ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಖಾರಿಫ್‌(ಮುಂಗಾರು) ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕಿಂತ ಶೇ.27ರಷ್ಟು ಹೆಚ್ಚಾಗಿದೆ; ಕರ್ನಾಟಕದಲ್ಲಿ ಶೇ.30ರಷ್ಟು ಬಿತ್ತನೆ ಪೂರ್ಣಗೊಂಡಿದೆ


ಹೆಚ್ಚಿನ ಮಂಡಿ ಬೆಲೆಗಳು ಮತ್ತು ಮಾನ್ಸೂನ್‌ ಮಳೆಯ ಪ್ರಾರಂಭದೊಂದಿಗೆ ರೈತರು ಮಾರುಕಟ್ಟೆಗೆ ಬಿಡುಗಡೆ ಮಾಡಿದ ರಾಬಿ (ಹಿಂಗಾರು) ಈರುಳ್ಳಿಯ ಪ್ರಮಾಣವು ಹೆಚ್ಚಾಗುತ್ತಿರುವುದರಿಂದ ಈರುಳ್ಳಿ ಬೆಲೆಗಳು ಕಡಿಮೆಯಾಗುತ್ತಿವೆ

ಖಾರಿಫ್‌ ಆಲೂಗಡ್ಡೆ ಬೆಳೆಯುವ ಪ್ರದೇಶವು ಕಳೆದ ವರ್ಷ ಬಿತ್ತನೆ ಮಾಡಿದ ಪ್ರದೇಶವನ್ನು ಸುಮಾರು ಶೇ.12ರಷ್ಟು ಮೀರುತ್ತದೆ ಮತ್ತು ಕೋಲ್ಡ್‌ ಸ್ಟೋರೇಜ್‌ (ಶೀತಲೀಕೃತ ಶೇಖರಣೆ) ನಲ್ಲಿ ರಾಬಿ ಆಲೂಗಡ್ಡೆಯ ಪ್ರಮಾಣವು ಬಳಕೆಯ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತದೆ

ಖಾರಿಫ್‌ ಟೊಮೆಟೊ ಬೆಳೆಯುವ ಪ್ರದೇಶವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ; ಚಿತ್ತೂರು ಮತ್ತು ಕೋಲಾರದಲ್ಲಿ ಬೆಳೆ ಸ್ಥಿತಿ ಉತ್ತಮವಾಗಿದೆ ಮತ್ತು ಟೊಮೆಟೊ ಕೊಯ್ಲು ಪ್ರಾರಂಭವಾಗಿದೆ

Posted On: 05 JUL 2024 5:45PM by PIB Bengaluru

ಈ ವರ್ಷ ಉತ್ತಮ ಮತ್ತು ಸಕಾಲಿಕ ಮುಂಗಾರು ಮಳೆಯು ಈರುಳ್ಳಿ ಮತ್ತು ಟೊಮೆಟೊ ಮತ್ತು ಆಲೂಗಡ್ಡೆಯಂತಹ ಇತರ ತೋಟಗಾರಿಕೆ ಬೆಳೆಗಳು ಸೇರಿದಂತೆ ಖಾರಿಫ್‌(ಮುಂಗಾರು) ಬೆಳೆಗಳಿಗೆ ದೊಡ್ಡ ಉತ್ತೇಜನವನ್ನು ನೀಡಿದೆ. ರಾಜ್ಯ ಸರ್ಕಾರಗಳೊಂದಿಗೆ ಕೃಷಿ ಸಚಿವಾಲಯದ ಮೌಲ್ಯಮಾಪನದ ಪ್ರಕಾರ, ಪ್ರಮುಖ ತರಕಾರಿಗಳಾದ ಈರುಳ್ಳಿ, ಟೊಮೆಟೊ ಮತ್ತು ಆಲೂಗಡ್ಡೆಯ ಖಾರಿಫ್‌ ಬಿತ್ತನೆಯ ಗುರಿ ಪ್ರದೇಶವು ಕಳೆದ ವರ್ಷಕ್ಕೆ ಹೋಲಿಸಿದರೆ ಗಮನಾರ್ಹ ಹೆಚ್ಚಳವನ್ನು ಕಂಡಿದೆ.

ಕಳೆದ ವರ್ಷದ ಉತ್ಪಾದನೆಗೆ ಹೋಲಿಸಿದರೆ ರಾಬಿ -2024 ಋತುವಿನಲ್ಲಿ ಈರುಳ್ಳಿಯ ಉತ್ಪಾದನೆ ಸ್ವಲ್ಪ ಕಡಿಮೆ ಇದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆ ಹಿತಕರವಾಗಿದೆ. ಈರುಳ್ಳಿ ಬೆಳೆಯನ್ನು ಮೂರು ಋತುಗಳಲ್ಲಿ ಕೊಯ್ಲುಮಾಡಲಾಗುತ್ತದೆ: ಮಾರ್ಚ್‌-ಮೇ ತಿಂಗಳಲ್ಲಿರಾಬಿ; ಸೆಪ್ಟೆಂಬರ್‌-ನವೆಂಬರ್‌ನಲ್ಲಿ ಖಾರಿಫ್‌ ಮತ್ತು ಜನವರಿ-ಫೆಬ್ರವರಿಯಲ್ಲಿಖಾರಿಫ್‌. ಉತ್ಪಾದನೆಯ ದೃಷ್ಟಿಯಿಂದ, ರಾಬಿ ಬೆಳೆ ಒಟ್ಟು ಉತ್ಪಾದನೆಯ ಸರಿಸುಮಾರು ಶೇ.70ರಷ್ಟಿದ್ದರೆ, ಖಾರಿಫ್‌ ಮತ್ತು ನಂತರದ ಖಾರಿಫ್‌ ಒಟ್ಟಾಗಿ ಶೇ.30ರಷ್ಟಿದೆ. ರಾಬಿ ಮತ್ತು ಗರಿಷ್ಠ ಖಾರಿಫ್‌ ಆಗಮನದ ನಡುವಿನ ಕಡಿಮೆ ತಿಂಗಳುಗಳಲ್ಲಿ ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಖಾರಿಫ್‌ ಈರುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ವರ್ಷ ಖಾರಿಫ್‌ ಈರುಳ್ಳಿ ಬೆಳೆಯುವ ಗುರಿ ಪ್ರದೇಶ 3.61 ಲಕ್ಷ  ಹೆಕ್ಟೇರ್‌ ಆಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.27ರಷ್ಟು ಹೆಚ್ಚಾಗಿದೆ. ಖಾರಿಫ್‌ ಈರುಳ್ಳಿ ಉತ್ಪಾದಿಸುವ ಅಗ್ರಗಣ್ಯ ರಾಜ್ಯವಾದ ಕರ್ನಾಟಕದಲ್ಲಿ, 1.50 ಲಕ್ಷ  ಹೆಕ್ಟೇರ್‌ ಗುರಿಯ ಪ್ರದೇಶದಲ್ಲಿ ಶೇ.30ರಷ್ಟು ಬಿತ್ತನೆ ಪೂರ್ಣಗೊಂಡಿದೆ ಮತ್ತು ಇತರ ಪ್ರಮುಖ ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿಬಿತ್ತನೆ ಉತ್ತಮ ಪ್ರಗತಿ ಸಾಧಿಸುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಈರುಳ್ಳಿ ರಾಬಿ -2024 ಬೆಳೆಯಾಗಿದ್ದು, 2024ರ ಮಾರ್ಚ್‌-ಮೇನಲ್ಲಿ ಕೊಯ್ಲು ಮಾಡಲಾಗಿದೆ. ರಾಬಿ -2024ರ ಅಂದಾಜು 191 ಲಕ್ಷ  ಟನ್‌ ಉತ್ಪಾದನೆಯು ತಿಂಗಳಿಗೆ ಸುಮಾರು 17 ಲಕ್ಷ  ಟನ್‌ ದೇಶೀಯ ಬಳಕೆಯನ್ನು ಪೂರೈಸಲು ಸಾಕಾಗುತ್ತದೆ ಮತ್ತು ತಿಂಗಳಿಗೆ 1 ಲಕ್ಷ  ಟನ್‌ ಒಳಗೆ ರಫ್ತು ಮೇಲಿನ ನಿರ್ಬಂಧವನ್ನು ಮುಂದುವರಿಸುತ್ತದೆ. ಇದಲ್ಲದೆ, ಈ ವರ್ಷ ರಾಬಿ ಕೊಯ್ಲಿನ ಸಮಯದಲ್ಲಿ ಮತ್ತು ನಂತರ ಚಾಲ್ತಿಯಲ್ಲಿರುವ ಶುಷ್ಕ ಹವಾಮಾನ ಪರಿಸ್ಥಿತಿಯು ಈರುಳ್ಳಿಯ ಶೇಖರಣಾ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಗಮನಿಸಲಾಗಿದೆ. ಹೆಚ್ಚಿನ ಮಂಡಿ ಬೆಲೆಗಳು ಮತ್ತು ಮಾನ್ಸೂನ್‌ ಮಳೆಯ ಆಗಮನದೊಂದಿಗೆ ರೈತರು ಮಾರುಕಟ್ಟೆಗೆ ಬಿಡುಗಡೆ ಮಾಡುವ ರಾಬಿ ಈರುಳ್ಳಿಯ ಪ್ರಮಾಣವು ಹೆಚ್ಚಾಗುತ್ತಿರುವುದರಿಂದ ಈರುಳ್ಳಿ ಬೆಲೆಗಳು ಸ್ಥಿರಗೊಳ್ಳುತ್ತಿವೆ, ಇದು ಹೆಚ್ಚಿನ ವಾತಾವರಣದ ತೇವಾಂಶದಿಂದಾಗಿ ಶೇಖರಣಾ ನಷ್ಟದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಆಲೂಗಡ್ಡೆ ಮೂಲಭೂತವಾಗಿ ರಾಬಿ ಬೆಳೆಯಾಗಿದ್ದರೂ, ಕರ್ನಾಟಕ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮೇಘಾಲಯ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕೆಲವು ಪ್ರಮಾಣದ ಖಾರಿಫ್‌ ಆಲೂಗಡ್ಡೆಯನ್ನು ಉತ್ಪಾದಿಸಲಾಗುತ್ತದೆ. ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಖಾರಿಫ್‌ ಆಲೂಗಡ್ಡೆ ಕೊಯ್ಲು ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ವರ್ಷ ಖಾರಿಫ್‌ ಆಲೂಗಡ್ಡೆ ಬೆಳೆಯುವ ಪ್ರದೇಶವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12ರಷ್ಟು ಹೆಚ್ಚಾಗುವ ಗುರಿಯನ್ನು ಹೊಂದಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಹುತೇಕ ಸಂಪೂರ್ಣ ಉದ್ದೇಶಿತ ಬಿತ್ತನೆ ಪ್ರದೇಶವನ್ನು ಆವರಿಸಲಾಗಿದ್ದು, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಬಿತ್ತನೆ ಉತ್ತಮ ಪ್ರಗತಿಯಲ್ಲಿದೆ. ಡಿಎಎಫ್‌ಡಬ್ಲ್ಯೂ ಅಂಕಿ ಅಂಶಗಳ ಪ್ರಕಾರ, ಈ ವರ್ಷ 273.2 ಲಕ್ಷ  ಟನ್‌ ರಾಬಿ ಆಲೂಗಡ್ಡೆಯನ್ನು ಶೀತಲ ಸಂಗ್ರಹದಲ್ಲಿಸಂಗ್ರಹಿಸಲಾಗಿದೆ, ಇದು ಬಳಕೆಯ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತದೆ. ಆಲೂಗಡ್ಡೆಯ ಬೆಲೆಗಳು ಮಾರ್ಚ್‌ ನಿಂದ ಡಿಸೆಂಬರ್‌ ವರೆಗಿನ ಶೇಖರಣಾ ಅವಧಿಯಲ್ಲಿ ಕೋಲ್ಡ್‌ ಸ್ಟೋರೇಜ್‌ಗಳಿಂದ ಬಿಡುಗಡೆಯಾಗುವ ದರವನ್ನು ನಿಯಂತ್ರಿಸುತ್ತದೆ.

ರಾಜ್ಯ ಸರ್ಕಾರದೊಂದಿಗೆ ಕೃಷಿ ಸಚಿವಾಲಯದ ಮೌಲ್ಯಮಾಪನದ ಪ್ರಕಾರ, ಕಳೆದ ವರ್ಷ 2.67 ಲಕ್ಷ  ಹೆಕ್ಟೇರ್‌ ಬಿತ್ತನೆ ಮಾಡಿದ್ದ ಮುಂಗಾರು ಟೊಮೆಟೊ ಪ್ರದೇಶವು ಈ ವರ್ಷ 2.72 ಲಕ್ಷ  ಹೆಕ್ಟೇರ್‌ ಆಗಿದೆ. ಆಂಧ್ರಪ್ರದೇಶದ ಚಿತ್ತೂರು ಮತ್ತು ಕರ್ನಾಟಕದ ಕೋಲಾರದ ಪ್ರಮುಖ ಉತ್ಪಾದನಾ ಪ್ರದೇಶಗಳಲ್ಲಿ ಬೆಳೆ ಪರಿಸ್ಥಿತಿಗಳು ಉತ್ತಮವಾಗಿವೆ ಎಂದು ವರದಿಯಾಗಿದೆ. ಕೋಲಾರದಲ್ಲಿ ಟೊಮೆಟೊ ಕೊಯ್ಲುಆರಂಭವಾಗಿದ್ದು, ಕೆಲವೇ ದಿನಗಳಲ್ಲಿಮಾರುಕಟ್ಟೆಗೆ ಬರಲಿದೆ. ಚಿತ್ತೂರು ಮತ್ತು ಕೋಲಾರದ ಜಿಲ್ಲಾ ತೋಟಗಾರಿಕಾ ಅಧಿಕಾರಿಗಳ ಪ್ರತಿಕ್ರಿಯೆಯ ಪ್ರಕಾರ, ಈ ವರ್ಷ ಟೊಮೆಟೊ ಬೆಳೆ ಕಳೆದ ವರ್ಷಕ್ಕಿಂತ ಗಣನೀಯವಾಗಿ ಉತ್ತಮವಾಗಿದೆ. ಮಧ್ಯಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಖಾರಿಫ್‌ ಟೊಮೆಟೊ ಪ್ರದೇಶಗಳು ಕಳೆದ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಾಗಲಿವೆ.

 

*****



(Release ID: 2031157) Visitor Counter : 5


Read this release in: English , Urdu , Marathi , Hindi