ನೀತಿ ಆಯೋಗ

'ವಿಕಸಿತ ಭಾರತ (‘Viksit Bharat@2047') ಚಿಂತನೆಯನ್ನು ಉತ್ತೇಜಿಸಲು ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಪ್ರಧಾನಮಂತ್ರಿ


'ಅನುಕೂಲಕರ ಜೀವನ'ಕ್ಕೆ ಒತ್ತು ನೀಡುವ ಮೂಲಕ ಭವಿಷ್ಯದ ಅಭಿವೃದ್ಧಿಯನ್ನು ರೂಪಿಸುವತ್ತ ಗಮನ

Posted On: 26 JUL 2024 3:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜುಲೈ 27ರಂದು ಹೊಸದಿಲ್ಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವರ್ಷದ ಶೀರ್ಷಿಕೆ 'ವಿಕಸಿತ ಭಾರತ@2047', ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ಗಮನ ಹರಿಸಿದೆ.

ಆಡಳಿತ ಮಂಡಳಿ ಸಭೆಯಲ್ಲಿ ವಿಕಸಿತ ಭಾರತ @2047 ಕುರಿತ ವಿಷನ್ ಡಾಕ್ಯುಮೆಂಟ್ ಧೋರಣಾ ಮಾಹಿತಿ ಪತ್ರಿಕೆಯ (ಅಪ್ರೋಚ್ ಪೇಪರ್ ) ಬಗ್ಗೆ ಚರ್ಚಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಭಾಗಿತ್ವದ ಆಡಳಿತ ಮತ್ತು ಸಹಯೋಗವನ್ನು ಉತ್ತೇಜಿಸುವುದು, ಸರ್ಕಾರದ ಮಧ್ಯಸ್ಥಿಕೆಗಳ ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಗ್ರಾಮೀಣ ಮತ್ತು ನಗರ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು ವಿಕ್ಷಿತ್ ಭಾರತ್ ಸಭೆಯ ಉದ್ದೇಶವಾಗಿದೆ. 2047 ರ ಗುರಿಯನ್ನು ಸಾಧಿಸುವಲ್ಲಿ ರಾಜ್ಯಗಳ ಪಾತ್ರದ ಬಗ್ಗೆ ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆಯಲಿವೆ.

ಜಿಡಿಪಿ 5 ಟ್ರಿಲಿಯನ್ ಯುಎಸ್ ಡಾಲರ್ ದಾಟುವುದರೊಂದಿಗೆ ಮತ್ತು 2047 ರ ವೇಳೆಗೆ 30 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆಯನ್ನು ತಲುಪುವ ಆಕಾಂಕ್ಷೆಯೊಂದಿಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. 2047 ರ ವೇಳೆಗೆ 'ವಿಕಸಿತ ಭಾರತ' ಚಿಂತನೆಯನ್ನುಸಾಕಾರಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಯೋಗದ ವಿಧಾನದ ಅಗತ್ಯವಿದೆ. 9 ನೇ ಆಡಳಿತ ಮಂಡಳಿ ಸಭೆ ದೃಷ್ಟಿಕೋನಕ್ಕಾಗಿ ಮಾರ್ಗಸೂಚಿಯನ್ನು ರಚಿಸುವ ಗುರಿಯನ್ನು ಹೊಂದಿದೆ, ಕೇಂದ್ರ ಮತ್ತು ರಾಜ್ಯಗಳ ನಡುವೆ 'ಟೀಮ್ ಇಂಡಿಯಾ' ಆಗಿ ತಂಡ ಕೆಲಸವನ್ನು ಉತ್ತೇಜಿಸುತ್ತದೆ.

ನೀತಿ ಆಯೋಗದ ಆಡಳಿತ ಮಂಡಳಿಯು 2023 ರ ಡಿಸೆಂಬರ್ 27-29 ರ ನಡುವೆ ನಡೆದ ಮುಖ್ಯ ಕಾರ್ಯದರ್ಶಿಗಳ 3 ನೇ ರಾಷ್ಟ್ರೀಯ ಸಮ್ಮೇಳನದ ಶಿಫಾರಸುಗಳ ಬಗ್ಗೆಯೂ ಗಮನ ಹರಿಸಲಿದೆ. 'ಜೀವನಕ್ಕೆ ಅನುಕೂಲಕರ ವ್ಯವಸ್ಥೆ- ಸುಗಮ ಜೀವನ' ಎಂಬ ವಿಷಯದ ಅಡಿಯಲ್ಲಿ, ಮುಖ್ಯ ಕಾರ್ಯದರ್ಶಿಗಳ 3 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕೆಳಗಿನ ಐದು ಪ್ರಮುಖ ವಿಷಯಗಳ ಬಗ್ಗೆ ಶಿಫಾರಸುಗಳನ್ನು ಮಾಡಲಾಗಿದೆ:

1. ಕುಡಿಯುವ ನೀರು: ಲಭ್ಯತೆ, ಪ್ರಮಾಣ ಮತ್ತು ಗುಣಮಟ್ಟ

2. ವಿದ್ಯುತ್: ಗುಣಮಟ್ಟ, ದಕ್ಷತೆ ಮತ್ತು ವಿಶ್ವಾಸಾರ್ಹತೆ

3. ಆರೋಗ್ಯ: ಲಭ್ಯತೆ, ಕೈಗೆಟುಕುವಿಕೆ ಮತ್ತು ಆರೈಕೆಯ ಗುಣಮಟ್ಟ

4. ಶಾಲಾ ಶಿಕ್ಷಣ: ಲಭ್ಯತೆ ಮತ್ತು ಗುಣಮಟ್ಟ

5. ಭೂಮಿ ಮತ್ತು ಆಸ್ತಿ: ಲಭ್ಯತೆ, ಡಿಜಿಟಲೀಕರಣ, ನೋಂದಣಿ ಮತ್ತು ರೂಪಾಂತರ/ಬದಲಾವಣೆ

 

ಇದಲ್ಲದೆ, ಸೈಬರ್ ಭದ್ರತೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್ ಗಳ ಕಾರ್ಯಕ್ರಮ, ರಾಜ್ಯಗಳ ಪಾತ್ರ ಮತ್ತು ಆಡಳಿತದಲ್ಲಿ ಎಐ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನಗಳನ್ನು ಸಹ ನಡೆಸಲಾಗಿತ್ತು, ಇದನ್ನು ಮುಖ್ಯ ಕಾರ್ಯದರ್ಶಿಗಳ 3 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚಿಸಲಾಗಿತ್ತು.

ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯ ಸಿದ್ಧತೆಗಾಗಿ, 3 ನೇ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನವು 2023 ರ ಡಿಸೆಂಬರ್ ಅಂತ್ಯದಲ್ಲಿ ನಡೆದಿತ್ತು, ಆ ಸಮಯದಲ್ಲಿ ಐದು ಪ್ರಮುಖ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆದವು. ಭಾರತ ಸರ್ಕಾರದ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ವಿಕಸಿತ ಭಾರತ ಚೌಕಟ್ಟನ್ನು ವ್ಯಾಖ್ಯಾನಿಸುವ ಮತ್ತು ಅದರ ಕಾರ್ಯಸೂಚಿಗೆ ಸಲಹೆಗಳನ್ನು ನೀಡುವ ಸಮಾಲೋಚನಾ ಪ್ರಕ್ರಿಯೆಯ ಭಾಗವಾಗಿದ್ದರು.

ಪ್ರಧಾನಮಂತ್ರಿಯವರು ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು, ಕೇಂದ್ರ ಸಚಿವರು ಪದನಿಮಿತ್ತ ಸದಸ್ಯರು ಹಾಗು ವಿಶೇಷ ಆಹ್ವಾನಿತರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಸದಸ್ಯರು ಇದರಲ್ಲಿ ಭಾಗವಹಿಸುವ ಇತರರಲ್ಲಿ ಸೇರಿದ್ದಾರೆ.

 

*****



(Release ID: 2037799) Visitor Counter : 8