ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ಸಾಗರ್ ನಲ್ಲಿ ಗೋಡೆ ಕುಸಿದು ಸಾವಿಗೀಡಾದವರಿಗೆ ಸಂತಾಪ ವ್ಯಕ್ತಪಡಿಸಿ, ಪರಿಹಾರವನ್ನು ಘೋಷಿಸಿದ ಪ್ರಧಾನಮಂತ್ರಿ
प्रविष्टि तिथि:
04 AUG 2024 6:47PM by PIB Bengaluru
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಗೋಡೆ ಕುಸಿದು ಒಂಬತ್ತು ಮಕ್ಕಳು ಸಾವನ್ನಪ್ಪಿದ ಅಹಿತಕರ ಘಟನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಮೃತರಾದ ಪ್ರತಿಯೊಬ್ಬರ ಕುಟುಂಬದ ಸನಿಹದ ಸಂಬಂಧಿಕರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿ.ಎಂ.ಎನ್.ಆರ್.ಎಫ್.) ರೂ. 2 ಲಕ್ಷಗಳ ಪರಿಹಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದರು, ಮತ್ತು ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗಾಗಿ ಪ್ರಾರ್ಥಿಸಿದರು.
ಪ್ರಧಾನಮಂತ್ರಿಯವರು ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:
"ಮಧ್ಯಪ್ರದೇಶದ ಸಾಗರ್ ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬದ ಸನಿಹದ ಸಂಬಂಧಿಕರಿಗೆ ಪ್ರಧಾನಮಂತ್ರಿಯವರು ಪಿ.ಎಂ.ಎನ್.ಆರ್.ಎಫ್.ನಿಂದ ರೂಪಾಯಿ 2 ಲಕ್ಷಗಳ ಪರಿಹಾರಧನವನ್ನು ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುವುದು."
"मध्य प्रदेश के सागर में दीवार गिरने से हुआ हादसा हृदयविदारक है। इसमें जान गंवाने वाले बच्चों के शोकाकुल परिजनों के प्रति मेरी संवेदनाएं। ईश्वर उन्हें इस पीड़ा को सहने की शक्ति प्रदान करे। इसके साथ ही मैं सभी घायलों के शीघ्र स्वस्थ होने की कामना करता हूं: ಪ್ರಧಾನಮಂತ್ರಿ".
*****
(रिलीज़ आईडी: 2041993)
आगंतुक पटल : 71
इस विज्ञप्ति को इन भाषाओं में पढ़ें:
English
,
Urdu
,
Hindi_MP
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam