ಹಣಕಾಸು ಸಚಿವಾಲಯ
azadi ka amrit mahotsav

ಅಪ್ರಾಪ್ತ ವಯಸ್ಕರಿಗೆ ಹೊಸ ಪಿಂಚಣಿ ಯೋಜನೆ 'ವಾತ್ಸಲ್ಯ' ಘೋಷಣೆ: ಹೆತ್ತವರು ಮತ್ತು ಪೋಷಕರ ಕೊಡುಗೆ


ಎನ್.ಪಿ.ಎಸ್.  ಪರಾಮರ್ಶೆಗೆ ಸಂಬಂಧಿಸಿದ ಸಮಿತಿಯ ಕೆಲಸದಲ್ಲಿ ಗಣನೀಯ ಪ್ರಗತಿ: ಹಣಕಾಸು ಸಚಿವರು

Posted On: 23 JUL 2024 12:47PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2024-25ರ ಕೇಂದ್ರ ಬಜೆಟ್ ನಲ್ಲಿ ಅಪ್ರಾಪ್ತ ವಯಸ್ಕರಿಗೆ 'ವಾತ್ಸಲ್ಯ' ಎಂಬ ಹೊಸ ಪಿಂಚಣಿ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

ದೇಣಿಗೆಯನು ಒಳಗೊಂಡ ಪಿಂಚಣಿ ಯೋಜನೆ ಇದಾಗಿದ್ದು ಹೆತ್ತವರು ಮತ್ತು ಪೋಷಕರ ಕೊಡುಗೆಯನ್ನು ಹೊಂದಿರುತ್ತದೆ. ವಯಸ್ಕರು ಎಂದು ಪರಿಗಣಿಸಲಾಗುವ  ವಯಸ್ಸನ್ನು ತಲುಪಿದ ನಂತರ, ಯೋಜನೆಯನ್ನು ಸಾಮಾನ್ಯ ಎನ್.ಪಿ.ಎಸ್. ಖಾತೆಯಾಗಿ ಪರಿವರ್ತಿಸಬಹುದು.

ಎನ್.ಪಿ.ಎಸ್ ಮರುಪರಿಶೀಲಿಸುವ ಸಮಿತಿಯು ತನ್ನ ಕೆಲಸದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಸಚಿವರು ಘೋಷಿಸಿದರು. ಕೇಂದ್ರ ಸರ್ಕಾರಿ ನೌಕರರ ಜಂಟಿ ಸಮಾಲೋಚನಾ ವ್ಯವಸ್ಥೆಯ ರಾಷ್ಟ್ರೀಯ ಮಂಡಳಿಯ ಸಿಬ್ಬಂದಿ ವಿಭಾಗವು ರಚನಾತ್ಮಕ ವಿಧಾನವನ್ನು ಅನುಸರಿಸಿದೆ.  “ಹಣಕಾಸಿನ ವಿವೇಚನೆಯನ್ನು ಕಾಪಾಡಿಕೊಳ್ಳುವಾಗ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ವಿಧಾನವನ್ನು  ರೂಪಿಸಲಾಗುವುದು" ಎಂದು ಸಚಿವರು ಮಾಹಿತಿ ನೀಡಿದರು.

 

*****


(Release ID: 2036784) Visitor Counter : 105