ಹಣಕಾಸು ಸಚಿವಾಲಯ

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತ ಭಾರತದ ಜಿ-20 ಕಾರ್ಯಪಡೆಯ ವರದಿ ಬಿಡುಗಡೆ


ಕಾರ್ಯಪಡೆಯ ಕೆಲಸವು ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ)ದ ವ್ಯಾಖ್ಯಾನ ಮತ್ತು ಮಾರ್ಗಸೂಚಿಯ ಅಂಗೀಕಾರಕ್ಕೆ ಕಾರಣವಾಗಿದೆ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಜಿ-20 ಅಧ್ಯಕ್ಷತೆಯ ಅವಧಿಗೂ ಇದನ್ನು ಕೊಂಡೊಯ್ಯಬಹುದು ಎಂದು ನಿರೀಕ್ಷಿಸಲಾಗಿದೆ

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) ಇಲ್ಲದೆ 50 ವರ್ಷ ಬೇಕಾಗಿದ್ದನ್ನು ಭಾರತ ಕೇವಲ 9 ವರ್ಷಗಳಲ್ಲಿ ಸಾಧಿಸಿದೆ: ಜಿ20 ಇಂಡಿಯಾ ಶೆರ್ಪಾ ಶ್ರೀ ಅಮಿತಾಭ್ ಕಾಂತ್

ಜಗತ್ತಿನಾದ್ಯಂತ ಡಿಪಿಐ ವಿಧಾನ ಮತ್ತು ಕ್ರಮಗಳ ಭವಿಷ್ಯವನ್ನು ವ್ಯಾಖ್ಯಾನಿಸುವಲ್ಲಿ ವರದಿಯು ಪ್ರಮುಖ ಪಾತ್ರ ವಹಿಸುತ್ತದೆ: ಕಾರ್ಯಪಡೆಯ ಸಹ-ಅಧ್ಯಕ್ಷ ಶ್ರೀ ನಂದನ್ ನಿಲೇಕಣಿ

Posted On: 15 JUL 2024 5:12PM by PIB Bengaluru

ಆರ್ಥಿಕ ಪರಿವರ್ತನೆ, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತ ಭಾರತದ ಜಿ-20 ಕಾರ್ಯಪಡೆಯ ಅಂತಿಮ ವರದಿಯನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಲಾಯಿತು. ಭಾರತದ ಜಿ-20 ಮುಖ್ಯಸ್ಥ(ಶೆರ್ಪಾ) ಮತ್ತು ಕಾರ್ಯಪಡೆಯ ಸಹಅಧ್ಯಕ್ಷ ಶ್ರೀ ಅಮಿತಾಬ್ ಕಾಂತ್ ಮತ್ತು ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಮತ್ತು ಯುಐಡಿಎಐ(ಆಧಾರ್) ಸ್ಥಾಪಕ ಅಧ್ಯಕ್ಷ ಶ್ರೀ ನಂದನ್ ನಿಲೇಕಣಿ ಕಾರ್ಯಪಡೆಯ ನೇತೃತ್ವ ವಹಿಸಿದ್ದರು.

ಈ ಕಾರ್ಯಪಡೆಯ ಕೆಲಸವು ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (ಡಿಪಿಐ) ವ್ಯಾಖ್ಯಾನ ಮತ್ತು ಮಾರ್ಗಸೂಚಿಯ ಅಂಗೀಕಾರಕ್ಕೆ ಕಾರಣವಾಯಿತು. ಬ್ರೆಜಿಲ್ ಮತ್ತು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಜರುಗುವ ಜಿ-20 ಅಧ್ಯಕ್ಷತೆಯ ಅವಧಿಯಲ್ಲೂ ಈ ಕಾರ್ಯಪಡೆಯ ವರದಿಯನ್ನು ಅನುಷ್ಠಾನಕ್ಕೆ ತೆಗೆದುಕೊಳ್ಳಲಾಗುತ್ತದೆ.

ಅತ್ಯಂತ ಯಶಸ್ವಿ ಜಿ-20 ಅಧ್ಯಕ್ಷತೆಯ ನಂತರ ಮತ್ತು ಅದರ ಅಧಿಕಾರಾವಧಿಯ ಪರಾಕಾಷ್ಠೆಯ ನಂತರ ಕಾರ್ಯಪಡೆಯ ವರದಿಯು, ವಿಶ್ವಾದ್ಯಂತ ಡಿಪಿಐ ಅಡಿಪಾಯವನ್ನು ಬಲಪಡಿಸುವ ಗುರಿ ಹೊಂದಿದೆ. ಸಂಪೂರ್ಣ ವರದಿಯು ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ:

https://dea.gov.in/sites/default/files/Report%20of%20Indias%20G20%20Task%20Force%20On%20Digital%20Public%20Infrastructure.pdf

ವರದಿ ಬಿಡುಗಡೆ ಸಂದರ್ಭದಲ್ಲಿಮಾತನಾಡಿದ ಭಾರತದ ಜಿ-20 ಮುಖ್ಯಸ್ಥ(ಶೆರ್ಪಾ) ಶ್ರೀ ಅಮಿತಾಬ್ ಕಾಂತ್, “ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ನಂಬಲಾಗದ ಸಾಧನೆ ಮಾಡಿದೆ. ಡಿಪಿಐ ಇಲ್ಲದೆ ಸಾಧನೆ ಮಾಡಲು 50 ವರ್ಷ ತೆಗೆದುಕೊಳ್ಳುತ್ತಿದ್ದುದನ್ನು ನಾವು ಕೇವಲ 9 ವರ್ಷಗಳಲ್ಲಿ ಸಾಧಿಸಿದ್ದೇವೆ. ಭಾರತದಲ್ಲಿಂದು ಯುಪಿಐ ಅನ್ನು ಬೀದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲಾ ಹಂತಗಳಲ್ಲಿ ಬಳಸಲಾಗುತ್ತಿದೆ. ಜಾಗತಿಕವಾಗಿ ಹೆಚ್ಚಿನ ಶೇಕಡಾವಾರು ಡಿಜಿಟಲ್ ವಹಿವಾಟುಗಳು, ಸುಮಾರು 46% ಪಾಲು ಹೊಂದಿವೆ. ಇವೆಲ್ಲವೂ ಭಾರತಕ್ಕೆ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕಷ್ಟದಿಂದ ಹೊರಬರಲು ಬಲವಾದ ಬುನಾದಿ ಎಂದು ಸಾಬೀತಾಯಿತು, ಇದು 160 ದಶಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 4.5 ಶತಕೋಟಿ ಡಾಲರ್ ಹಣ ವರ್ಗಾಯಿಸಬಹುದು ಅಥವಾ ಮೊಬೈಲ್‌ಗಳಲ್ಲಿ ಡಿಜಿಟಲ್ ಲಸಿಕೆ ಪ್ರಮಾಣಪತ್ರಗಳೊಂದಿಗೆ 2 ವರ್ಷಗಳಲ್ಲಿ 2.5 ದಶಲಕ್ಷ ಲಸಿಕೆಗಳನ್ನು   ವಿತರಿಸಲು ಅನುಕೂಲವಾಗುತ್ತದೆ. ಡಿಜಿಟಲೀಕರಣದ ವಿಷಯದಲ್ಲಿ ನಾವು ತುಂಬಾ ಮುಂದುವರಿದಿದ್ದೇವೆ. ಈ ವರದಿಯು ಜಗತ್ತನ್ನು ಅನುಸರಿಸಲು ಮಾರ್ಗದರ್ಶನ ನೀಡುವ ಉತ್ತರ ಭಾಗದ ನಕ್ಷತ್ರವಾಗಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಪಡೆಯ ಸಹಅಧ್ಯಕ್ಷ ಶ್ರೀ ನಂದನ್ ನಿಲೇಕಣಿ, "ವಿಶ್ವಾದ್ಯಂತ ಸರ್ಕಾರಗಳು ತಮ್ಮ ವ್ಯವಹಾರಗಳಲ್ಲಿ ನಿಜವಾಗಿಯೂ ಸುಸ್ಥಿರ ಅಭಿವೃದ್ಧಿ ಗುರಿ(ಎಸ್ಡಿಜಿ)ಗಳನ್ನು ಸಾಧಿಸಲು ಮತ್ತು ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆಯಂತಹ ಸಾಮಾಜಿಕ ಗುರಿಗಳನ್ನು ಸಾಧಿಸಲು ಬಯಸಿದರೆ, ಅದನ್ನು ಮಾಡಲು ಆಧಾರವಾಗಿರುವ ಡಿಪಿಐ ಅನ್ನು ಹೊಂದಿರಬೇಕು ಎಂಬುದನ್ನು ಹೆಚ್ಚಾಗಿ ಅರಿತುಕೊಳ್ಳುತ್ತಿದ್ದಾರೆ. ಅದು ನಿಜಕ್ಕೂ ಸಂಭವಿಸುತ್ತದೆ. ಡಿಪಿಐ ನಾಗರಿಕರ ಜೀವನವನ್ನು ಗಣನೀಯವಾಗಿ ಸುಧಾರಿಸುವ ಮತ್ತು ಆಡಳಿತವನ್ನು ಪರಿವರ್ತಿಸುವ ಶಕ್ತಿ ಹೊಂದಿದೆ. ಇದು ಇಲ್ಲಿ ಭಾರತದಲ್ಲಿ ಆಗಿದೆ ಅಥವಾ ಸಂಭವಿಸಿದೆ, ಇದು ಆಧಾರ್ ಐಡಿ ವ್ಯವಸ್ಥೆಯೊಂದಿಗೆ ಪ್ರಾರಂಭವಾಯಿತು. ಪ್ರತಿಯೊಬ್ಬ ಭಾರತೀಯನಿಗೂ ಡಿಜಿಟಲ್ ಗುರುತು ಒದಗಿಸುವ ಗುರಿ ಹೊಂದಿದೆ. ಈಗ, ಸುಮಾರು 1.3 ಶತಕೋಟಿ ಭಾರತೀಯರು ಈ ಡಿಜಿಟಲ್ ಐಡಿ ಹೊಂದಿದ್ದಾರೆ. ದಿನಕ್ಕೆ ಸರಾಸರಿ 10 ದಶಲಕ್ಷ ಇಕೆವೈಸಿಗಳನ್ನು ಆಧಾರ್ ಮೂಲಕ ಸುಗಮಗೊಳಿಸಲಾಗುತ್ತಿದೆ. ಏತನ್ಮಧ್ಯೆ, ಪಾವತಿಯಲ್ಲಿ ಯುಪಿಐ ವ್ಯವಸ್ಥೆಯು  ಮಾಸಿಕ 13 ಶತಕೋಟಿ ವಹಿವಾಟುಗಳನ್ನು ಸುಗಮಗೊಳಿಸುತ್ತಿದೆ. ಸುಮಾರು 350 ದಶಲಕ್ಷ ವ್ಯಕ್ತಿಗಳು ಮತ್ತು 50 ದಶಲಕ್ಷ ವ್ಯಾಪಾರಿಗಳಿಗೆ ಸೇವೆ ಒದಗಿಸುಸುತ್ತಿದೆ. ಡಿಪಿಐ ಸಕ್ರಿಯಗೊಳಿಸಿದ ನೇರ ವರ್ಗಾವಣೆಯು ಕೇಂದ್ರ ಸರ್ಕಾರದ ಯೋಜನೆಗಳಾದ್ಯಂತ ಸರ್ಕಾರಕ್ಕೆ 41 ಶತಕೋಟಿ ಡಾಲರ್ ಹಣವನ್ನು ಉಳಿಸಿದೆ. ಆದ್ದರಿಂದ, ಇದು ಇನ್ನು ಮುಂದೆ ಆಯ್ಕೆ ಅಥವಾ ಐಷಾರಾಮಿ ಅಲ್ಲ, ನಾವು ಬಯಸಿದ ಸ್ಥಳಕ್ಕೆ ಹೋಗಲು ಡಿಪಿಐ ಅತ್ಯಗತ್ಯ. ಈ ವರದಿಯು ವಿಶ್ವಾದ್ಯಂತ ಡಿಪಿಐ ಕಾರ್ಯ ವಿಧಾನ ಮತ್ತು ಕ್ರಿಯೆಗಳ ಭವಿಷ್ಯವಅನ್ನು ವ್ಯಾಖ್ಯಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಭಾರತದ ಜಿ-20 ಅಧ್ಯಕ್ಷತೆಯು ಪ್ರಮುಖ ಆರ್ಥಿಕ ಮತ್ತು ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಜಾಗತಿಕ ನೀತಿ ಸಂವಾದ ಹೊಂದಿಸಲು ಮತ್ತು ಚಾಲನೆ ನೀಡಲು ಮಹತ್ವದ ಅವಕಾಶ ಒದಗಿಸಿದೆ. ಜನರ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ನಿರ್ಣಾಯಕ ಮತ್ತು ಸಕ್ರಿಯಗೊಳಿಸುವ ಅಂಶವೆಂದರೆ, ತಾಂತ್ರಿಕ ಆವಿಷ್ಕಾರಗಳು ಮತ್ತು ತಂತ್ರಜ್ಞಾನ-ನೇತೃತ್ವದ ಆರ್ಥಿಕ ಪರಿವರ್ತನೆ ಅಥವಾ ರೂಪಾಂತರವಾಗಿದೆ. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) - ಡಿಜಿಟಲ್ ಗುರುತು, ವೇಗದ ಪಾವತಿ ವ್ಯವಸ್ಥೆಯ ಜತೆಗೆ ಸಮ್ಮತಿ ಆಧಾರಿತ ದತ್ತಾಂಶ(ಡೇಟಾ) ಹಂಚಿಕೆಯು - 1.4 ಶತಕೋಟಿ ವ್ಯಕ್ತಿಗಳು ಹಣಕಾಸು, ಆರೋಗ್ಯ, ಶಿಕ್ಷಣ, ಇ-ಆಡಳಿತ, ತೆರಿಗೆ ಕ್ಷೇತ್ರದಲ್ಲಿ ಸಾಮಾಜಿಕ-ಆರ್ಥಿಕವಾಗಿ ಪ್ರಮುಖ ಸೇವೆಗಳು, ಕೌಶಲ್ಯಗಳು ಇತ್ಯಾದಿಯನ್ನು ಹೇಗೆ ಪ್ರವೇಶಿಸಬಹುದು ಎಂಬುದನ್ನು ಪ್ರದರ್ಶಿಸಿದೆ. ಈ ಮೂಲಸೌಕರ್ಯವು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವಿನ ಬಲವಾದ ಪಾಲುದಾರಿಕೆಯ ಫಲಿತಾಂಶವಾಗಿದೆ. ಭಾರತೀಯ ಜನಸಂಖ್ಯೆಯ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಹರಿಸಲು ನಾವೀನ್ಯತೆಗಳನ್ನು ಮುಕ್ತಗೊಳಿಸುತ್ತದೆ. ಅಂತಹ ಡಿಜಿಟಲ್ ಹೆದ್ದಾರಿಗಳು ಸುಧಾರಿತ ಮತ್ತು ಉದಯೋನ್ಮುಖ ಆರ್ಥಿಕತೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಉತ್ಪಾದಕತೆಯನ್ನು ಗಣನೀಯವಾಗಿ ಸುಧಾರಿಸಬಹುದು, ಉನ್ನತ ಮತ್ತು ಸುಸ್ಥಿರ ಬೆಳವಣಿಗೆ ಸಾಧಿಸಲು ವಿಶ್ವಾದ್ಯಂತದ ನಾಗರಿಕರಿಗೆ ಪ್ರಯೋಜನ ನೀಡುತ್ತದೆ. ಭಾರತವು ತನ್ನ ಜಿ-20 ಅಧ್ಯಕ್ಷತೆಯ ಸಮಯದಲ್ಲಿ ಡಿಪಿಐ ಕ್ಷೇತ್ರದಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸುವ ಮೂಲಕ ಬಲವಾದ ಡಿಜಿಟಲ್ ಕಾರ್ಯಸೂಚಿಯನ್ನು ನಡೆಸಬಹುದು.  ಹಣಕಾಸು ಪತ್ತೆ(ಫೈನಾನ್ಸ್ ಟ್ರ್ಯಾಕ್) ಮತ್ತು ಜಿ-20 ಮುಖ್ಯಸ್ಥರ ಪತ್ತೆ(ಶೆರ್ಪಾ ಟ್ರ್ಯಾಕ್‌) ಇವೆರಡರ ಅಡಿ, ಡಿಪಿಐ ಸಂಬಂಧಿತ ವರದಿಗಳು ಮತ್ತು ವಿತರಣೆಗಳ ಕುರಿತು ಎಲ್ಲಾ ಜೃ20 ಸದಸ್ಯರಿಂದ ಸರ್ವಾನುಮತದ ಬೆಂಬಲ  ಸಂಗ್ರಹಿಸಬಹುದು.

ಡಿಪಿಐನಲ್ಲಿ ಭಾರತದ ಜಿ-20 ಕಾರ್ಯಪಡೆಯ ವರದಿಯ ಬಗ್ಗೆ

ಜಾಗತಿಕ ಡಿಪಿಐನ ಪ್ರಗತಿ ಮತ್ತು ಅಳವಡಿಕೆಯ ವಿಧಾನವನ್ನು ಒಟ್ಟಾಗಿ ಬಿಚ್ಚಿಡುವ 3 ಅಗತ್ಯ ಭಾಗಗಳನ್ನು ವರದಿ ಒಳಗೊಂಡಿದೆ. ಭಾಗ 1ರಲ್ಲಿ, ಡಿಪಿಐ ಕಾರ್ಯವಿಧಾನವು ನವೀನ ತಾಂತ್ರಿಕ ಪರಿಹಾರಗಳ ಮೂಲಕ ಜಾಗತಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಪರಿವರ್ತನೀಯ ಮಾದರಿಯಾಗಿ ಹೊರಹೊಮ್ಮುತ್ತದೆ. ವರದಿಯ ಭಾಗ 2ರಲ್ಲಿ ಭಾರತವು ತನ್ನ ಡಿಪಿಐ ಕಾರ್ಯಸೂಚಿಯನ್ನು ಹೇಗೆ ಮುನ್ನಡೆಸಿದೆ, ವಿಶೇಷವಾಗಿ 2023ರಲ್ಲಿ ಅದರ ಜಿ-20 ಅಧ್ಯಕ್ಷತೆಯ ಸಮಯದಲ್ಲಿ, ಅದರ ವಿವಿಧ ಕಾರ್ಯಕಾರಿ ಗುಂಪುಗಳ ಅಡಿ, ಹಣಕಾಸು ನಿರ್ವಹಣೆಯ ಶೋಧ ಅಥವಾ ಪತ್ತೆ(ಫೈನಾನ್ಸ್ ಟ್ರ್ಯಾಕ್) ಮತ್ತು ಡಿಜಿಟಲ್ ಆರ್ಥಿಕತೆಯ ಕಾರ್ಯಕಾರಿ ಗುಂಪಿನ ಹಣಕಾಸು ಪತ್ತೆ ಮತ್ತು ಡಿಜಿಟಲ್ ಆರ್ಥಿಕತೆಯ ಕಾರ್ಯಕಾರಿ ಗುಂಪಿನ ಶೋಧ ಅಥವಾ ಪತ್ತೆ ಕಾರ್ಯಗಳು ಎಂಬುದು ಅಡಕವಾಗಿದೆ.  ವರದಿಯ ಭಾಗ 3ರಲ್ಲಿ, ಮುಂದೆ ನೋಡುವ ದೃಷ್ಟಿಕೋನವನ್ನು ಪ್ರಸ್ತುತಪಡಿಸಲಾಗಿದೆ. ವಿವಿಧ ವಲಯಗಳಾದ್ಯಂತ ಡಿಪಿಐ  ಅನ್ನು ಉನ್ನತೀಕರಿಸುವ ಕಾರ್ಯತಂತ್ರದ ನೀಲನಕ್ಷೆಯನ್ನು ವಿವರಿಸುತ್ತದೆ. ಹಾಗೆಯೇ ಜಾಗತಿಕ ಮಟ್ಟದಲ್ಲಿ ಅದರ ನೀತಿ ಶಿಫಾರಸುಗಳ ಶ್ರೇಣಿಯನ್ನು ನೋಡಬಹುದು.

ವಿವಿಧ ಪ್ರದೇಶಗಳು ಮತ್ತು ದೇಶಗಳಲ್ಲಿ ವಿಶೇಷವಾಗಿ ಜಾಗತಿಕ ದಕ್ಷಿಣ ದೇಶಗಳಲ್ಲಿ ಡಿಪಿಐ ಪರಿಸರ ವ್ಯವಸ್ಥೆ ಪೋಷಿಸಲು ಮತ್ತು ಬಳಸಿಕೊಳ್ಳಲು ಬಹುರಾಷ್ಟ್ರೀಯ ಉಪಸ್ಥಿತಿಯ ವ್ಯಾಪ್ತಿಯೊಂದಿಗೆ ಜಾಗತಿಕ ಗುಣಮಟ್ಟದ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಗುರುತಿಸುವ ಅಗತ್ಯವನ್ನು ವರದಿಯು ಎತ್ತಿ ತೋರಿಸುತ್ತದೆ. ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ತೀವ್ರ ಸುಧಾರಣೆಯ ಮೂಲಕ ಆರ್ಥಿಕ ಪ್ರಗತಿ ವೇಗಗೊಳಿಸಲು ಮತ್ತು ಪಾರದರ್ಶಕತೆ ಸುಧಾರಿಸುವ ಮತ್ತು ದೂರ ಕಡಿಮೆ ಮಾಡುವ ಮೂಲಕ ಜನರು ಮತ್ತು ಸಂಸ್ಥೆಗಳ ನಡುವೆ ವಿಶ್ವಾಸ ಬೆಳೆಸುವ ಮೂಲಕ ತಮ್ಮ ರಾಷ್ಟ್ರೀಯ ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದನ್ನು ವಿಶ್ವದಾದ್ಯಂತ ಅನೇಕ ದೇಶಗಳು ಪರಿಗಣಿಸುತ್ತಿವೆ. ವರದಿಯು ಡಿಪಿಐ ವಿಧಾನದ ಭವಿಷ್ಯವನ್ನು ವ್ಯಾಖ್ಯಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವಾದ್ಯಂತ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತದೆ.

ಕಾರ್ಯಪಡೆ ಬಗ್ಗೆ

ಭಾರತದ ಜಿ-20 ಅಧ್ಯಕ್ಷತೆಯ ಕಾರ್ಯಸೂಚಿ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ)  ಮತ್ತು ಹಣಕಾಸು ಸೇರ್ಪಡೆಯ ಆದ್ಯತೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಾಧಿಸಲು ಅನುಕೂಲವಾಗುವಂತೆ ಜನವರಿ 2023ರಲ್ಲಿ ಕಾರ್ಯಪಡೆ ಸ್ಥಾಪಿಸಲಾಯಿತು. ಕಾರ್ಯಪಡೆಯು ಜಿ-20 ಸದಸ್ಯ ರಾಷ್ಟ್ರಗಳು ಡಿಜಿಟಲ್ ತಂತ್ರಜ್ಞಾನ ಮತ್ತು ಡಿಪಿಐ  ಅನ್ನು ವಿವಿಧ ಕ್ಷೇತ್ರಗಳಾದ್ಯಂತ ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆ ಹೆಚ್ಚಿಸುವ ಕಾರ್ಯವಿಧಾನಗಳನ್ನು ನೋಡಿದೆ. ಸರ್ಕಾರದ ಡಿಜಿಟಲ್ ಆರ್ಥಿಕ ನೀತಿಗಳು ಮತ್ತು ನಿಬಂಧನೆಗಳಿಗೆ ಸಹಾಯ ಮಾಡುತ್ತದೆ. ಕಾರ್ಯಪಡೆಯ ಸಂಯೋಜನೆಯನ್ನು ಕೆಳಗೆ ನೀಡಲಾಗಿದೆ.

ಆರ್ಥಿಕ ಪರಿವರ್ತನೆ, ಆರ್ಥಿಕ ಸೇರ್ಪಡೆ ಮತ್ತು ಅಭಿವೃದ್ಧಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತ ಭಾರತದ ಜೃ20 ಕಾರ್ಯಪಡೆಯ ಸಂಯೋಜನೆಯು ಈ ಕೆಳಗಿನಂತಿದೆ:

ಸಹ-ಅಧ್ಯಕ್ಷರು

1. ಶ್ರೀ ಅಮಿತಾಭ್ ಕಾಂತ್ (ಜೃ20 ಭಾರತದ ಮುಖ್ಯಸ್ಥರು(ಶೆರ್ಪಾ))

2. ಶ್ರೀ ನಂದನ್ ನಿಲೇಕಣಿ, ಸದಸ್ಯರು

3. ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ), ಸದಸ್ಯ ಸಂಯೋಜಕರು

4. ಕಾರ್ಯದರ್ಶಿ,  ಹಣಕಾಸು ಸೇವೆಗಳ ಇಲಾಖೆ (ಡಿಇಎ)

5. ಕಾರ್ಯದರ್ಶಿ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ)

6. ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)

7. ಉಪಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)

8. ಸಿಇಒ, ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ (ನೀತಿ ಆಯೋಗ್)

9. ಮುಖ್ಯ ಆರ್ಥಿಕ ಸಲಹೆಗಾರ,  ಆರ್ಥಿಕ ವ್ಯವಹಾರಗಳ ಇಲಾಖೆ(ಡಿಇಎ)

10. ಸಿಇಒ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)

11. ವ್ಯವಸ್ಥಾಪಕ ನಿರ್ದೇಶಕರು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ))

 

*****



(Release ID: 2033485) Visitor Counter : 31