ಪ್ರಧಾನ ಮಂತ್ರಿಯವರ ಕಛೇರಿ
ಎಲೆಕ್ಟ್ರಾನಿಕ್ಸ್ ಕ್ಷೇತ್ರದ ರಫ್ತಿನಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಎಲೆಕ್ಟ್ರಾನಿಕ್ಸ್ ಕ್ಷೇತ್ರದ ರಫ್ತಿನಲ್ಲಿ ಭಾರತವು ಅಗ್ರ ಮೂರು ಸ್ಥಾನಗಳಲ್ಲಿ ಒಂದಾಗಿದೆ
Posted On:
05 AUG 2024 3:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ರಫ್ತಿನಲ್ಲಿ ಭಾರತವು ಸಾಧಿಸಿದ ಪ್ರಗತಿಯ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತವು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ರಫ್ತಿನಲ್ಲಿ ಜಾಗತಿಕವಾಗಿ ಅಗ್ರ 3ನೇ ಸ್ಥಾನವನ್ನು ತಲುಪಿದೆ. ಶ್ರೀ ಮೋದಿಯವರು ಈ ಶ್ರೇಯಸ್ಸನ್ನು ಯುವ ಶಕ್ತಿಗೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ತೀವ್ರತೆಯನ್ನು ಮುಂದುವರಿಸಲು ಭಾರತವು ಬದ್ಧವಾಗಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು X ಪೋಸ್ಟ್ ನಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಈಗ ಅಗ್ರ 3ನೇ ಸ್ಥಾನ ಪಡೆದಿದೆ ಎಂದು ಮಾಹಿತಿ ನೀಡಿದರು. ಭಾರತದಿಂದ ಆಪಲ್ ಐಫೋನ್ ರಫ್ತಿನ ಹೆಚ್ಚಳದಿಂದಾಗಿ, ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನವು, ರತ್ನಗಳು ಮತ್ತು ಆಭರಣಗಳನ್ನು ಹಿಂದಿಕ್ಕಿ 2024-25ರ ಏಪ್ರಿಲ್-ಜೂನ್ ತ್ರೈಮಾಸಿಕದ ಅಂತ್ಯದ ವೇಳೆಗೆ ಭಾರತದ ಅಗ್ರ 10 ರಫ್ತುಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯು ಪ್ರಕಟಿಸಿದ ಸುದ್ದಿ ಲೇಖನವನ್ನು X ನಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರ X ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು;
"ಇದು ನಿಜಕ್ಕೂ ಅಪಾರವಾಗಿ ಸಂತೋಷ ನೀಡುವ ವಿಷಯವಾಗಿದೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತದ ಪರಾಕ್ರಮವು ನಮ್ಮ ನವೀನ ಯುವ ಶಕ್ತಿಯಿಂದ ಪ್ರೇರೇಪಿತವಾಗಿದೆ. ಸುಧಾರಣೆಗಳು ಮತ್ತು @makeinindia ಚಳುವಳಿಗೆ ಒತ್ತು ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ."
"ಮುಂಬರುವ ದಿನಗಳಲ್ಲಿ ಈ ವೇಗವನ್ನು ತೀವ್ರಗೊಳಿಸಲು ಭಾರತವು ಬದ್ಧವಾಗಿದೆ" ಎಂದು ಹೇಳಿದ್ದಾರೆ.
*****
(Release ID: 2042015)
Visitor Counter : 46
Read this release in:
Odia
,
Tamil
,
English
,
Urdu
,
Marathi
,
Hindi
,
Hindi_MP
,
Manipuri
,
Assamese
,
Bengali
,
Punjabi
,
Gujarati
,
Telugu
,
Malayalam