ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಪ್ರಧಾನಿಯ ಮುಂಬರುವ ಭೇಟಿ ಸ್ವಾಗತಿಸಿದ ಆಸ್ಟ್ರಿಯಾ ಚಾನ್ಸೆಲರ್, ಪ್ರಧಾನಿ ಮೋದಿ ಪ್ರತಿಕ್ರಿಯೆ

Posted On: 07 JUL 2024 8:57AM by PIB Bengaluru

ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಗಳು ಆಸ್ಟ್ರಿಯಾ ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು ಇದಕ್ಕೆ ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು ಹರ್ಷ ವ್ಯಕ್ತಪಡಿಸಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿ ಧನ್ಯವಾದ ಹೇಳಿದ್ದಾರೆ. 

" ಭಾರತದ ಪ್ರಧಾನ ಮಂತ್ರಿಗಳ ಮುಂಬರುವ ಭೇಟಿಯು ನಮಗೆ ವಿಶೇಷ ಗೌರವವಾಗಿದೆ. ಇದು ನಲವತ್ತು ವರ್ಷಗಳ ನಂತರ ಭಾರತ ಪ್ರಧಾನ ಮಂತ್ರಿಯ ಮೊದಲ ಭೇಟಿಯಾಗಿದ್ದು ಬಹಳ ಮಹತ್ವವಾಗಿದೆ. ನಾವು ಭಾರತದೊಂದಿಗೆ 75 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.  

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಈ ಐತಿಹಾಸಿಕ ಸಂದರ್ಭದಲ್ಲಿ ನಮ್ಮ ಸಂಬಂಧಗಳನ್ನು ಬಲಪಡಿಸುವ ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುವ ಬಗ್ಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಪ್ರಧಾನಿ ಮೋದಿಯವರು, “ಧನ್ಯವಾದಗಳು, ಚಾನ್ಸೆಲರ್ @karlnehammer ಅವರೇ, ಈ ಐತಿಹಾಸಿಕ ಸಂದರ್ಭವನ್ನು ಗುರುತಿಸಲು ಆಸ್ಟ್ರಿಯಾಕ್ಕೆ ಭೇಟಿ ನೀಡುವುದು ನಿಜಕ್ಕೂ ಗೌರವವಾಗಿದೆ. ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುವ ನಮ್ಮ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮದ ಹಂಚಿಕೆಯ ಮೌಲ್ಯಗಳು ತಳಹದಿಯನ್ನು ರೂಪಿಸುತ್ತವೆ, ಅದರ ಮೇಲೆ ನಾವು ಎಂದಿಗೂ ನಿಕಟ ಪಾಲುದಾರಿಕೆಯನ್ನು ನಿರ್ಮಿಸುತ್ತೇವೆ.'' ಎಂದು ಬರೆದುಕೊಂಡಿದ್ದಾರೆ.

 

 

*****


(Release ID: 2031558) Visitor Counter : 56