಯತ್ನಿಸಿದ ವಂಚಕರು ಮತ್ತು ಅವರ ಸಹಚರರ ವಿರುದ್ಧ ಎನ್ ಬಿ ಇ ಎಂ ಎಸ್ ಪೊಲೀಸ್ ದೂರು ದಾಖಲಿಸಿದೆ

ನೀಟ್-ಪಿಜಿ 2024 ರ ಪ್ರಶ್ನೆ ಪತ್ರಿಕೆಗಳನ್ನು ಎನ್ ಬಿ ಇ ಎಂ ಎಸ್ ಇನ್ನೂ ಸಿದ್ಧಪಡಿಸಿಲ್ಲ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾಡಿದ ಸಂಭಾವ್ಯ ಪ್ರಶ್ನೆ ಪತ್ರಿಕೆ ಸೋರಿಕೆಯ ಹೇಳಿಕೆಗಳು ನಕಲಿ ಎಂದು ಎಲ್ಲಾ ಅಭ್ಯರ್ಥಿಗಳಿಗೆ ಭರವಸೆ ನೀಡಲಾಗಿದೆ

ಅಂತಹ ನೀತಿನಿಷ್ಠೆಗಳಿಲ್ಲದ ಶಕ್ತಿಗಳಿಂದ ದಾರಿ ತಪ್ಪದಂತೆ ಮತ್ತು ಅಂತಹ ಏಜೆಂಟರು ಸಂಪರ್ಕಿಸಿದರೆ ತಕ್ಷಣ ಎನ್ ಬಿ ಇ ಎಂ ಎಸ್ ಅಥವಾ ಸ್ಥಳೀಯ ಪೊಲೀಸರಿಗೆ ವರದಿ ಮಾಡಲು ಅರ್ಜಿದಾರರಿಗೆ ಸಲಹೆ

Posted On: 07 AUG 2024 7:13PM by PIB Bengaluru

ನೀಟ್ ಪಿಜಿ 2024 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಆರೋಪಿಸಿ ಕೆಲವು ಮಾಧ್ಯಮ ವರದಿಗಳು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಹೈಲೈಟ್ ಮಾಡುತ್ತಿವೆ. ಅಂತಹ ವರದಿಗಳು ಸುಳ್ಳು ಮತ್ತು ದಾರಿತಪ್ಪಿಸುವಂತಹವು.

ಟೆಲಿಗ್ರಾಮ್ ಮೆಸೆಂಜರ್ ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಕೆಲವು ನಿರ್ಲಜ್ಜ/ನೀತಿನಿಷ್ಠೆರಹಿತ ಏಜೆಂಟರು ಸುಳ್ಳು ಮತ್ತು ನಕಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ ಬಿ ಇ ಎಂ ಎಸ್) ಗಮನಕ್ಕೆ ಬಂದಿದೆ. ಮುಂಬರುವ ನೀಟ್-ಪಿಜಿ 2024 ಪರೀಕ್ಷೆಗೆ ನೀಟ್-ಪಿಜಿ 2024 ಪ್ರಶ್ನೆಗಳನ್ನು ಸಾಕಷ್ಟು ಮೊತ್ತದ ಹಣ ನೀಡಿದರೆ ಒದಗಿಸುವುದಾಗಿ ಕೆಲವರು (ಕೋಜೆನರ್ಗಳು) ಹೇಳಿಕೊಂಡಿದ್ದಾರೆ.

ನೀಟ್-ಪಿಜಿ 2024 ರ ಪ್ರಶ್ನೆಗಳನ್ನು ಒದಗಿಸುವ ಹೆಸರಿನಲ್ಲಿ ನೀಟ್-ಪಿಜಿ ಆಕಾಂಕ್ಷಿಗಳನ್ನು ಸಾಕಷ್ಟು ಮೊತ್ತದ ಹಣಕ್ಕಾಗಿ ಮೋಸಗೊಳಿಸಲು ಪ್ರಯತ್ನಿಸಿದ ಅಂತಹ ವಂಚಕರು ಮತ್ತು ಅವರ ಸಹಚರರ ವಿರುದ್ಧ ಎನ್ಬಿಇಎಂಎಸ್ ಈಗಾಗಲೇ ಪೊಲೀಸ್ ದೂರು ದಾಖಲಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರಸ್ತುತ ನೋಟಿಸ್ ಮೂಲಕ, "ನೀಟ್-ಪಿಜಿ ಸೋರಿಕೆಯಾದ ವಸ್ತು" ಎಂಬ ಶೀರ್ಷಿಕೆಯ ಟೆಲಿಗ್ರಾಮ್ ಚಾನೆಲ್ ಮಾಡಿದ ಅಂತಹ ಸುಳ್ಳು ಹೇಳಿಕೆಗಳನ್ನು ಎನ್ಬಿಇಎಂಎಸ್ ನಿರಾಕರಿಸುತ್ತದೆ ಮತ್ತು ಮುಂಬರುವ ನೀಟ್-ಪಿಜಿ 2024 ರ ಪ್ರಶ್ನೆಗಳು ಲಭ್ಯ ಇವೆ ಎಂದು ಹೇಳಿಕೊಳ್ಳುವ ಮೂಲಕ ಮೋಸಗೊಳಿಸಲು ಪ್ರಯತ್ನಿಸುತ್ತಿರುವ ಅಂತಹ ನಿರ್ಲಜ್ಜ ಶಕ್ತಿಗಳಿಂದ ಆಕರ್ಷಿತರಾಗಬೇಡಿ / ದಾರಿ ತಪ್ಪಬೇಡಿ ಎಂದು ನೀಟ್-ಪಿಜಿ 2024 ಗಾಗಿ ಅರ್ಜಿದಾರರಿಗೆ ಅದು ಎಚ್ಚರಿಕೆ ನೀಡಿದೆ.

ನೀಟ್-ಪಿಜಿ 2024 ರ ಪ್ರಶ್ನೆ ಪತ್ರಿಕೆಗಳನ್ನು ಎನ್ಬಿಇಎಂಎಸ್ ಇನ್ನೂ ಸಿದ್ಧಪಡಿಸಿಲ್ಲ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಮಾಡಿದ ಪ್ರಶ್ನೆ ಪತ್ರಿಕೆ ಸೋರಿಕೆಯ ಹೇಳಿಕೆಗಳು ನಕಲಿ ಎಂದು ಎಲ್ಲಾ ಅಭ್ಯರ್ಥಿಗಳಿಗೆ ಭರವಸೆ ನೀಡಲಾಗಿದೆ.

ಅಂತಹ ಯಾವುದೇ ಚಟುವಟಿಕೆಗಳಲ್ಲಿ ಯಾರಾದರೂ ನೇರವಾಗಿ ಅಥವಾ ಪರೋಕ್ಷವಾಗಿ ಪಾಲ್ಗೊಳ್ಳುವುದು ಅಥವಾ ಸತ್ಯಗಳನ್ನು ಪರಿಶೀಲಿಸದೆ ವದಂತಿಗಳನ್ನು ಪ್ರಕಟಿಸುವುದು / ಹರಡುವುದರ ಬಗ್ಗೆ  ಎನ್ಬಿಇಎಂಎಸ್ ಸೂಕ್ತ  ಕ್ರಮಗಳನ್ನು ಕೈಗೊಳ್ಳುತ್ತದೆ ಎಂದೂ ಸೂಚಿಸಲಾಗಿದೆ.

ಯಾವುದೇ ನಕಲಿ ಇ-ಮೇಲ್ಗಳು / ಎಸ್ಎಂಎಸ್ ಅಥವಾ ದೂರವಾಣಿ ಕರೆ ಅಥವಾ ನಕಲಿ ದಾಖಲೆಗಳ ಮೂಲಕ ಅಥವಾ ವೈಯಕ್ತಿಕವಾಗಿ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಎನ್ ಬಿ ಇ ಎಂ ಎಸ್ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವುದಾಗಿ ಭರವಸೆ ನೀಡುವ ಯಾವುದೇ ನಿರ್ಲಜ್ಜ ಏಜೆಂಟರು / ದಲ್ಲಾಳಿಗಳು ಅಭ್ಯರ್ಥಿಗಳನ್ನು ಸಂಪರ್ಕಿಸಿದರೆ, ಅದನ್ನು ಎನ್ ಬಿ ಇ ಎಂ ಎಸ್ ಗೆ  ಅದರ ಸಂವಹನ ಜಾಲ ತಾಣ (ವೆಬ್ ಪೋರ್ಟಲ್) :https://exam.natboard.edu.in/communication.php?page=main ಮೂಲಕ ಅಥವಾ ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೊಲೀಸರಿಗೆ ವರದಿ ಮಾಡಬಹುದು.

 

*****

 


(Release ID: 2043036) Visitor Counter : 56