ರಾಷ್ಟ್ರಪತಿಗಳ ಕಾರ್ಯಾಲಯ

ಡ್ಯುರಾಂಡ್ ಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಭಾರತದ ರಾಷ್ಟ್ರಪತಿ 

Posted On: 10 JUL 2024 1:54PM by PIB Bengaluru

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿಂದು [ಜುಲೈ 10, 2024] ಡ್ಯುರಾಂಡ್  ಕಪ್ – 2024 ಟ್ರೋಫಿಯನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅನಾವರಣಗೊಳಿಸಿದರು. ಡ್ಯುರಾಂಡ್  ಕಪ್ ಅಲ್ಲದೇ ಪ್ರೆಸಿಡೆಂಟ್ ಕಪ್, ಶಿಮ್ಲಾ ಟ್ರೋಪಿಯನ್ನು ಸಹ ಅನಾವರಣಮಾಡಿದರು.  

ಈ ಸಂದರ್ಭದಲ್ಲಿ ಸಂಕ್ಷಿಪ್ತವಾಗಿ ಮಾತನಾಡಿದ ರಾಷ್ಟ್ರಪತಿಯವರು, ಫುಟ್ಬಾಲ್, ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಸಹಸ್ರಾರು ಮಂದಿ ಅಭಿಮಾನಿಗಳ ಸಮ್ಮುಖದಲ್ಲಿ ವೃತ್ತಿಪರ ಆಟಗಾರರು ಆಟ ಆಡುತ್ತಿದ್ದರೆ ಆಟಗಾರರು ಮತ್ತು ಪ್ರೇಕ್ಷಕರ ಉತ್ಸಾಹ ಹಲವು ಪಟ್ಟು ವೃದ್ಧಿಸುತ್ತದೆ ಎಂದರು. 

ಡ್ಯುರಾಂಡ್ ಕಪ್ 2024ರ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ರಾಷ್ಟ್ರಪತಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು. ಪಂದ್ಯದಲ್ಲಿ ಗೆದ್ದರೂ ಅಥವಾ ಸೋತರೂ, ಆಟದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಮತ್ತು ಇತರ ತಂಡಗಳನ್ನು ಗೌರವಿಸಬೇಕು ಎಂದು ಆಟಗಾರರಿಗೆ ಕಿವಿಮಾತು ಹೇಳಿದರು. ಕೆಲವೊಮ್ಮೆ, ಆಟದಲ್ಲಿ ಪ್ರಚೋದನೆಗಳು ಮತ್ತು ಭಾವೋದ್ರೇಕಗಳು ಇರುತ್ತವೆ, ಆದರೆ ಆಟಗಾರರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು ಉತ್ತಮ ಬೆಳವಣಿಗೆ. ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಎಲ್ಲಾ ಆಟಗಾರರು ದೃಢಸಂಕಲ್ಪ ಮತ್ತು ಕ್ರೀಡಾ ಮನೋಭಾವದಿಂದ ಆಡುವ ವಿಶ್ವಾಸವಿದೆ ಎಂದು ಹೇಳಿದರು.  

ಭಾರತದಲ್ಲಿ ಫುಟ್ಬಾಲ್ ಮಟ್ಟವನ್ನು ಹೆಚ್ಚಿಸಲು ಎಲ್ಲಾ ಫುಟ್ಬಾಲ್ ಪ್ರೇಮಿಗಳು ಪ್ರಯತ್ನಿಸಬೇಕು ಎಂದು ರಾಷ್ಟ್ರಪತಿಯವರು ಒತ್ತಾಯಿಸಿದರು.

 

*****



(Release ID: 2032159) Visitor Counter : 17