ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಸ್ಟ್ರಿಯಾ-ಭಾರತದ ಸಿ.ಇ.ಒ.ಗಳ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

Posted On: 10 JUL 2024 7:01PM by PIB Bengaluru

ಮೂಲಸೌಕರ್ಯ, ಆಟೋಮೊಬೈಲ್, ಇಂಧನ, ಇಂಜಿನಿಯರಿಂಗ್ ಮತ್ತು ಸ್ಟಾರ್ಟ್-ಅಪ್‌ಗಳು ಸೇರಿದಂತೆ ವಿವಿಧ ವಲಯಗಳ ಪ್ರಮುಖ ಆಸ್ಟ್ರಿಯನ್ ಮತ್ತು ಭಾರತೀಯ ಸಿ.ಇ.ಒ.ಗಳ ತಂಡವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾದ ಚಾನ್ಸೆಲರ್ ಘನತೆವೆತ್ತ ಶ್ರೀ ಕಾರ್ಲ್ ನೆಹಮ್ಮರ್ ಅವರು ಇಂದು ಜಂಟಿಯಾಗಿ ಭಾಷಣ ಮಾಡಿದರು.

ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಭಾರತ ಮತ್ತು ಆಸ್ಟ್ರಿಯಾ ನಡುವೆ ಆರ್ಥಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಉದ್ಯಮದ ಪ್ರಮುಖರು ವಹಿಸಿದ ಪಾತ್ರವನ್ನು ಇಬ್ಬರೂ ನಾಯಕರು ಚರ್ಚೆ ಮಾಡಿದರು.  ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯು ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚುತ್ತಿದೆ ಎಂದು ಉಭಯ ನಾಯಕರು ಗಮನಿಸಿದರು ಮತ್ತು ಹೆಚ್ಚಿನ ಸಹಯೋಗದ ಮೂಲಕ ಭಾರತ-ಆಸ್ಟ್ರಿಯಾ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಉದ್ಯಮ ರಂಗಕ್ಕೆ ಕರೆ ನೀಡಿದರು.

ಮುಂದಿನ ಕೆಲವು ವರ್ಷಗಳಲ್ಲಿ ಭಾರತ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಕಾರ್ಯಗಳು ತೀವ್ರವಾಗಿ ಚಲಿಸುತ್ತಿರುವಾಗ, ಭಾರತದಲ್ಲಿ ಅತಿ ವೇಗವಾಗಿ ತೆರೆದುಕೊಳ್ಳುವ ಉದ್ಯಮ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಟ್ರಿಯಾದ ವ್ಯಾಪಾರ ಮಧ್ಯಸ್ಥಗಾರರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದರು.  

ಕಳೆದ ಹತ್ತು ವರ್ಷಗಳಲ್ಲಿ ಭಾರತವು ಪರಿವರ್ತನಾಶೀಲ ಪ್ರಗತಿಯನ್ನು ಸಾಧಿಸಿದೆ ಮತ್ತು ರಾಜಕೀಯ ಸ್ಥಿರತೆ, ನೀತಿ ಭವಿಷ್ಯ ಮತ್ತು ಅದರ ಸುಧಾರಣಾ ಆಧಾರಿತ ಆರ್ಥಿಕ ಕಾರ್ಯಸೂಚಿಯ ಸಾಮರ್ಥ್ಯಗಳನ್ನು ಪರಿಗಣಿಸಿ ಅದೇ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.  ಭಾರತಕ್ಕೆ ಜಾಗತಿಕ ಪ್ರಮುಖರನ್ನು ಆಕರ್ಷಿಸುತ್ತಿರುವ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಅನ್ನು ಸುಧಾರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅವರು ವಿವರವಾಗಿ ಹೇಳಿದರು.  ಭಾರತದ ಆರ್ಥಿಕ ಬೆಳವಣಿಗೆ ಮತ್ತು ಪರಿವರ್ತನೆಯ ಕುರಿತು ಮಾತನಾಡಿದ ಅವರು, ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಭಾರತದ ಯಶಸ್ಸನ್ನು, ಮುಂದಿನ ಪೀಳಿಗೆಯ ಮೂಲಸೌಕರ್ಯಗಳ ಸೃಷ್ಟಿಯಲ್ಲಿ ಮತ್ತು ಹಸಿರು ಕಾರ್ಯಸೂಚಿಯಲ್ಲಿ ಮುನ್ನಡೆಯಲು ಅದರ ಬದ್ಧತೆಯನ್ನು ಗಮನಿಸಿದರು.  ಭಾರತ ಮತ್ತು ಆಸ್ಟ್ರಿಯಾ ನಡುವೆ ಸ್ಥಾಪಿಸಲಾದ ಸ್ಟಾರ್ಟ್ ಅಪ್ ಸೇತುವೆಯು ಗಣನೀಯ ಫಲಿತಾಂಶಗಳನ್ನು ನೀಡುತ್ತದೆ ಎಂದು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.  ಈ ನಿಟ್ಟಿನಲ್ಲಿ ಉಭಯ ದೇಶಗಳು ಒಗ್ಗೂಡಿ ಜಂಟಿ ಹ್ಯಾಕಥಾನ್ ಆಯೋಜಿಸಬೇಕು ಎಂದು ಕೂಡ ಅವರು ಸಲಹೆ ನೀಡಿದರು.  ದೇಶದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಯಶಸ್ಸು ಮತ್ತು ಸಂಪರ್ಕ ಹಾಗೂ ಲಾಜಿಸ್ಟಿಕ್ಸ್ ಅನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅವರು ತಮ್ಮ ಭಾಷಣದಲ್ಲಿ ವಿವರಣೆ ನೀಡಿದರು.

 ಭಾರತದ ಸಾಮರ್ಥ್ಯಗಳನ್ನು ಪರಿಗಣಿಸಿ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಉತ್ತಮ ಗುಣಮಟ್ಟದ ಮತ್ತು ವೆಚ್ಚದ ಪರಿಣಾಮಕಾರಿ ಉತ್ಪಾದನೆಗಾಗಿ ಭಾರತೀಯ ಆರ್ಥಿಕ ಭೂದೃಶ್ಯವನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಾಗಿ ಮತ್ತು ಜಾಗತಿಕ ಪೂರೈಕೆ ಸರಪಳಿ ತಾಣವಾಗಿ ಬಳಸಿಕೊಳ್ಳುವಂತೆ ಪ್ರಧಾನಮಂತ್ರಿ ಅವರು ಆಸ್ಟ್ರಿಯನ್ ದಿಗ್ಗಜರನ್ನು ಒತ್ತಾಯಿಸಿದರು.  ಈ ಸಂದರ್ಭದಲ್ಲಿ, ಸೆಮಿಕಂಡಕ್ಟರ್‌ಗಳು, ವೈದ್ಯಕೀಯ ಸಾಧನಗಳು, ಸೋಲಾರ್ ಪಿವಿ ಸೆಲ್‌ಗಳ ಕ್ಷೇತ್ರಗಳಲ್ಲಿ ಜಾಗತಿಕ ಉತ್ಪಾದನಾ ಕಂಪನಿಗಳನ್ನು ಆಕರ್ಷಿಸಲು ಭಾರತದ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯ ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿದರು.  ಭಾರತದ ಆರ್ಥಿಕ ಸಾಮರ್ಥ್ಯಗಳು ಮತ್ತು ಕೌಶಲ್ಯಗಳು ಮತ್ತು ಆಸ್ಟ್ರಿಯನ್ ತಂತ್ರಜ್ಞಾನವು ವ್ಯಾಪಾರ, ಬೆಳವಣಿಗೆ ಮತ್ತು ಸುಸ್ಥಿರತೆಗೆ ನೈಸರ್ಗಿಕ ಪಾಲುದಾರರಾಗಿದ್ದಾರೆ ಎಂದು ಕೂಡ ಅವರು ತಿಳಿಸಿದರು.

ಭಾರತದಲ್ಲಿನ ಹೂಡಿಕೆಯ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಭಾರತದ ಸಕಾರಾತ್ಮಕ ಬೆಳವಣಿಗೆಯ ಕಥೆಯ ಭಾಗವಾಗಲು ಪ್ರಧಾನಮಂತ್ರಿ ಅವರು ಆಸ್ಟ್ರಿಯನ್ ವ್ಯವಹಾರಸ್ಥ ಮುಖಂಡರುಗಳನ್ನು ವಿಶೇಷವಾಗಿ ಆಹ್ವಾನಿಸಿದರು.

 

*****


(Release ID: 2032272) Visitor Counter : 43