ಉಪರಾಷ್ಟ್ರಪತಿಗಳ ಕಾರ್ಯಾಲಯ
2024 ರ ಜುಲೈ 11-12 ರಂದು ಮುಂಬೈ, ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಉಪರಾಷ್ಟ್ರಪತಿ
ಜುಲೈ 11 ರಂದು ಮಹಾರಾಷ್ಟ್ರದ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿರುವ ಉಪರಾಷ್ಟ್ರಪತಿ
ಮುಂಬೈನಲ್ಲಿ ಜುಲೈ 12 ರಂದು ನರ್ಸೀ ಮೊಂಜೀ ಆಡಳಿತ ಅಧ್ಯಯನ ಸಂಸ್ಥೆಯ [ಎನ್ಎಂಐಎಂಎಸ್], ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಲಿರುವ ಉಪರಾಷ್ಟ್ರಪತಿ
Posted On:
10 JUL 2024 11:38AM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು 2024 ರ ಜುಲೈ 11-12 ರಂದು ಮುಂಬೈ, ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.
ಶ್ರೀ ಧನಕರ್ ಅವರು 2024 ರ ಜುಲೈ 11 ರಂದು ಮಹಾರಾಷ್ಟ್ರದ ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಎರಡನೇ ದಿನದಂದು ಉಪರಾಷ್ಟ್ರಪತಿ ಅವರು ಮುಂಬೈನಲ್ಲಿ ಜುಲೈ 12 ರಂದು ನರ್ಸೀ ಮೊಂಜೀ ಆಡಳಿತ ಅಧ್ಯಯನ ಸಂಸ್ಥೆಯ [ಎನ್ಎಂಐಎಂಎಸ್], ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ತಮ್ಮ ಎರಡು ದಿನಗಳ ಪ್ರವಾಸದ ಸಂದರ್ಭದಲ್ಲಿ ಶ್ರೀ ಜಗದೀಪ್ ಧನಕರ್ ಅವರು ಮಹಾರಾಷ್ಟ್ರದ ರಾಜಭವನಕ್ಕೂ ಸಹ ಭೇಟಿ ನೀಡಲಿದ್ದಾರೆ.
*****
(Release ID: 2032117)
Visitor Counter : 65