ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)

ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ ಲೋಕಸೇವಾ ಆಯೋಗ (UPSC) 

Posted On: 19 JUL 2024 2:08PM by PIB Bengaluru

ಕೇಂದ್ರ ಲೋಕಸೇವಾ ಆಯೋಗವು (UPSC) ನಾಗರಿಕ ಸೇವೆಗಳ ಪರೀಕ್ಷೆ-2022 ರ ಅಭ್ಯರ್ಥಿಯಾದ ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಕೃತ್ಯಗಳ ಬಗ್ಗೆ ವಿವರವಾದ ಮತ್ತು ಸಂಪೂರ್ಣ ತನಿಖೆ ನಡೆಸಿದೆ. ಆಕೆ ತನ್ನ ಹೆಸರು, ತಂದೆ ಮತ್ತು ತಾಯಿಯ ಹೆಸರು, ಭಾವಚಿತ್ರ/ ಸಹಿ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಿಸುವ ಮೂಲಕ ನಕಲು ಮಾಡಿ ಪರೀಕ್ಷಾ ನಿಯಮಗಳ ಉಲಂಘಿಸಿ ಮೋಸ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. .

2. ಆದ್ದರಿಂದ, UPSC, ಪೊಲೀಸ್ ಅಧಿಕಾರಿಗಳಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಲ್ಲಿಸುವ ಮೂಲಕ ಕ್ರಿಮಿನಲ್ ಪ್ರಾಸಿಕ್ಯೂಷನ್ ಸೇರಿದಂತೆ ಆಕೆಯ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿದೆ. ಮತ್ತು ಉಮೇದುವಾರಿಕೆಯನ್ನು ರದ್ದುಗೊಳಿಸಲು ಶೋಕಾಸ್ ನೋಟಿಸ್ (ಎಸ್‌ಸಿಎನ್) ನೀಡಿದೆ. ಸೇವಾ ಪರೀಕ್ಷೆ-2022/ ನಾಗರಿಕ ಸೇವೆಗಳ ಪರೀಕ್ಷೆ-2022 ರ ನಿಯಮಗಳಿಗೆ ಅನುಸಾರವಾಗಿ ಭವಿಷ್ಯದ ಪರೀಕ್ಷೆಗಳು/ ಆಯ್ಕೆಗಳಿಂದ ಡಿಬಾರ್‌ ಮಾಡಲಾಗಿದೆ.

3. ಸಾಂವಿಧಾನಿಕ ಕಟ್ಟುಪಾಡುಗಳನ್ನು ಪೂರೈಸುವಲ್ಲಿ, UPSC ತನ್ನ ಸಾಂವಿಧಾನಿಕ ಆದೇಶಕ್ಕೆ ಕಟ್ಟುನಿಟ್ಟಾಗಿ ಬದ್ಧವಾಗಿದೆ ಮತ್ತು ಎಲ್ಲಾ ಪರೀಕ್ಷೆಗಳನ್ನು ಒಳಗೊಂಡಂತೆ ಎಲ್ಲಾ ಪ್ರಕ್ರಿಯೆಗಳನ್ನು ಯಾವುದೇ ರಾಜಿ ಇಲ್ಲದೆ ಹೆಚ್ಚಿನ ಶ್ರದ್ಧೆಯೊಂದಿಗೆ ನಡೆಸುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. UPSC ತನ್ನ ಎಲ್ಲಾ ಪರೀಕ್ಷಾ ಪ್ರಕ್ರಿಯೆಗಳ ಪವಿತ್ರತೆ ಮತ್ತು ಸಮಗ್ರತೆಯನ್ನು ಅತ್ಯಂತ ನ್ಯಾಯಸಮ್ಮತತೆ ಮತ್ತು ನಿಯಮಗಳ ಕಟ್ಟುನಿಟ್ಟಾದ ಪಾಲನೆಯನ್ನು ಖಾತರಿಪಡಿಸಿದೆ.

4. UPSC ಸಾರ್ವಜನಿಕರಿಂದ, ವಿಶೇಷವಾಗಿ ಅಭ್ಯರ್ಥಿಗಳಿಂದ ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿದೆ. ಆಯೋಗವು ನಿಸ್ಸಂದಿಗ್ಧವಾಗಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯ ಅಂತಹ ಉನ್ನತ ಕ್ರಮವನ್ನು ಉಳಿಸಿಕೊಳ್ಳಲು ಮತ್ತು ಯಾವುದೇ ಕಾರಣಕ್ಕೂ ರಾಜಿಯಾಗದೇ ಇರುವುದುದನ್ನು ಖಚಿತಪಡಿಸಿಕೊಂಡಿದೆ ಮತ್ತು ಇದಕ್ಕೆ ಬದ್ಧವಾಗಿದೆ.

 

*****
 



(Release ID: 2034325) Visitor Counter : 58