ಹಣಕಾಸು ಸಚಿವಾಲಯ

ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಪ್ರಕಾಶಮಾನವಾಗಿ ಮುಂದುವರಿಕೆ


ಈ ವರ್ಷದ ಬಜೆಟ್ ನಲ್ಲಿ 9 ಆದ್ಯತಾ ವಲಯಗಳಿಗೆ ಒತ್ತು- ಶ್ರೀಮತಿ ನಿರ್ಮಲಾ ಸೀತಾರಾಮನ್

2021ರಲ್ಲಿ ಪ್ರಕಟಿಸಲಾದ ಆರ್ಥಿಕ  ಬಲರ್ವಧನೆ ಮಾರ್ಗ ನಮ್ಮ ಅರ್ಥಿಕತೆಗೆ ಚೆನ್ನಾಗಿ ಸೇವೆ ಸಲ್ಲಿಸಿದೆ  -ಹಣಕಾಸು ಸಚಿವರು

ವಿತ್ತೀಯ ಬಲವರ್ಧನೆ ಮಾರ್ಗದಲ್ಲಿಯೇ ಮುಂದುವರಿಯಲು ಸರ್ಕಾರ ಬದ್ಧವಿದೆ

Posted On: 23 JUL 2024 1:14PM by PIB Bengaluru

ಸಂಸತ್ತಿನಲ್ಲಿ ಇಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಜಾಗತಿಕ ಆರ್ಥಿಕತೆ ನಿರೀಕ್ಷೆಗಿಂತ ಉತ್ತಮ ಸಾಧನೆ ತೋರಿದೆ, ಆದರೆ ಕೆಲವು ನೀತಿ ಅನಿಶ್ಚಿತೆಗಳ ಸುಳಿಯಲ್ಲಿ ಸಿಲುಕಿದೆ ಎಂದರು. ಆಸ್ತಿಗಳ ಬೆಲೆ ಏರಿಕೆಗಳು, ರಾಜಕೀಯ ಅನಿಶ್ಚಿತತೆಗಳು ಮತ್ತು ಶಿಪ್ಪಿಂಗ್ ಅಡೆತಡೆಗಳು ಬೆಳವಣಿಗೆಗೆ ಗಮನಾರ್ಹವಾದ ತೊಂದರೆಯ ಅಪಾಯಗಳನ್ನು ಮತ್ತು ಹಣದುಬ್ಬರದ ಮೇಲಿನ ಅಪಾಯಗಳನ್ನು ಉಂಟುಮಾಡುವುದನ್ನು ಮುಂದುವರೆಸುತ್ತಿವೆ. ಆದರ ಹೊರತಾಗಿಯೂ ಸಹ ಭಾರತದ ಆರ್ಥಿಕ ಬೆಳವಣಿಗೆಯು ಪ್ರಕಾಶಮಾನವಾಗಿ ಮುಂದುವರಿದಿದೆ ಮತ್ತು ಮುಂದಿನ ವರ್ಷಗಳಲ್ಲಿ ಹಾಗೆಯೇ ಇರುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.

2024-25ರ ಕೇಂದ್ರ ಬಜೆಟ್‌ನ ವೈಶಿಷ್ಟ್ಯಗಳನ್ನು ವಿವರಿಸುತ್ತಾ ಶ್ರೀಮತಿ ನಿರ್ಮಲಾ ಸೀತಾರಾಮನ್,  ಈ ಬಜೆಟ್ ಪರಿವರ್ತಕ ಬದಲಾವಣೆಗಳ ಸಂಭಾವ್ಯತೆಯೊಂದಿಗೆ 9 ಆದ್ಯತೆಯ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ ಎಂದು ಹೇಳಿದರು. ವಿಕಸಿತ ಭಾರತದ ಗುರಿಯನ್ನು ತ್ವರಿತವಾಗಿ ತಲುಪಲು ಅವುಗಳನ್ನು ಬಲಪಡಿಸುವ ಮತ್ತು ಅವುಗಳ ಅನುಷ್ಠಾನವನ್ನು ಹೆಚ್ಚಿಸುವ ಉದ್ದೇಶದಿಂದ ಈ ಹಿಂದೆ ಮಾಡಿದ ಕೆಲವು ಘೋಷಣೆಗಳನ್ನು ಬಜೆಟ್ ಒಳಗೊಂಡಿದೆ. ಈ 9 ಆದ್ಯತೆಯ ಕ್ಷೇತ್ರಗಳಲ್ಲಿ ಇವು ಸೇರಿವೆ:

1) ಕೃಷಿ ವಲಯದಲ್ಲಿ ಇಳುವರಿ ಮತ್ತು ಚೇತರಿಕೆ

2) ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ

3) ಸಮಗ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ

4) ಉತ್ಪಾದನೆ ಮತ್ತು ಸೇವೆಗಳು

5) ನಗರಾಭಿವೃದ್ಧಿ

6) ಇಂಧನ ಭದ್ರತೆ

7)ಮೂಲಸೌಕರ್ಯ

8) ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ

9) ಮುಂದಿನ ಪೀಳಿಗೆಯ ಸುಧಾರಣೆಗಳು

ಮುಂದಿನ ಬಜೆಟ್‌ಗಳನ್ನು ಇವುಗಳ ಆಧಾರದ ಮೇಲೆ ರೂಪಿಸಲಾಗುವುದು ಮತ್ತು ಹೆಚ್ಚಿನ ಆದ್ಯತೆಗಳು ಮತ್ತು ಕ್ರಮಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಅವರು ಹೇಳಿದರು. 'ಆರ್ಥಿಕ ನೀತಿ ಚೌಕಟ್ಟಿನ' ಭಾಗವಾಗಿ ಹೆಚ್ಚು ವಿವರವಾದ ಸೂತ್ರೀಕರಣವನ್ನು ಸಹ ಕೈಗೊಳ್ಳಲಾಗುತ್ತದೆ ಎಂದರು.

2024-25ರ ಬಜೆಟ್ ಅಂದಾಜುಗಳ ವಿವರಗಳನ್ನು ನೀಡಿದ ಅವರು, ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿ ಮತ್ತು ಒಟ್ಟು ವೆಚ್ಚ ಕ್ರಮವಾಗಿ  32.07 ಲಕ್ಷ ಕೋಟಿ ರೂ. ಮತ್ತು 48.21 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದರು. ನಿವ್ವಳ ತೆರಿಗೆ ಸ್ವೀಕೃತಿಗಳು 25.83 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇ.4.9 ಎಂದು ಅಂದಾಜಿಸಲಾಗಿದೆ. 2024-25ರಲ್ಲಿ ದಿನಾಂಕದ ಸೆಕ್ಯೂರಿಟಿಗಳ ಮೂಲಕ ಒಟ್ಟು ಮತ್ತು ನಿವ್ವಳ ಮಾರುಕಟ್ಟೆ ಸಾಲವನ್ನು ಕ್ರಮವಾಗಿ 14.01 ಲಕ್ಷ ಕೋಟಿ ರೂ. ಮತ್ತು 11.63 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇವೆರಡೂ 2023-24ರಲ್ಲಿ  ಇದ್ದುದಕ್ಕಿಂತ ಕಡಿಮೆಯಾಗಿರುತ್ತದೆ.

2021 ರಲ್ಲಿ ಘೋಷಿಸಲಾದ ಅರ್ಥಿಕ ಬಲವರ್ಧನೆಯ ಮಾರ್ಗವು ಆರ್ಥಿಕತೆಗೆ ಉತ್ತಮವಾಗಿ ಸೇವೆ ಸಲ್ಲಿಸಿದೆ ಮತ್ತು ಮುಂದಿನ ವರ್ಷ ಶೇಕಡಾ 4.5 ಕ್ಕಿಂತ ವಿತ್ತೀಯ ಕೊರತೆಯನ್ನು ತಲುಪುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ಹಾದಿಯಲ್ಲಿ ಉಳಿಯಲು ಸರ್ಕಾರ ಬದ್ಧವಾಗಿದೆ. 2026-27 ರಿಂದ, ಪ್ರತಿ ವರ್ಷ ವಿತ್ತೀಯ ಕೊರತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು, ಅಂದರೆ ಕೇಂದ್ರ ಸರ್ಕಾರದ ಸಾಲವು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಇಳಿಕೆಯ ಹಾದಿಯಲ್ಲಿದೆ.

 

*****



(Release ID: 2035782) Visitor Counter : 5