ಉಪರಾಷ್ಟ್ರಪತಿಗಳ ಕಾರ್ಯಾಲಯ
ಸೈಬರ್ ಅಪರಾಧಗಳಿಗೆ ಬಲಿಯಾದವರಿಗೆ ತುರ್ತು ಕಾನೂನು ನೆರವಿನ ಅಗತ್ಯವಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು
ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಸಮಾಜಗಳಲ್ಲಿ ಒಂದಾಗಿದೆ
ತಂತ್ರಜ್ಞಾನವು ಸಾಮಾನ್ಯ ಜನರಲ್ಲಿ ಸಂಚಲನ ಮೂಡಿಸುತ್ತಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದ್ದಾರೆ
ಮೃದು ರಾಜತಾಂತ್ರಿಕ ಶಕ್ತಿಯು ಈಗ ಪ್ರಾಥಮಿಕವಾಗಿ ತಾಂತ್ರಿಕ ಪರಾಕ್ರಮವನ್ನು ಆಧರಿಸಿದೆ
ವಿಧ್ವಂಸಕ ತಂತ್ರಜ್ಞಾನಗಲಿಂದ ಆರ್ಥಿಕತೆ, ವ್ಯಾಪಾರ, ವ್ಯಕ್ತಿಗಳು ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ
ಸುರಕ್ಷಿತ ಡಿಜಿಟಲ್ ಪರಿಸರವು ನಾವೀನ್ಯತೆಯನ್ನು ಉತ್ತೇಜಿಸುತ್ತದೆ, ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ತಡೆರಹಿತ ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ -ಉಪರಾಷ್ಟ್ರಪತಿ ಶ್ರೀ ಧನಕರ್
Posted On:
13 JUL 2024 8:01PM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಸೈಬರ್ ಅಪರಾಧದ ಬಾಧಿತರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಕಾನೂನು ನೆರವು ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ದೇಶದಲ್ಲಿ ಡಿಜಿಟಲ್ ಬಳಕೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅವರು, ಇದು ಏಜೆನ್ಸಿಗಳು, ತನಿಖಾಧಿಕಾರಿಗಳು, ನಿಯಂತ್ರಕರು ಮತ್ತು ಕಾನೂನು ಸಮುದಾಯಕ್ಕೆ ಒಂದು ಹೊಸ ಕಳವಳದ ಕ್ಷೇತ್ರವಾಗಿದೆ ಎಂದು ಹೇಳಿದರು ಮತ್ತು ಇದನ್ನು ಎದುರಿಸಲು ತಾಂತ್ರಿಕ ಮತ್ತು ಮಾನವ ತಜ್ಞತೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಗ್ಲೋಬಲ್ ಕೌಂಟರ್ ಟೆರರಿಸಂ ಕೌನ್ಸಿಲ್ (ಜಿಸಿಟಿಸಿ) ಆಯೋಜಿಸಿದ್ದ 3ನೇ ಸೈಬರ್ ಸೆಕ್ಯುರಿಟಿ ಕಾನ್ಫರೆನ್ಸ್‌ನ ಸಮಾರೋಪವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಅಮಾಯಕರು ವಂಚನೆಗೊಳಗಾಗುತ್ತಿದ್ದಾರೆ ಎಂದು ಹೇಳಿದರು. ದೇಶದ ಮೂಲೆ ಮೂಲೆಗಳಲ್ಲೂ ಡೇಟಾ ಸುರಕ್ಷತೆಯ ಅರಿವಿನ ಮಹತ್ವವನ್ನು ಒತ್ತಿಹೇಳಿದರು.
ಜಾಗತಿಕವಾಗಿ ಭಾರತವು ಅತ್ಯಂತ ದೊಡ್ಡ ಡಿಜಿಟಲ್ ಸೊಸೈಟಿಗಳಲ್ಲಿ ಒಂದಾಗಿ ಕಾಣಿಸಿಕೊಂಡಿರುವುದನ್ನು ಉಲ್ಲೇಖಿಸಿ, ಶ್ರೀ ಧನಕರ್ ಅವರು ಭಾರತದಲ್ಲಿ 820 ಮಿಲಿಯನ್‌ಗಿಂತ ಹೆಚ್ಚು ಸಕ್ರಿಯ ಇಂಟರ್ನೆಟ್ ಬಳಕೆದಾರರಿದ್ದಾರೆ ಮತ್ತು 500 ಮಿಲಿಯನ್‌ಗಿಂತ ಹೆಚ್ಚು ಜನರಿಗೆ ಬ್ಯಾಂಕಿಂಗ್ ಸೇವೆ ಒದಗಿಸಲಾಗಿದೆ ಎಂದು ಒತ್ತಿ ಹೇಳಿದರು. 2023ರ ವರ್ಷದಲ್ಲಿ ಜಾಗತಿಕ ಡಿಜಿಟಲ್ ವಹಿವಾಟುಗಳ ಶೇಕಡಾ 50ರಷ್ಟು ಭಾರತದಲ್ಲಿ ನಡೆದಿದೆ ಎಂಬ ಅಂಶವನ್ನೂ ಅವರು ಎತ್ತಿ ತೋರಿಸಿದರು.
ಭಾರತವು ತಂತ್ರಜ್ಞಾನ ಬಳಕೆಯಲ್ಲಿ ಸಾಧಿಸಿದ ಯಶಸ್ಸುಗಳನ್ನು ಶ್ಲಾಘಿಸುತ್ತಾ, ಉಪರಾಷ್ಟ್ರಪತಿಯವರು, " ಭಾರತದಲ್ಲಿ ಹಳ್ಳಿ ಮಟ್ಟದವರೆಗೂ ಸೇವೆ ಸಾಗಿಸುವಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆಯನ್ನು ಕಂಡು ಜಗತ್ತು ಈಗ ಅಚ್ಚರಿಯಿಂದ ನೋಡುತ್ತಿದೆ. ತಂತ್ರಜ್ಞಾನವು ಸಾಮಾನ್ಯ ಜನರಲ್ಲಿ ಸಂಚಲನ ಮೂಡಿಸುತ್ತಿದೆ, ಅವರು ತಮ್ಮ ವಹಿವಾಟುಗಳು ಡಿಜಿಟಲ್ ಮೂಲಕ ಆಗುತ್ತಿರುವುದನ್ನು ಆನಂದಿಸುತ್ತಿದ್ದಾರೆ" ಎಂದು ಹೇಳಿದರು.
ವಿಚ್ಛಿದ್ರಕಾರಕ ತಂತ್ರಜ್ಞಾನಗಳ ಅಪಾರ ಸಾಮರ್ಥ್ಯವನ್ನು ಹೈಲೈಟ್ ಮಾಡುವ ಮೂಲಕ ಉಪರಾಷ್ಟ್ರಪತಿಯವರು, ಅಂತಹ ತಂತ್ರಜ್ಞಾನವು ಆರ್ಥಿಕತೆ, ವ್ಯವಹಾರ ಅಥವಾ ವೈಯಕ್ತಿಕ ಉತ್ಪಾದಕತೆ ಮಾತ್ರವಲ್ಲ, ರಾಷ್ಟ್ರದ ಭದ್ರತೆ ಮೇಲೆಯೂ ಪರಿಣಾಮ ಬೀರುವುದಾಗಿ ಒತ್ತಿ ಹೇಳಿದರು.
ಈ ಹೊಸ ತಂತ್ರಜ್ಞಾನಗಳು ಒಡ್ಡುವ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಬೇಕು ಎಂದು ಹೇಳಿದ ಶ್ರೀ ಧನಕರ್, ಅವುಗಳ ಸಕಾರಾತ್ಮಕ ಸಾಮರ್ಥ್ಯವನ್ನು ಬಳಸಿಕೊಳ್ಳಲು ವ್ಯವಸ್ಥೆಗಳನ್ನು ನವೀಕರಿಸಲು ಕರೆ ನೀಡಿದರು. ದೇಶದ ಪ್ರಯೋಜನಕ್ಕಾಗಿ ಈ ಪ್ರಗತಿಗಳನ್ನು ಸಂಯೋಜಿಸಲು ಸಕ್ರಿಯ ಕ್ರಮಗಳ ಅಗತ್ಯವನ್ನೂ ಅವರು ಒತ್ತಿ ಹೇಳಿದರು.
ಆಧುನಿಕ ಯುದ್ಧದ ಬದಲಾಗುತ್ತಿರುವ ಸ್ವರೂಪವನ್ನು ಎತ್ತಿ ತೋರಿಸುತ್ತಾ, ಶ್ರೀ ಧನಕರ್ ಅವರು ಯುದ್ಧವು ಸಾಂಪ್ರದಾಯಿಕ ಗಡಿಗಳನ್ನು ಮೀರಿದೆ. ಭೂಮಿ, ಬಾಹ್ಯಾಕಾಶ ಮತ್ತು ಸಮುದ್ರವನ್ನು ಮೀರಿ ಹೊಸ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಸ್ತರಿಸಿದೆ ಎಂದು ಒತ್ತಿ ಹೇಳಿದರು. ಪ್ರಗತಿಶೀಲ ತಂತ್ರಜ್ಞಾನಗಳ ದೃಷ್ಟಿಯಲ್ಲಿ ದೇಶದ ಸಿದ್ಧತೆ ಅದರ ಜಾಗತಿಕ ಭರವಸೆ ಮತ್ತು ಕೌಶಲ್ಯ ಶಕ್ತಿಯನ್ನು ನಿರ್ಧರಿಸಲು ಪ್ರಮುಖವಾಗಲಿದೆ ಎಂದು ಅವರು ಹೇಳಿದರು. ಒಂದು ರಾಷ್ಟ್ರದ ತಂತ್ರಜ್ಞಾನ ಸಾಮರ್ಥ್ಯವು ಮೃದು ರಾಜತಾಂತ್ರಿಕ ಶಕ್ತಿಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ ಎಂಬುದನ್ನು ಅವರು ಸಹ ಉಲ್ಲೇಖಿಸಿದರು.
ಭಾರತದ ಡಿಜಿಟಲ್ ರಕ್ಷಣೆಯನ್ನು ಬಲಪಡಿಸಲು ಸರ್ಕಾರದ ಸಕ್ರೀಯ ಕ್ರಮಗಳನ್ನು ಹೈಲೈಟ್ ಮಾಡುವ ಮೂಲಕ, ಶ್ರೀ ಧನಕರ್ ಅವರು ರಾಷ್ಟ್ರೀಯ ಸೈಬರ್ ಸುರಕ್ಷತಾ ನೀತಿ, ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸ್ಥಾಪನೆ, ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ನ ಅಪ್ಡೇಟ್‌ಗಳಂತಹ ಪ್ರಮುಖ ಪ್ರಯತ್ನಗಳ ಅನುಷ್ಠಾನವನ್ನು ಉಲ್ಲೇಖಿಸಿದರು. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯನ್ನು ಹೆಚ್ಚಿಸುವ ಈ ಪ್ರಯತ್ನಗಳು, ದೇಶದ ಡಿಜಿಟಲ್ ಮೂಲಸೌಕರ್ಯವನ್ನು ರಕ್ಷಿಸುವಲ್ಲಿ ಮಹತ್ವದ ಬೆಳವಣಿಗೆ ಎಂದು ಉಪರಾಷ್ಟ್ರಪತಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಸಿಟಿಸಿಯ ಸಲಹೆಗಾರ ಪ್ರೊ.ವಿ.ಎಂ.ಬನ್ಸಾಲ್, ಲೆಫ್ಟಿನೆಂಟ್ ಜನರಲ್ ಕೆ.ಜೆ.ಸಿಂಗ್ ಮತ್ತು ಶ್ರೀಮತಿ ನೀರು ಅಬ್ರೋಲ್, ಕಾರ್ಯಕಾರಿ ಮಂಡಳಿ ಸದಸ್ಯರು, ಜಿಸಿಟಿಸಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸಂಪೂರ್ಣ ಮಾಹಿತಿಗಾಗಿ ಓದಿ: https://pib.gov.in/PressReleasePage.aspx?PRID=2033016
*****
(Release ID: 2033160)
Visitor Counter : 53