ಗಣಿ ಸಚಿವಾಲಯ
azadi ka amrit mahotsav

ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಅಲ್ಯೂಮಿನಿಯಂ ಉತ್ಪಾದಿಸುವ ರಾಷ್ಟ್ರವಾಗಿದೆ


ಹಣಕಾಸು ವರ್ಷ 2024-25 ರ ಮೊದಲ ತ್ರೈಮಾಸಿಕ ದಲ್ಲಿ ಬೆಳವಣಿಗೆಯ ಹಾದಿಯಲ್ಲಿ ಖನಿಜ ಉತ್ಪಾದನೆ

ಈ ವರ್ಷ ಪ್ರಮುಖ ಖನಿಜಗಳು ಮತ್ತು ಅಲ್ಯೂಮಿನಿಯಂ ಲೋಹದ ಉತ್ಪಾದನೆಯಲ್ಲಿ ದೃಢವಾದ ಬೆಳವಣಿಗೆ

Posted On: 01 AUG 2024 12:12PM by PIB Bengaluru

ದೇಶದ ಪ್ರಮುಖ ಖನಿಜಗಳಾದ ಕಬ್ಬಿಣದ ಅದಿರು ಮತ್ತು ಸುಣ್ಣದಕಲ್ಲುಗಳ ಉತ್ಪಾದನೆಯು ಹಣಕಾಸು ವರ್ಷ 2023-24 ರಲ್ಲಿ ದಾಖಲೆಯ ಉತ್ಪಾದನಾ ಮಟ್ಟವನ್ನು ತಲುಪಿದ ನಂತರ ಹಣಕಾಸು ವರ್ಷ 2024-25 ರ ಮೊದಲ ತ್ರೈಮಾಸಿಕದ (Q1)ದಲ್ಲಿ ದೃಢವಾದ ಬೆಳವಣಿಗೆಯ ಪ್ರದರ್ಶನವನ್ನು ಮುಂದುವರೆಸಿದೆ. ಕಬ್ಬಿಣದ ಅದಿರು ಮತ್ತು ಸುಣ್ಣದಕಲ್ಲು ಮೌಲ್ಯದ ಪ್ರಕಾರ ಒಟ್ಟು ಎಂಸಿಡಿಆರ್  ಖನಿಜ ಉತ್ಪಾದನೆಯ ಸುಮಾರು 80% ನಷ್ಟಿದೆ. ಹಣಕಾಸು ವರ್ಷ 2023-24 ರಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯು 275 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಮತ್ತು ಸುಣ್ಣದ ಕಲ್ಲು 450 ಎಂಎಂಟಿ ಆಗಿತ್ತು.

ತಾತ್ಕಾಲಿಕ ಮಾಹಿತಿಯ ಪ್ರಕಾರ, ನಾನ್-ಫೆರಸ್ ಲೋಹದ ವಲಯದಲ್ಲಿ, ಹಣಕಾಸು ವರ್ಷ 2024-25 (ಏಪ್ರಿಲ್-ಜೂನ್) ರಲ್ಲಿ ಪ್ರಾಥಮಿಕ ಅಲ್ಯೂಮಿನಿಯಂ ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಯಲ್ಲಿ 1.2% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು 2023-24 (ಏಪ್ರಿಲ್-ಜೂನ್) ಹಣಕಾಸು ವರ್ಷದಲ್ಲಿ 10.28 ಲಕ್ಷ ಟನ್ ಗಳಷ್ಟಿತ್ತು (ಎಲ್ ಟಿ), ಇದು 2024-25 (ಏಪ್ರಿಲ್-ಜೂನ್) ಹಣಕಾಸು ವರ್ಷದಲ್ಲಿ 10.43 ಲಕ್ಷ ಟನ್ ಗಳಿಗೆ ಏರಿಕೆಯಾಗಿದೆ.

ಭಾರತವು ಎರಡನೇ ಅತಿದೊಡ್ಡ ಅಲ್ಯೂಮಿನಿಯಂ ಉತ್ಪಾದಿಸುವ ದೇಶವಾಗಿದ್ದು, 3 ನೇ ಅತಿದೊಡ್ಡ ಸುಣ್ಣ ಮತ್ತು 4 ನೇ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಿಸುವ ದೇಶವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಬ್ಬಿಣದ ಅದಿರು ಮತ್ತು ಸುಣ್ಣದಕಲ್ಲಿನ ಉತ್ಪಾದನೆಯಲ್ಲಿ ಮುಂದುವರಿದ ಬೆಳವಣಿಗೆಯು ಇವನ್ನು ಬಳಸುವ ಉಕ್ಕು ಮತ್ತು ಸಿಮೆಂಟ್ ಕೈಗಾರಿಕೆಗಳ ದೃಢವಾದ ಬೇಡಿಕೆಯ ಪರಿಸ್ಥಿತಿಗಳನ್ನು ಬಿಂಬಿಸುತ್ತದೆ. ಜೊತೆಗೆ ಅಲ್ಯೂಮಿನಿಯಂನಲ್ಲಿನ ಬೆಳವಣಿಗೆಯೊಂದಿಗೆ,  ಈ ಬೆಳವಣಿಗೆಯ ಪ್ರವೃತ್ತಿಗಳು ಇಂಧನ, ಮೂಲಸೌಕರ್ಯ, ನಿರ್ಮಾಣ, ವಾಹನ ಮತ್ತು ಯಂತ್ರೋಪಕರಣಗಳಂತಹ ಬಳಕೆದಾರ ವಲಯಗಳಲ್ಲಿ ನಿರಂತರವಾದ ಬಲವಾದ ಆರ್ಥಿಕ ಚಟುವಟಿಕೆಯನ್ನು ಸೂಚಿಸುತ್ತವೆ.

ಕಬ್ಬಿಣದ ಅದಿರಿನ ಉತ್ಪಾದನೆಯು ಹಣಕಾಸು ವರ್ಷ 2023-24 (ಏಪ್ರಿಲ್-ಜೂನ್) ರಲ್ಲಿ 72 ಎಂಎಂಟಿಯಿಂದ ಹಣಕಾಸು ವರ್ಷ 2024-25 (ಏಪ್ರಿಲ್-ಜೂನ್)ರಲ್ಲಿ 79 ಎಂಎಂಟಿ ಗೆ ಹೆಚ್ಚಾಗಿದೆ, ಇದು 9.7% ಬೆಳವಣಿಗೆಯನ್ನು ತೋರಿಸುತ್ತದೆ. ಸುಣ್ಣದಕಲ್ಲು ಉತ್ಪಾದನೆಯು ಹಣಕಾಸು ವರ್ಷ 2023-24 (ಏಪ್ರಿಲ್-ಜೂನ್) ನಲ್ಲಿ 114 ಎಂಎಂಟಿಯಿಂದ ಹಣಕಾಸು ವರ್ಷ 2024-25  (ಏಪ್ರಿಲ್-ಜೂನ್) ರಲ್ಲಿ 116 ಎಂಎಂಟಿ ಗೆ ಹೆಚ್ಚಾಗಿದೆ . ಇದು 1.8 ಶೇಕಡಾ ಬೆಳವಣಿಗೆಯನ್ನು ತೋರಿಸುತ್ತದೆ.

ಮ್ಯಾಂಗನೀಸ್ ಅದಿರು ಉತ್ಪಾದನೆಯು 2024-25 (ಏಪ್ರಿಲ್-ಜೂನ್) ಹಣಕಾಸು ವರ್ಷದಲ್ಲಿ 1.0 ಎಂಎಂಟಿಗೆ 11 ಪ್ರತಿಶತದಷ್ಟು ಹೆಚ್ಚಾಗಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ ಇದು 0.9 ಎಂಎಂಟಿ ಆಗಿತ್ತು.
 

*****


(Release ID: 2040522) Visitor Counter : 79