ಹಣಕಾಸು ಸಚಿವಾಲಯ
ನವದೆಹಲಿಯಲ್ಲಿ ಸಾಂಪ್ರದಾಯಿಕ ಹಲ್ವಾ ಸಮಾರಂಭದೊಂದಿಗೆ 2024-25ನೇ ಸಾಲಿನ ಕೇಂದ್ರ ಬಜೆಟ್ ಅಂತಿಮ ಹಂತದ ಸಿದ್ಧತೆಗಳು ಇಂದು ಪ್ರಾರಂಭವಾಗಿವೆ
Posted On:
16 JUL 2024 7:26PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಪಂಕಜ್ ಚೌಧರಿ ಅವರ ಉಪಸ್ಥಿತಿಯಲ್ಲಿ 2024-25ನೇ ಸಾಲಿನ ಕೇಂದ್ರ ಬಜೆಟ್ ಸಿದ್ಧತೆ ಪ್ರಕ್ರಿಯೆಯ ಅಂತಿಮ ಹಂತವನ್ನು ಸೂಚಿಸುವ ಹಲ್ವಾ ಸಮಾರಂಭವು ಇಂದು ನವದೆಹಲಿಯಲ್ಲಿ ನಡೆಯಿತು.
ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಅಧಿಕಾರಿಗಳ 'ಲಾಕ್-ಇನ್' ಪ್ರಕ್ರಿಯೆ ಪ್ರಾರಂಭವಾಗುವ ಮೊದಲು, ಪ್ರತಿವರ್ಷ ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ. ಕೇಂದ್ರ ಬಜೆಟ್-2024-25 ಅನ್ನು ಜುಲೈ 23, 2024 ರಂದು ಮಂಡಿಸಲಾಗುವುದು.
ವಾರ್ಷಿಕ ಆಯ-ವ್ಯಯ ತಃಖ್ತೆ (ಬಜೆಟ್), ಅನುದಾನದ ಬೇಡಿಕೆ (ಡಿಜಿ), ಹಣಕಾಸು ಮಸೂದೆ ಸೇರಿದಂತೆ ಎಲ್ಲಾ ಕೇಂದ್ರ ಬಜೆಟ್ ಸಂಬಂಧಿತ ದಾಖಲೆಗಳು "ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್"ನಲ್ಲಿ ಲಭ್ಯವಿರುತ್ತವೆ. ಆ ಮೂಲಕ ಸಂಸತ್ತಿನ ಸದಸ್ಯರು(ಸಂಸದರು) ಮತ್ತು ಸಾರ್ವಜನಿಕರು ಡಿಜಿಟಲ್ ರೂಪದಲ್ಲಿ ಲಭ್ಯವಿರುವ ಇವುಗಳನ್ನು ನಿರಾಯಾಸವಾಗಿ ಪಡೆಯಬಹುದಾಗಿದೆ. ಈ ಆ್ಯಪ್ ದ್ವಿಭಾಷೆಗಳಲ್ಲಿ(ಇಂಗ್ಲಿಷ್ ಮತ್ತು ಹಿಂದಿ) ಹಾಗೂ ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಲಭ್ಯವಿರುತ್ತದೆ. ಈ ಆ್ಯಪ್ ಅನ್ನು ಕೇಂದ್ರ ಬಜೆಟ್ ವೆಬ್ ಪೋರ್ಟಲ್ (http://www.indiabudget.gov.in) ನಿಂದ ಸಹ ಡೌನ್ಲೋಡ್ ಮಾಡಬಹುದು.
ಜುಲೈ 23, 2024 ರಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವರು ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದ ನಂತರ ಬಜೆಟ್ ದಾಖಲೆಗಳು ಮೊಬೈಲ್ ಆ್ಯಪ್ ನಲ್ಲಿ ಲಭ್ಯವಿರುತ್ತವೆ.
ಹಲ್ವಾ ಸಮಾರಂಭದಲ್ಲಿ, ಕೇಂದ್ರ ಹಣಕಾಸು ಸಚಿವರೊಂದಿಗೆ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಬಜೆಟ್ ತಯಾರಿಕೆಯಲ್ಲಿ ಭಾಗಿಯಾಗಿರುವ ಭಾರತ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭದ ಭಾಗವಾಗಿ, ಕೇಂದ್ರ ಹಣಕಾಸು ಸಚಿವರು ಬಜೆಟ್ ಮುದ್ರಣಾಲಯಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಶುಭ ಹಾರೈಸಿದರು.
*****
(Release ID: 2033768)
Visitor Counter : 139
Read this release in:
Tamil
,
Odia
,
Hindi
,
Hindi_MP
,
Punjabi
,
English
,
Urdu
,
Marathi
,
Manipuri
,
Gujarati
,
Telugu