ಹಣಕಾಸು ಸಚಿವಾಲಯ
ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರವಾದರೂ ಭಾರತದ ತಲಾವಾರು ಇಂಗಾಲ ಹೊರಸೂಚುವಿಕೆ ಪ್ರಮಾಣ ಜಾಗತಿಕ ಸರಾಸರಿಯ ಮೂರನೇ ಒಂದು ಭಾಗದಷ್ಟಿದೆ
ಜಿ-20 ರಾಷ್ಟ್ರಗಳ ಪೈಕಿ ಎರಡು ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ರಾಷ್ಟ್ರ ಕೇವಲ ಭಾರತ : ಐಎಫ್ ಸಿ ವರದಿ
ಹೊರಸೂಸುವಿಕೆ ಪ್ರಮಾಣ ಕಡಿತಗೊಳಿಸುವ 2030ರ ಎನ್ ಡಿ ಸಿ ಗುರಿಯನ್ನು 11 ವರ್ಷ ಮುಂಚಿತವಾಗಿ ಸಾಧಿಸಿರುವ ರಾಷ್ಟ್ರ ಭಾರತ
ಹಸಿರು ಅನಿಲ ಹೊರಸೂಸುವಿಕೆಯನ್ನು ಆರ್ಥಿಕ ಪ್ರಗತಿಯಿಂದ ಯಶಸ್ವಿಯಾಗಿ ಬೇರ್ಪಡಿಸಿದ ಭಾರತ
ಜೀವ ಅಭಿಯಾನ: ಹವಾಮಾನ ಬದಲಾವಣೆ ನಿಗ್ರಹಕ್ಕೆ ಮತ್ತು ಸುಸ್ಥಿರ ಜೀವನ ಪೋಷಣೆಗೆ ಸಮೂಹ ಚಳುವಳಿ
ಹವಾಮಾನ ಬದಲಾವಣೆ ನಿಗ್ರಹ ಮತ್ತು ಸ್ಥಿತಿಸ್ಥಾಪಕತ್ವ ನಿರ್ಮಾಣದತ್ತ ಭಾರತದಿಂದ ಹಲವು ಮುಂಚೂಣಿ ಅಂತಾರಾಷ್ಟ್ರೀಯ ಉಪಕ್ರಮಗಳು
Posted On:
22 JUL 2024 2:21PM by PIB Bengaluru
ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರವಾದರೂ ಕೂಡ, ಭಾರತದ ವಾರ್ಷಿಕ ತಲಾವಾರು ಇಂಗಾಲಾಮ್ಲ ಹೊರಸೂಸುವಿಕೆ ಪ್ರಮಾಣ ಜಾಗತಿಕ ಸರಾಸರಿಯ ಕೇವಲ ಮೂರನೇ ಒಂದು ಭಾಗದಷ್ಟಿದೆ ಎಂಬುದನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ ಆರ್ಥಿಕ ಸಮೀಕ್ಷೆ 2023-24 ತಿಳಿಸುತ್ತದೆ.
ಹವಾಮಾನ ಬದಲಾವಣೆ ನಿಗ್ರಹ ಸಂಬಂಧ ಭಾರತದ ಸಾಧನೆಗಳ ಬಗ್ಗೆ ಇನ್ನಷ್ಟು ಒಳಹೊಕ್ಕು, ಅಂತಾರಾಷ್ಟ್ರೀಯ ಹಣಕಾಸು ನಿಗಮದ ಇತ್ತೀಚಿನ ವರದಿಯನ್ನು ಈ ಸಮೀಕ್ಷೆ ಉಲ್ಲೇಖಿಸುತ್ತದೆ. ಈ ವರದಿಯು ಜಿ-20 ರಾಷ್ಟ್ರಗಳ ಪೈಕಿ ಭಾರತ ಮಾತ್ರ ಎರಡು ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದ ಗುರಿಯ ಸಾಲಿನಲ್ಲಿರುವ ರಾಷ್ಟ್ರ ಎಂದು ತಿಳಿಸಿದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಜೊತೆ ಜೊತೆಗೇ ಅಭಿವೃದ್ಧಿ ಆದ್ಯತೆಗಳಿಗೂ ಗಮನಹರಿಸುವುದು ಭಾರತದ ಪ್ರಗತಿಯ ತಂತ್ರಗಾರಿಕೆಯ ಮುದ್ರೆಯಾಗಿದೆ ಎಂದೂ ಸಮೀಕ್ಷೆ ಹೇಳಿದೆ.
ಹವಾಮಾನ ಬದಲಾವಣೆ ನಿಗ್ರಹಕ್ಕೆ ಭಾರತದ ಮಹತ್ವದ ಪ್ರಗತಿ
ಮೊದಲ ಎನ್ ಡಿ ಸಿ ಯ ಗುರಿಯನ್ನು ಭಾರತ ಅವಧಿಗೂ ಮುನ್ನವೇ ಸಾಧಿಸಿದೆ. 2021 ರಲ್ಲಿ ಪಳೆಯುಳಿಕೆ ರಹಿತ ಇಂಧನ ಆಧಾರಿತ ಸಂಪನ್ಮೂಳಗಳಿಂದ ಶೇಕಡ 40 ರಷ್ಟು ಸಂಚಿತ ವಿದ್ಯುತ್ ಸಾಮರ್ಥ್ಯ ಸ್ಥಾಪನೆಯನ್ನು ಸಾಧಿಸಿದೆ ಮತ್ತು ಹೊರಸೂಸುವಿಕೆ ಪ್ರಮಾಣವನ್ನು 2019 ರಲ್ಲಿ ಭಾರತದ ಜಿಡಿಪಿಯ 2005ರ ಮಟ್ಟಕ್ಕಿಂತ ಶೇಕಡ 33 ರಷ್ಟು ಕಡಿತ ಸಾಧಿಸಿದೆ. ಅಂದರೆ ಕ್ರಮವಾಗಿ 2030ರ ಗುರಿಯ ಅವಧಿಗೂ 9 ಮತ್ತು 11 ವರ್ಷಗಳ ಮುನ್ನವೇ ಗುರಿ ಸಾಧಿಸಿದೆ.
ಮುಂದುವರಿದು, 2024ರ ಮೇ 31 ರ ವೇಳೆಗೆ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಪೈಕಿ ಪಳೆಯುಳಿಕೆ ರಹಿತ ಇಂಧನದ ಪ್ರಮಾಣ 2014ರ ಏಪ್ರಿಲ್ ನಲ್ಲಿದ್ದ ಶೇಕಡ 32 ರ ಪ್ರಮಾಣದಿಂದ ಶೇಕಡ 45.4 ಕ್ಕೆ ಹೆಚ್ಚಿದೆ. 2030ರ ವೇಳೆಗೆ ಮರಗಳು ಮತ್ತು ಅರಣ್ಯಗಳ ವ್ಯಾಪ್ತಿಯನ್ನು ಹೆಚ್ಚಿಸಿ 2005 ರಿಂದ 2019ರವರೆಗೆ ಈಗಾಗಲೇ ಸೇರಲ್ಪಟ್ಟಿರುವ ಇಂಗಾಲಾಮ್ಲ ಸಮಾನವಾದ 1.97 ಶತಕೋಟಿ ಟನ್ ಹೀರಿಕೊಳ್ಳುವಿಕೆ ಸೇರಿದಂತೆ ಹೆಚ್ಚುವರಿಯಾಗಿ 2.5 ರಿಂದ 3 ಶತಕೋಟಿ ಟನ್ ನಷ್ಟು ಇಂಗಾಲಾಮ್ಲ ಹೀರುವಿಕೆಗೆ ಕೂಡ ಭಾರತ ಕಾರ್ಯೋನ್ಮುಖವಾಗಿದೆ.
2005 ಮತ್ತು 2019ರ ನಡುವೆ ಭಾರತದ ಜಿಡಿಪಿಯು ಸಂಯೋಜಿತ ವಾರ್ಷಿಕ ಪ್ರಗತಿ ದರ (ಸಿ ಎ ಜಿ ಆರ್) ನ ಶೇಕಡ 7 ರೊಂದಿಗೆ ಪ್ರಗತಿ ಸಾಧಿಸಿದರೆ, ಹೊರಸೂಸುವಿಕೆಗಳು ಸಿ ಎ ಜಿ ಆರ್ ನ ಶೇಕಡ 4 ರಷ್ಟಿದ್ದವು ಅಂದರೆ ಹೊರಸೂಸುವಿಕೆ ಬೆಳವಣಿಗೆ ಪ್ರಮಾಣವು ನಮ್ಮ ಜಿಡಿಪಿಯ ಪ್ರಗತಿ ದರಕ್ಕಿಂತ ಕಡಿಮೆ ಇದೆ. ಇದು ಜಿಡಿಪಿಯೊಂದಿಗೆ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುತ್ತಾ ಭಾರತವು ಹಸಿರು ಅನಿಲ ಹೊರಸೂಸುವಿಕೆಯಿಂದ ಆರ್ಥಿಕ ಪ್ರಗತಿಯನ್ನು ಯಶಸ್ವಿಯಾಗಿ ಬೇರ್ಪಡಿಸಿದೆ ಎಂಬುದನ್ನು ಸೂಚಿಸುತ್ತದೆ.
2015-16 ರಲ್ಲಿ ಜಿಡಿಪಿಯ ಶೇಕಡ 3.7 ರಷ್ಟಿದ್ದ ಭಾರತದ ಒಟ್ಟಾರೆ ಹೊಂದಾಣಿಕೆ ಸಂಬಂಧಿತ ವೆಚ್ಚಗಳು 2021-22 ರ ವೇಳೇಗೆ ಜಿಡಿಪಿಯ ಶೇಕಡ 5.6 ಕ್ಕೆ ಏರಿಕೆಯಾಗಿದೆ. ಇದು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹೊಂದಾಣಿಕೆಯ ಸಮಗ್ರತೆಯನ್ನು ಸೂಚಿಸುತ್ತದೆ.
ಕಡಿಮೆ ಇಂಗಾಲ ಅಭಿವೃದ್ಧಿ ಮತ್ತು ಇಂಧನ ಸಂಯೋಜನೆ
ಬೆಳೆಯುತ್ತಿರುವ ಆರ್ಥಿಕತೆಯ ಅಭಿವೃದ್ಧಿ ಆದ್ಯತೆಗಳಿಗೆ ಮತ್ತು ಆಶೋತ್ತರಗಳಿಗೆ 2047ರ ವೇಳೆಗೆ ಭಾರತದ ಇಂಧನ ಅಗತ್ಯಗಳು 2 ರಿಂದ 2.5 ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಸಂಪನ್ಮೂಲಗಳು ಸೀಮಿತವಾಗಿವೆ ಎಂಬುದನ್ನು ಪರಿಗಣಿಸಿ, ಇಂಧನ ಪರಿವರ್ತನೆಯ ವೇಗವು ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಸುಧಾರಣೆಗೆ ಮತ್ತು ಸುಸ್ಥಿರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಸಂಪನ್ಮೂಲಗಳ ಪರ್ಯಾಯ ಬೇಡಿಕೆಗಳು ಅಗತ್ಯ ಎಂಬುದನ್ನು ತಿಳಿಯಬೇಕಿದೆ.
ಇಂಧನ ಪರಿವರ್ತನೆಗೆ ಸವಾಲುಗಳು ಮತ್ತು ಮುಂದಿನ ಹಾದಿ
ಕಡಿಮೆ ಇಂಗಾಲದೊದಿಗೆ ಭಾರತದ ಅಭಿವೃದ್ಧಿಗೆ ವಿವಿಧ ಸವಾಲುಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಆರ್ಥಿಕ ಸಮೀಕ್ಷೆಯು ವಿಸ್ತಾರಗೊಳ್ಳುತ್ತಿರುವ ನವೀಕರಿಸಬಹುದಾದ ಇಂಧನ ಮತ್ತು ಶುದ್ಧ ಇಂಧನಗಳು ಭೂಮಿ ಮತ್ತು ನೀರಿನ ಬೇಡಿಕೆಯನ್ನು ಹೆಚ್ಚಿಸಲಿವೆ ಎಂದು ಹೇಳಿದೆ. ಬಹುತೇಕ ನವೀಕರಿಸಬಹುದಾದ ಇಂಧನಗಳು ಭೂಮಿ-ವ್ಯಾಪಿಯಾಗಿದ್ದಯ ಇತರ ಇಂಧನ ಸಂಪನ್ಮೂಲಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಭೂಮಿ ಬಳಕೆ ಅಗತ್ಯವಾಗಲಿದೆ. ಮುಂದುವರಿದು, ನವೀಕರಿಸಬಹುದಾದ ಇಂಧನಗಳ ವಿಸ್ತರಣೆಗೆ ಬ್ಯಾಟರಿ ಸಂಗ್ರಹ ತಂತ್ರಜ್ಞಾನ ಅಗತ್ಯವಾಗಲಿದ್ದು ಅವುಗಳಿಗೆ ನಿರ್ಣಾಯಕ ಖನಿಜಗಳ ಲಭ್ಯತೆ ಅಗತ್ಯವಾಗಲಿದೆ ಮತ್ತು ಅಂತಹ ಖನಿಜಗಳು ಮೂಲಗಳು ಭೌಗೋಳಿಕವಾಗಿ ನಿರ್ದಿಷ್ಟೆಡೆಗಳಲ್ಲಿ ಮಾತ್ರ ಕೇಂದ್ರೀಕೃತವಾಗಿರಲಿವೆ.
ಶುದ್ಧ ಇಂಧನ ಬಳಕೆಯತ್ತ ಪರಿರ್ತನೆಯಲ್ಲಿ ಇಂಧನ ಸಮರ್ಥ ಮಾನದಂಡಗಳ ಪ್ರಾಮುಖ್ಯತೆಯನ್ನು ಮನಗಂಡು, ಶುದ್ಧ ಇಂಧನ ಭದ್ರತೆ ಖಾತರಿಪಡಿಸುವ ಜೊತೆಜೊತೆಗೆ ಇಂಧನ ಸಾಮರ್ಥ್ಯ ಸುಧಾರಣೆಗೆ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆಯೂ ಸಮೀಕ್ಷೆ ಬೆಳಕು ಚೆಲ್ಲಿದೆ. ಕಟ್ಟಡಗಳಿಗೆ ಇಂಧನ ಸಂರಕ್ಷಣೆ ನಿರ್ಮಾಣ ಸಂಹಿತೆ (ಇ ಸಿ ಬಿ ಸಿ), ಉಪಕರಣಗಳಿಗೆ ಗುಣಮಟ್ಟ ಮತ್ತು ಲೇಬಲಿಂಗ್ (ಎಸ್ & ಎಲ್) ಮತ್ತು ಸ್ಟಾರ್ ರೇಟೆಡ್ ಕಾರ್ಯಕ್ರಮಗಳು, ಸುಸ್ಥಿರ ಜೀವನಶೈಲಿ ಅಳವಡಿಕೆ ಉತ್ತೇಜನಕ್ಕೆ ಪರಿಸರಕ್ಕಾಗಿ ಜೀವನಶೈಲಿ (LiFE) ಉಪಕ್ರಮ, ಕೈಗಾರಿಕಾ ವಲಯಕ್ಕೆ ಕಾರ್ಯನಿರ್ವಹಿಸು, ಸಾಧಿಸು ಮತ್ತು ವ್ಯಾಪಾರ(PAT) ಯೋಜನೆ ಹಾಗೂ ಸಾರಿಗೆ ವಲಯದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯ ಇತ್ಯಾದಿ.
ಈ ಮೇಲೆ ಹೇಳಿದ ಎಲ್ಲಾ ಉಪಕ್ರಮಗಳಿಂದಾಗಿ ಒಟ್ಟಾರೆ ವಾರ್ಷಿಕ ವೆಚ್ಚದ ಉಳಿತಾಯ ಸುಮಾರು ₹1,94,320 ಕೋಟಿ ಮತ್ತು ವಾರ್ಷಿಕ ಇಂಗಾಲಾಮ್ಲ ಹೊರಸೂಸುವಿಕೆಗಳ ಕಡಿತವು ಸುಮಾರು 306 ದಶಲಕ್ಷ ಟನ್ ಗಳಷ್ಟು.
ಸುಸ್ಥಿರ ಅಭಿವೃದ್ಧಿಗೆ ಹಣಕಾಸು
ವ್ಯಾಪಾರ ಪರಿಸರ ಸುಧಾರಣೆಗೆ ಮತ್ತು ಹೆಚ್ಚಿನ ಸಂಪನ್ಮೂಲಗಳ ಲಭ್ಯತೆಗೆ ಚುರುಕು ನೀಡಲು ದೇಶವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಸಮೀಕ್ಷೆಯು ಸೂಚಿಸುತ್ತದೆ. ದೇಶದ ಹೊರಸೂಸುವಿಕೆಗಳ ಪ್ರಮಾಣ ತಗ್ಗಿಸುವ ಪ್ರಯತ್ನಳಿಗೆ ಕೊಡುಗೆ ನೀಡಬಲ್ಲ ಸಾರ್ವಜನಿಕ ವಲಯ ಯೋಜನೆಗಳಿಗೆ ಹಣ ಕ್ರೋಢೀಕರಣಕ್ಕೆ ಸರ್ಕಾರವು ಜನವರಿ- ಫೆಬ್ರವರಿ 2023 ರಲ್ಲಿ ಸಾವರಿನ್ ಗ್ರೀನ್ ಬಾಂಡ್ ಗಳನ್ನು ವಿತರಿಸಿತು ಮತ್ತು ಅಕ್ಟೋಬರ್ – ಡಿಸೆಂಬರ್ 2023 ರ ಅವಧಿಯಲ್ಲಿ ₹20,000 ಕೋಟಿ ಮೊತ್ತವನ್ನು ಈ ಹಸಿರು ಬಾಂಡ್ ಗಳ ಮೂಲಕ ಸಂಗ್ರಹಿಸಿತ್ತು.
ಮುಂದುವರಿದು, ದೇಶದಲ್ಲಿ ಹಸಿರು ಹಣಕಾಸು ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ಮತ್ತು ನಿಯಂತ್ರಿತ ಸಂಸ್ಥೆಗಳು ಹಸಿರು ಠೇವಣಿಗಳನ್ನು ಸ್ವೀಕರಿಸಲು ಚೌಕಟ್ಟನ್ನು ಆರ್ ಬಿ ಐ ಅನುಷ್ಠಾನಕ್ಕೆ ತಂದಿದೆ. ಇದಲ್ಲದೇ, ತನ್ನ ಆದ್ಯತಾ ವಲಯ ಸಾಲ (ಪಿ ಎಸ್ ಎಲ್) ನಿಯಮಗಳ ಮೂಲಕ ನವೀಕರಿಸಬಹುದಾದ ಇಂಧನಕ್ಕೆ ಆರ್ ಬಿ ಐ ಉತ್ತೇಜನ ನೀಡಿದೆ.
ಭಾರತದ ನವೀನ ಹಸಿರು ಕ್ರೆಡಿಟ್ ಕಾರ್ಯಕ್ರಮ
ಹವಾಮಾನ ಬದಲಾವಣೆ ನಿಗ್ರಹಕ್ಕೆ ಮತ್ತು ಸುಸ್ಥಿರ ಜೀವನೋಪಾಯ ಪೋಷಣೆಗೆ ಸಂರಕ್ಷಣೆ ಮತ್ತು ಆಧುನಿಕತೆ ಆಧಾರಿತವಾದ ಸಮೂಹ ಚಳುವಳಿ ಎಂದೇ ಭಾವಿಸಲಾದ ಭಾರತ ಸರ್ಕಾರದ ಮಿಷನ್ ಲೈಫ್ (LiFE) ಬಗ್ಗೆಯೂ ಸಮೀಕ್ಷೆ ಉಲ್ಲೇಖಿಸುತ್ತದೆ. ಈ ಉಪಕ್ರಮದ ಪ್ರಯತ್ನಗಳಿಗೆ ಉತ್ತೇಜನ ನೀಡಲು ಮತ್ತು ಪರಿಸರ ಸ್ನೇಹಿ ಅಭ್ಯಾಸಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರವು ಪರಿಸರ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳಿಗೆ, ಸಮುದಾಯಗಳಿಗೆ, ಖಾಸಗಿ ವಲಯ ಕೈಗಾರಿಕೆಗಳಿಗೆ ಮತ್ತು ಕಂಪೆನಿಗಳಿಗೆ ಗ್ರೀನ್ ಕ್ರೆಡಿಟ್ ಗಳನ್ನು ಪ್ರೋತ್ಸಾಹಕವಾಗಿ ನೀಡುವ ಹಸಿರು ವಿಶ್ವಾಸ ಕಾರ್ಯಕ್ರಮ (ಗ್ರೀನ್ ಕ್ರೆಡಿಟ್ ಪ್ರೋಗ್ರಾಮ್) ನಂತಹ ಸ್ವಯಂಪ್ರೇರಿತ ಪರಿಸರಾತ್ಮಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ ಎಂದೂ ಕೂಡ ಸಮೀಕ್ಷೆ ಹೇಳಿದೆ.
ಹವಾಮಾನ ಬದಲಾವಣೆ ಸವಾಲು ನಿಗ್ರಹಕ್ಕೆ ಭಾರತದ ಅಂತಾರಾಷ್ಟ್ರೀಯ ಮುಂಚೂಣಿ ಉಪಕ್ರಮಗಳು
ಹವಾಮಾನ ಬದಲಾವಣೆ ನಿಗ್ರಹಕ್ಕೆ ಮತ್ತು ಸ್ಥಿತಿಸ್ಥಾಪಕತ್ವ ನಿರ್ಮಾಣಕ್ಕೆ ಭಾರತ ಕೈಗೊಂಡಿರುವ ಹಲವು ಉಪಕ್ರಮಗಳು ಅಂತಾರಾಷ್ಟ್ರೀಯವಾಗಿ ಮುಂಚೂಣಿಯಲ್ಲಿವೆ ಎಂಬ ಬಗ್ಗೆ ಕೂಡ ಸಮೀಕ್ಷೆಯು ವಿಸ್ತೃತವಾಗಿ ತಿಳಿಸುತ್ತದೆ. ಅಂತಾರಾಷ್ಟ್ರೀಯ ಸೌರ ಮೈತ್ರಿ (ಐಎಸ್‌ಎ), ಒಂದು ವಿಶ್ವ, ಒಂದು ಸೂರ್ಯ, ಒಂದು ಗ್ರಿಡ್ (ಒಎಒಡಬ್ಲ್ಯುಒಜಿ), ವಿಪತ್ತಿಗಾಗಿ ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ (ಸಿ ಆರ್ ಡಿ ಐ), ಸ್ಥಿತಿಸ್ಥಾಪಕ ದ್ವೀಪ ರಾಜ್ಯಗಳಿಗೆ ಮೂಲಸೌಕರ್ಯ (ಐಆರ್‌ಐಎಸ್) ಮತ್ತು ಕೈಗಾರಿಕಾ ಪರಿವರ್ತನೆಗೆ ನಾಯಕತ್ವ ಸಮೂಹ (ಲೀಡ್ ಐಟಿ) ಮೊದಲಾದವುಗಳವನ್ನು ಪ್ರಮುಖವಾಗಿ ಉದಾಹರಿಸಬಹುದಾಗಿದೆ.
*****
(Release ID: 2035561)
Visitor Counter : 51