ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ದಿವ್ಯಾಂಗ ವ್ಯಕ್ತಿಗಳ ಸಬಲೀಕರಣದಲ್ಲಿ ತೊಡಗಿರುವ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ DEPwD ಅರ್ಜಿಗಳನ್ನು ಆಹ್ವಾನಿಸಿದೆ


ದಿವ್ಯಾಂಗರ ಸಬಲೀಕರಣಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳನ್ನು ಸಬಲೀಕರಣಗೊಳಿಸುವುದು, ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ

Posted On: 11 JUL 2024 4:22PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯು (ದಿವ್ಯಾಂಗ ಜನ್) ದಿವ್ಯಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳ ಯೋಜನೆಯನ್ನು ಜಾರಿಗೊಳಿಸಲಾಗಿದೆ. 

ದಿವ್ಯಾಂಗರ ಅಂತಾರಾಷ್ಟ್ರೀಯ ದಿನದಂದು ಅಂದರೆ ಪ್ರತಿ ವರ್ಷ ಡಿಸೆಂಬರ್ 3 ರಂದು, ವ್ಯಕ್ತಿಗಳು, ಸಂಸ್ಥೆಗಳು, ರಾಜ್ಯ/ಜಿಲ್ಲೆ ಇತ್ಯಾದಿಗಳಿಗೆ ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ಮಾಡಿದ ಕಾರ್ಯಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇಲಾಖೆಯು ರಾಷ್ಟ್ರೀಯ/ಪ್ರಾದೇಶಿಕ ದಿನಪತ್ರಿಕೆಗಳಲ್ಲಿ 2024ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳಿಗೆ ಗೃಹ ಸಚಿವಾಲಯದ ಪ್ರಶಸ್ತಿಗಳ ಪೋರ್ಟಲ್‌ನಲ್ಲಿ (http://www.awards.gov.in) ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸುವ ಜಾಹೀರಾತನ್ನು ಪ್ರಕಟಿಸಿದೆ. ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳ ಮಾರ್ಗಸೂಚಿಗಳನ್ನು ಸರಳೀಕರಿಸಲಾಗಿದೆ. ಇಲಾಖೆಯ ವೆಬ್ ಪೋರ್ಟಲ್ - http://www.depwd.gov.in ನಲ್ಲಿ ಹೆಚ್ಚಿನ ವಿವರ ಲಭ್ಯವಿದೆ. ರಾಷ್ಟ್ರೀಯ ಪ್ರಶಸ್ತಿಗಳ ವರ್ಗವಾರು ವಿವರಗಳು, ಅರ್ಹತಾ ಮಾನದಂಡಗಳು, ಆಯ್ಕೆ ವಿಧಾನ ಇತ್ಯಾದಿಗಳು ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ.

ಆನ್‌ಲೈನ್ ನಾಮನಿರ್ದೇಶನ/ಅರ್ಜಿಯು 15ನೇ ಜೂನ್ 2024 ರಿಂದ ಪ್ರಾರಂಭವಾಗಿದೆ ಮತ್ತು ನಾಮ ನಿರ್ದೇಶನ ಸಲ್ಲಿಸಲು  31 ಜುಲೈ 2024 ಕೊನೆಯ ದಿನವಾಗಿದೆ. ಅರ್ಜಿಗಳು/ನಾಮನಿರ್ದೇಶನಗಳನ್ನು ಸಲ್ಲಿಸಲು ವ್ಯಾಪಕ ಪ್ರಚಾರವನ್ನು ನೀಡಲು 24.06.2024 ರಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಮತ್ತು ಇತರರಿಗೆ ಪತ್ರಗಳನ್ನು ಕಳುಹಿಸಲಾಗಿದೆ.

 

*****
 


(Release ID: 2032661) Visitor Counter : 51