ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ನಾಯಕತ್ವ ಪರಂಪರೆ' ಕುರಿತ ಪುಸ್ತಕ
'ಒಳಗಿನ ಶಕ್ತಿ': ನರೇಂದ್ರ ಮೋದಿಯವರ ನಾಯಕತ್ವದ ಪರಂಪರೆ ಪುಸ್ತಕವು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದ ಪ್ರಯಾಣದ ಚಿತ್ರಣವನ್ನು ಕಟ್ಟಿಕೊಡುತ್ತದೆ ಮತ್ತು ಅದನ್ನು ಪಾಶ್ಚಿಮಾತ್ಯ ಹಾಗೂ ಭಾರತೀಯ ದೃಷ್ಟಿಕೋನಗಳ ಮೂಲಕ ವ್ಯಾಖ್ಯಾನಿಸುತ್ತದೆ
Posted On:
21 JUL 2024 5:03PM by PIB Bengaluru
ಖ್ಯಾತ ಚಿಂತಕ, ಲೇಖಕ, ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಮಾಜಿ ರೋಡ್ಸ್ ಪ್ರಾಧ್ಯಾಪಕ, ಪ್ರಸ್ತುತ ಭಾರತ ಸರ್ಕಾರದ ಸಾಮರ್ಥ್ಯ ವರ್ಧನೆ ಆಯೋಗದಲ್ಲಿ ಮಾನವ ಸಂಪನ್ಮೂಲ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರು ಬರೆದ ಪ್ರಧಾನಿ ನರೇಂದ್ರ ಮೋದಿಯವರ "ನಾಯಕತ್ವ ಪರಂಪರೆ" ಪುಸ್ತಕವನ್ನು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರಿಗೆ ಇಂದು ಪ್ರದಾನ ಮಾಡಲಾಯಿತು.
ಖ್ಯಾತ ಚಿಂತಕ, ಮಾನವ ಸಂಪನ್ಮೂಲ ಸಾಮರ್ಥ್ಯ ವರ್ಧನೆ ಆಯೋಗದ ಸದಸ್ಯ ಡಾ. ಆರ್.ಬಾಲಸುಬ್ರಹ್ಮಣ್ಯಂ ಅವರು ತಮ್ಮ ಇತ್ತೀಚಿನ ಪುಸ್ತಕವನ್ನು ಭಾನುವಾರ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರಿಗೆ ಪ್ರದಾನ ಮಾಡಿದರು.
"ಪವರ್ ವಿಥಿನ್": ದಿ ಲೀಡರ್ಶಿಪ್ ಲೆಗಸಿ ಆಫ್ ನರೇಂದ್ರ (ಆಂತರಿಕ ಶಕ್ತಿ: ನರೇಂದ್ರ ಮೋದಿ ಅವರ ನಾಯಕತ್ವ ಪರಂಪರೆ) ಶೀರ್ಷಿಕೆಯ ಪುಸ್ತಕವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಪ್ರಯಾಣದ ಚಿತ್ರಣವನ್ನು ಸೆರೆಹಿಡಿಯುತ್ತದೆ ಮತ್ತು ಅದನ್ನು ಪಾಶ್ಚಿಮಾತ್ಯ ಮತ್ತು ಭಾರತೀಯ ದೃಷ್ಟಿಕೋನಗಳ ಮೂಲಕ ವ್ಯಾಖ್ಯಾನಿಸುತ್ತದೆ. ಇವೆಲ್ಲವುಗಳನ್ನೂ ಒಟ್ಟುಗೂಡಿಸುವ ಮೂಲಕ ಸಾರ್ವಜನಿಕ ಸೇವೆಯ ಜೀವನವನ್ನು ಬಯಸುವವರಿಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ.
ಬಾಲಸುಬ್ರಹ್ಮಣ್ಯಂ ಅವರು ಈ ಹಿಂದೆ ಒಂಬತ್ತು ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಕೆಲವು "ವಾಯ್ಸಸ್ ಫ್ರಮ್ ದಿ ಗ್ರಾಸ್ರೂಟ್ಸ್" ಮತ್ತು "ಲೀಡರ್ಶಿಪ್ ಲೆಸನ್ಸ್ ಫಾರ್ ಡೈಲಿ ಲಿವಿಂಗ್" ಜಾಗತಿಕವಾಗಿ ಮೆಚ್ಚುಗೆ ಪಡೆದಿವೆ.
'ಪವರ್ ವಿಥಿನ್': ದಿ ಲೀಡರ್ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ ಎಂಬ ಪುಸ್ತಕವು 'ನಾಯಕತ್ವದ ಪ್ರಯೋಗ'ದಿಂದ ಸ್ಫೂರ್ತಿ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಜೀವನ ಅನುಭವದ ಮೂಲಕ ಭಾರತದ ನಾಗರಿಕ ಜ್ಞಾನವನ್ನು ಸೆರೆಹಿಡಿಯುವ ಇದು, ಅವರ ಕಾರ್ಯವಿಧಾನದ ಆತ್ಮಾವಲೋಕನವನ್ನು ಒದಗಿಸುತ್ತದೆ.
ಸಚಿವ ಸಂಪುಟದ ಒಳಗೆ ಮತ್ತು ಸಚಿವ ಸಂಪುಟದ ಹೊರಗಿನ ಸಹೋದ್ಯೋಗಿಗಳು, ಅವರ ಅವಿರತ ಪರಿಶ್ರಮ ಹಾಗೂ ಸಂವಹನ ವಿಧಾನವು ಅವರನ್ನು ಪ್ರಧಾನಿ ಹುದ್ದೆಗೆ ಹೇಗೆ ಪ್ರೇರೇಪಿಸಿತು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.
ಬುದ್ಧಿಜೀವಿಗಳು, ಶಿಕ್ಷಣ ತಜ್ಞರು, ಕಾರ್ಪೊರೇಟ್ ಜಗತ್ತು ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಚಿಂತಕರು ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯಗಳು ಮತ್ತು ಉಪಾಖ್ಯಾನಗಳು ಸಹ ಇದರಲ್ಲಿ ದಾಖಲಾಗಿವೆ.
ಜಿತೇಂದ್ರ ಸಿಂಗ್ ಅವರು ಮಾತನಾಡಿ, “ಈ ಪುಸ್ತಕವು ನಿಜವಾಗಿಯೂ ಮೋದಿಯವರ ಕಾಲದ ಗುರುತು ಮತ್ತು ಇತಿಹಾಸವಾಗಿದೆ. ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಇರಿಸುವ ಮೋದಿಯವರ ಸಂಕಲ್ಪವನ್ನು ಒತ್ತಿಹೇಳುತ್ತದೆ. ಪ್ರಧಾನಿ ಮೋದಿಯವರ ಸಂದರ್ಭದಲ್ಲಿ ಭಾರತೀಯ ನಾಯಕತ್ವದ ವಿವಿಧ ವಿದ್ಯಮಾನಗಳ ಕುರಿತಾದ ಮೊದಲ ಮತ್ತು ಅತ್ಯಂತ ಅಧಿಕೃತ ದಾಖಲೆಗಳಲ್ಲಿ ಇದು ಒಂದಾಗಿದೆ,ʼʼ ಎಂದು ವಿವರಿಸಿದ್ದಾರೆ. “ವಾಸ್ತವವಾಗಿ ಇದೊಂದು ತೌಲನಿಕ ಅಧ್ಯಯನದಂತಿದೆ ಮತ್ತು ಭವಿಷ್ಯದ ಸಂಶೋಧಕರಿಗೆ ಪರಾಮರ್ಶೆಗೆ ಇದು ಸೂಕ್ತ ದಾಖಲೆಯಾಗಲಿದೆ,ʼʼ ಎಂದು ಭವಿಷ್ಯ ನುಡಿದಿದ್ದಾರೆ.
*****
(Release ID: 2034887)
Visitor Counter : 64