ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)
azadi ka amrit mahotsav

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸಿದೆ ಮತ್ತು ಭವಿಷ್ಯದ ಎಲ್ಲಾ ಪರೀಕ್ಷೆಗಳು/ಆಯ್ಕೆಗಳಿಂದ ಅವರನ್ನು ಶಾಶ್ವತವಾಗಿ ಡಿಬಾರ್ ಮಾಡಿದೆ


UPSC ಲಭ್ಯವಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಶ್ರೀಮತಿ ಖೇಡ್ಕರ್ ಅವರು ಎಸ್‌ಎಸ್ಐ-2022 ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ

UPSC, 2009 ರಿಂದ 2023 ರವರೆಗಿನ ಹದಿನೈದು ಸಾವಿರಕ್ಕೂ ಹೆಚ್ಚು ಶಿಫಾರಸು ಮಾಡಿದ ಅಭ್ಯರ್ಥಿಗಳ 15 ವರ್ಷಗಳ CSE ಡೇಟಾವನ್ನು ಪರಿಶೀಲಿಸಿದೆ

Posted On: 31 JUL 2024 3:18PM by PIB Bengaluru

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) 2022 ರ ನಾಗರಿಕ ಸೇವಾ ಪರೀಕ್ಷೆ(CSE ) ಯಲ್ಲಿ ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿ ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರಿಗೆ 18 ಜುಲೈ 2024 ರಂದು ಶೋಕಾಸ್ ನೋಟಿಸ್ (SCN) ಜಾರಿಯಾಗಿತ್ತು. ಪರೀಕ್ಷಾ ನಿಯಮಗಳ ಪ್ರಕಾರ ಅನುಮತಿಸಿದ್ದಕ್ಕಿಂತ ಹೆಚ್ಚು ಬಾರಿ ಪರೀಕ್ಷೆ ಬರೆಯಲು ತಮ್ಮ ಗುರುತನ್ನು ಬದಲಿಸಿದ ಆರೋಪದ ಮೇಲೆ ಈ ನೋಟಿಸ್ ನೀಡಲಾಗಿತ್ತು.  ಅವರು 25 ಜುಲೈ 2024ರೊಳಗೆ ನೋಟಿಸ್‌ಗೆ ಉತ್ತರ ನೀಡಬೇಕಿತ್ತು. ಆದರೆ, ಪ್ರತಿಕ್ರಿಯೆಗೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು 04 ಆಗಸ್ಟ್ 2024 ರವರೆಗೆ ಹೆಚ್ಚಿನ ಸಮಯ ಕೇಳಿದ್ದರು.

2.UPSC, ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಮನವಿಯನ್ನು ಪರಿಗಣಿಸಿ, ನ್ಯಾಯದ ದೃಷ್ಟಿಯಿಂದ ಅವರಿಗೆ ನೊಟೀಸ್‌ ಗೆ ಪ್ರತಿಕ್ರಿಯೆ ಸಲ್ಲಿಸಲು 30 ಜುಲೈ 2024 ರಂದು ಸಂಜೆ 3: 30 ರವರೆಗೆ ಸಮಯಾವಕಾಶ ನೀಡಲಾಯಿತು. ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರಿಗೆ ಇದು ಕೊನೆಯ ಮತ್ತು ಅಂತಿಮ ಅವಕಾಶವಾಗಿದ್ದು, ಇನ್ನು ಮುಂದೆ ಸಮಯ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು ಮೇಲಿನ ದಿನಾಂಕ / ಸಮಯದೊಳಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದರೆ UPSC ಅವರಿಂದ ಯಾವುದೇ ಹೆಚ್ಚಿನ ಉಲ್ಲೇಖವನ್ನು ತೆಗೆದುಕೊಳ್ಳದೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಅವರಿಗೆ ಸ್ಪಷ್ಟವಾದ ಪದಗಳಲ್ಲಿ ತಿಳಿಸಲಾಯಿತು . ತನಗೆ ಕಾಲಾವಕಾಶವನ್ನು ವಿಸ್ತರಿಸಿದ್ದರೂ , ನಿಗದಿತ ಸಮಯದೊಳಗೆ ಯಾವುದೇ ವಿವರಣೆಯನ್ನು ಸಲ್ಲಿಸಲಾಗಿಲ್ಲ. 

3.UPSC ಲಭ್ಯವಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದೆ ಮತ್ತು ಈ ಪ್ರಕರಣದಲ್ಲಿ CSE-2022 ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೂಜಾ ತಪ್ಪಿತಸ್ಥರೆಂದು ಕಂಡುಹಿಡಿದಿದೆ. CSE-2022 ಗಾಗಿ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗಿದೆ ಮತ್ತು UPSC ನಡೆಸುವ ಎಲ್ಲಾ ಭವಿಷ್ಯದ ಪರೀಕ್ಷೆಗಳು/ಆಯ್ಕೆ ಪ್ರಕ್ರಿಯೆಗಳಿಂದ ಅವರನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ.

4.ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಪ್ರಕರಣದ ಹಿನ್ನೆಲೆಯಲ್ಲಿ, UPSC 2009 ರಿಂದ 2023 ರವರೆಗಿನ 15 ವರ್ಷಗಳ CSE ಪರೀಕ್ಷೆಗಳಲ್ಲಿ ಅಂತಿಮವಾಗಿ ಶಿಫಾರಸು ಮಾಡಲಾದ 15, 000 ಕ್ಕೂ ಹೆಚ್ಚು ಅಭ್ಯರ್ಥಿಗಳ ಲಭ್ಯವಿರುವ ಮಾಹಿತಿಯನ್ನು ಮತ್ತು ಅವರು ಪ್ರಯತ್ನಿಸಿದ ಪ್ರಯತ್ನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಈ ವಿವರವಾದ ಪರಿಶೀಲನೆಯ ನಂತರ, ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಪ್ರಕರಣವನ್ನು ಬಿಟ್ಟರೆ, CSE ನಿಯಮಗಳ ಅಡಿಯಲ್ಲಿ ಅನುಮತಿಸಿದ್ದಕ್ಕಿಂತ ಹೆಚ್ಚಿನ ಪ್ರಯತ್ನಗಳನ್ನು ಮಾಡಿದ ಇತರ ಅಭ್ಯರ್ಥಿಗಳು ಕಂಡುಬಂದಿಲ್ಲ. ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಏಕೈಕ ಪ್ರಕರಣದಲ್ಲಿ , UPSC ಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ( SOP ) ಗೆ ಆಕೆಯ ಪ್ರಯತ್ನಗಳ ಸಂಖ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಮುಖ್ಯವಾಗಿ ಅವರು ತಮ್ಮ ಹೆಸರನ್ನು ಮಾತ್ರವಲ್ಲದೆ ಅವರ ಪೋಷಕರ ಹೆಸರನ್ನು ಸಹ ಬದಲಾಯಿಸಿದ್ದಾರೆ . ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ SOP ಯನ್ನು ಬಲಪಡಿಸಲು UPSC ಸಿದ್ಧತೆ ನಡೆಸಿದೆ . 

5.ಸುಳ್ಳು ಪ್ರಮಾಣಪತ್ರಗಳ (ನಿರ್ದಿಷ್ಟವಾಗಿ OBC ಮತ್ತು PwBD ವಿಭಾಗಗಳು) ಸಲ್ಲಿಕೆಗೆ ಸಂಬಂಧಿಸಿದ ದೂರುಗಳಿಗೆ ಸಂಬಂಧಿಸಿದಂತೆ, UPSCಯು ಪ್ರಮಾಣಪತ್ರಗಳ ಪ್ರಾಥಮಿಕ ಪರಿಶೀಲನೆಯನ್ನು ಮಾತ್ರ ನಡೆಸುತ್ತದೆ ಎಂದು ಸ್ಪಷ್ಟಪಡಿಸಲು ಬಯಸುತ್ತದೆ.  ಅಂದರೆ, ಪ್ರಮಾಣಪತ್ರವನ್ನು ಸಮರ್ಥ ಅಧಿಕಾರಿಯಿಂದ ನೀಡಲಾಗಿದೆಯೇ, ಪ್ರಮಾಣಪತ್ರ ಯಾವ ವರ್ಷಕ್ಕೆ ಸಂಬಂಧಿಸಿದೆ, ಪ್ರಮಾಣಪತ್ರ ನೀಡುವ ದಿನಾಂಕ, ಪ್ರಮಾಣಪತ್ರದಲ್ಲಿ ಯಾವುದೇ ತಿದ್ದುಪಡಿ ಇದೆಯೇ, ಪ್ರಮಾಣಪತ್ರದ ಸ್ವರೂಪ ಇತ್ಯಾದಿಗಳನ್ನು ಪರಿಶೀಲಿಸುತ್ತದೆ. ಸಾಮಾನ್ಯವಾಗಿ , ಸಮರ್ಥ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನು ನೀಡಿದರೆ ಅದನ್ನು ಅಸಲಿ ಎಂದು ತೆಗೆದುಕೊಳ್ಳಲಾಗುತ್ತದೆ .  ಪ್ರತಿ ವರ್ಷ UPSCಗೆ ಸಲ್ಲಿಸುವ ಸಾವಿರಾರು ಪ್ರಮಾಣಪತ್ರಗಳ ದೃಢೀಕರಣವನ್ನು ಪರಿಶೀಲಿಸಲು ಆಯೋಗವು ಯಾವುದೇ ನಿಯಮಗಳು ಅಥವಾ ಸಾಧನಗಳನ್ನು ಹೊಂದಿಲ್ಲ. ಆದಾಗ್ಯೂ, ಪ್ರಮಾಣಪತ್ರಗಳ ನಿಜವಾದ ಪರಿಶೀಲನೆ ಮತ್ತು ಪರಿಶೋಧನೆಯನ್ನು ಆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ವಹಿಸಿದ್ದಾರೆ.

 

*****


(Release ID: 2040061) Visitor Counter : 44