ರಕ್ಷಣಾ ಸಚಿವಾಲಯ
azadi ka amrit mahotsav

ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ: ಡಿಪಿಎಸ್ ಯುಗಳಿಗೆ 346 ವಸ್ತುಗಳ ಐದನೇ ಧನಾತ್ಮಕ ಸ್ವದೇಶೀಕರಣದ ಪಟ್ಟಿಯನ್ನು ಪ್ರಕಟಿಸಿದ ರಕ್ಷಣಾ ಸಚಿವಾಲಯ


ಕಳೆದ ಮೂರು ವರ್ಷಗಳಲ್ಲಿ 12,300 ಕ್ಕೂ ಹೆಚ್ಚು ವಸ್ತುಗಳನ್ನು ದೇಶೀಯಗೊಳಿಸಲಾಗಿದೆ; ದೇಶೀಯ ಮಾರಾಟಗಾರರಿಗೆ 7,572 ಕೋಟಿ ರೂ.ಗಳ ಖರೀದಿ ಆದೇಶಗಳನ್ನು ಡಿಪಿಎಸ್ ಯುಗಳು ನೀಡುತ್ತಿವೆ

Posted On: 16 JUL 2024 12:29PM by PIB Bengaluru

ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಉತ್ತೇಜನ ನೀಡಲು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳ (ಡಿಪಿಎಸ್ ಯು ) ಆಮದನ್ನು ಕಡಿಮೆ ಮಾಡಲು, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ (ಡಿಡಿಪಿ)ಯು 346 ವಸ್ತುಗಳನ್ನು ಒಳಗೊಂಡ ಐದನೇ ಧನಾತ್ಮಕ ಸ್ವದೇಶೀಕರಣ ಪಟ್ಟಿಯನ್ನು (ಪಿಐಎಲ್) ಅಧಿಸೂಚಿಸಿದೆ. ಇವುಗಳಲ್ಲಿ ವ್ಯೂಹಾತ್ಮಕವಾಗಿ ಪ್ರಮುಖವಾದ ಲೈನ್ ರೀಪ್ಲೇಸ್ಮೆಂಟ್ ಘಟಕಗಳು / ಸಿಸ್ಟಮ್ ಗಳು / ಉಪ-ವ್ಯವಸ್ಥೆಗಳು / ಅಸೆಂಬ್ಲಿಗಳು / ಉಪ-ಜೋಡಣೆಗಳು / ಬಿಡಿಭಾಗಗಳು ಮತ್ತು ಕಾಂಪೋನೆಂಟ್ ಗಳು ಹಾಗು ಕಚ್ಚಾ ವಸ್ತುಗಳು ಸೇರಿವೆ, ಇದರ ಆಮದು ಬದಲಿ ಮೌಲ್ಯ 1,048 ಕೋಟಿ ರೂ. ಶ್ರೀಜನ್ ಪೋರ್ಟಲ್ (https://srijandefence.gov.in) ನಲ್ಲಿ ಲಭ್ಯವಿರುವ ಪಟ್ಟಿಯಲ್ಲಿ ಸೂಚಿಸಿದಂತೆ ಸ್ವದೇಶೀಕರಣಕ್ಕೆ (ದೇಶೀಯವಾಗಿ ಉತ್ಪಾದನೆ) ನಿಗದಿ ಮಾಡಲಾದ  ಕಾಲಮಿತಿಯ ನಂತರವೇ ವಸ್ತುಗಳನ್ನು ಭಾರತೀಯ ಉದ್ಯಮಗಳಿಂದ ಖರೀದಿಸಲಾಗುತ್ತದೆ.  ಲಗತ್ತಿಸಲಾದ ಪಟ್ಟಿಯಲ್ಲಿ ವಸ್ತುಗಳ ವಿವರಗಳು ಲಭ್ಯವಿವೆ.

(ಡಿಪಿಎಸ್ ಯುಗಳಿಗೆ 5ನೇ ಧನಾತ್ಮಕ ಸ್ವದೇಶೀಕರಣ ಪಟ್ಟಿ - ಡಿಡಿಪಿ)

ರಕ್ಷಣಾ ಸಚಿವಾಲಯವು 2020 ರಲ್ಲಿ ಶ್ರೀಜನ್ ಪೋರ್ಟಲ್ ಪ್ರಾರಂಭಿಸಿತ್ತು. ಈ ಪೋರ್ಟಲ್ ನಲ್ಲಿ, ಡಿಪಿಎಸ್ ಯುಗಳು ಮತ್ತು ಸೇವಾ ಪ್ರಧಾನ ಕಚೇರಿಗಳು (ಎಸ್ಎಚ್ ಕ್ಯೂ ಗಳು) ದೇಶೀಕರಣಕ್ಕಾಗಿ ರಕ್ಷಣಾ ಸಾಮಗ್ರಿಗಳನ್ನು ಎಂಎಸ್ಎಂಇಗಳು ಮತ್ತು ನವೋದ್ಯಮಗಳು ಸೇರಿದಂತೆ ಕೈಗಾರಿಕೆಗಳಿಗೆ ಒದಗಿಸುತ್ತವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಆತ್ಮನಿರ್ಭರ ಭಾರತ'ಕ್ಕೆ ನೀಡಿದ ಪ್ರಮುಖ ಉತ್ತೇಜನವು ರಕ್ಷಣಾ ವಸ್ತುಗಳ ಸ್ವದೇಶೀಕರಣದಲ್ಲಿ ಗಮನಾರ್ಹ ಫಲಿತಾಂಶಗಳನ್ನು ನೀಡಿದ್ದು, ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಯತ್ನಗಳಿಗೆ ಚಾಲಕ ಶಕ್ತಿಯಾಗಿದ್ದಾರೆ.  

ಐದನೇ ಪಿಐಎಲ್ ನಲ್ಲಿ ಉಲ್ಲೇಖಿಸಲಾದ ವಸ್ತುಗಳ ದೇಶೀಕರಣವನ್ನು ಡಿಪಿಎಸ್ಯುಗಳು ಕೈಗೊಳ್ಳುತ್ತವೆ. 'ಮೇಕ್' ಕಾರ್ಯವಿಧಾನ ಅಥವಾ ಎಂಎಸ್ಎಂಇಗಳು ಸೇರಿದಂತೆ ಉದ್ಯಮಗಳನ್ನು  ಒಳಗೊಂಡು ಆಂತರಿಕ ಅಭಿವೃದ್ಧಿ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಸ್ವದೇಶಿಕರಣವನ್ನು ಇವು ಕೈಗೊಳ್ಳುತ್ತವೆ. ಇದು ಆರ್ಥಿಕತೆಯ ಬೆಳವಣಿಗೆಗೆ ವೇಗ ನೀಡುತ್ತದೆ, ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ , ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಪಾಲ್ಗೊಳ್ಳುವಿಕೆಯಿಂದಾಗಿ ದೇಶೀಯ ರಕ್ಷಣಾ ಉದ್ಯಮದ ವಿನ್ಯಾಸ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ಬಿಇಎಂಎಲ್ ಲಿಮಿಟೆಡ್, ಇಂಡಿಯಾ ಆಯಿಲ್ ಲಿಮಿಟೆಡ್ (ಐಒಎಲ್), ಮಡಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್), ಗೋವಾ ಶಿಪ್ ಯಾರ್ಡ್ ಲಿಮಿಟೆಡ್ (ಜಿಎಸ್ಎಲ್), ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್ ಲಿಮಿಟೆಡ್ (ಜಿ.ಆರ್.ಎಸ್. ಇ) ಹಾಗು ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ (ಎಚ್ಎಸ್ಎಲ್)ಗಳು  ಐದನೇ ಪಿಐಎಲ್ ನಲ್ಲಿ ರಕ್ಷಣಾ ಸಾಮಗ್ರಿಗಳಲ್ಲಿ ತೊಡಗಿರುವ ಡಿಪಿಎಸ್ ಯುಗಳಾಗಿವೆ. ಈ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ 'ಶ್ರೀಜನ್ ಪೋರ್ಟಲ್ ಡ್ಯಾಶ್ ಬೋರ್ಡ್ (http://srijandefence.gov.in/DashboardForPublic) ನಲ್ಲಿ ಕೊಂಡಿಯೊಂದಿಗೆ (ಲಿಂಕ್ ನೊಂದಿಗೆ ) ಆಯಾ ಜಾಲತಾಣಗಳಲ್ಲಿ (ವೆಬ್ ಸೈಟ್ ಳಲ್ಲಿ)  ಆಸಕ್ತಿಯ ಅಭಿವ್ಯಕ್ತಿಗಳು / ಪ್ರಸ್ತಾಪಕ್ಕಾಗಿ ವಿನಂತಿಗಳನ್ನು ಮಂಡಿಸುವ ಪ್ರಕ್ರಿಯೆಯನ್ನು ಇವು ಪ್ರಾರಂಭಿಸಿವೆ ಮತ್ತು ಇದರಲ್ಲಿ ಉದ್ಯಮ / ಎಂಎಸ್ಎಂಇಗಳು / ನವೋದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಂದೆ ಬರಬಹುದು. 

ಈ ಹಿಂದೆ, ಡಿಪಿಎಸ್ ಯುಗಳಿಗಾಗಿ 4,666 ವಸ್ತುಗಳನ್ನು/ಸಾಮಗ್ರಿಗಳನ್ನು ಒಳಗೊಂಡ ನಾಲ್ಕು ಪಿಐಎಲ್ ಗಳನ್ನು ಡಿಡಿಪಿ ಅಧಿಸೂಚಿಸಿತ್ತು, ಅದರಲ್ಲಿ 3,400 ಕೋಟಿ ರೂ.ಗಳ ಆಮದು ಬದಲಿ ಮೌಲ್ಯವನ್ನು ಹೊಂದಿರುವ 2,972 ಸಾಮಗ್ರಿಗಳನ್ನು ಈಗಾಗಲೇ ದೇಶೀಯಗೊಳಿಸಲಾಗಿದೆ.ಡಿಪಿಎಸ್ ಯುಗಳಿಗಾಗಿ ಈ ಐದು ಪಟ್ಟಿಗಳು ಮಿಲಿಟರಿ ವ್ಯವಹಾರಗಳ ಇಲಾಖೆ (ಡಿಎಂಎ) ಸೂಚಿಸಿದ 509 ವಸ್ತುಗಳ ಐದು ಧನಾತ್ಮಕ ಸ್ವದೇಶೀಕರಣ ಪಟ್ಟಿಗಳಿಗೆ ಹೆಚ್ಚುವರಿಯಾಗಿವೆ. ಈ ಪಟ್ಟಿಗಳಲ್ಲಿ ಹೆಚ್ಚು ಸಂಕೀರ್ಣ ವ್ಯವಸ್ಥೆಗಳು, ಸಂವೇದಕಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿವೆ.

2024ರ ಜೂನ್ ವರೆಗೆ, ಡಿಪಿಎಸ್ ಯುಗಳು ಮತ್ತು ಎಸ್ಎಚ್ ಕ್ಯೂಗಳು ಸ್ವದೇಶಿಕರಣಕ್ಕಾಗಿ 36,000 ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಉದ್ಯಮಕ್ಕೆ ನೀಡಿವೆ. ಅವುಗಳಲ್ಲಿ 12,300 ಕ್ಕೂ ಹೆಚ್ಚು ವಸ್ತುಗಳನ್ನು ಕಳೆದ ಮೂರು ವರ್ಷಗಳಲ್ಲಿ ಸ್ವದೇಶಿಕರಣಗೊಳಿಸಲಾಗಿದೆ. ಇದರ ಪರಿಣಾಮವಾಗಿ, ಡಿಪಿಎಸ್ಯುಗಳು ದೇಶೀಯ ಮಾರಾಟಗಾರರಿಗೆ 7,572 ಕೋಟಿ ರೂ.ಗಳ ಖರೀದಿ ಆದೇಶಗಳನ್ನು ನೀಡಿವೆ.

 

*****
 


(Release ID: 2033620) Visitor Counter : 108