ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಡಾ. ವೀರೇಂದ್ರ ಕುಮಾರ್ ಅವರು ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಅಂತಾರಾಷ್ಟ್ರೀಯ ಸರಣಿಯಲ್ಲಿ ಐತಿಹಾಸಿಕ ವಿಜಯಕ್ಕಾಗಿ ಭಾರತೀಯ ದಿವ್ಯಾಂಗರ ಕ್ರಿಕೆಟ್‌ ತಂಡವನ್ನು ಅಭಿನಂದಿಸಿದರು


ಇದೊಂದು ಸಂಕಲ್ಪದ ಜಯ: ಇಂಗ್ಲೆಂಡ್ ವಿರುದ್ಧ ಇತಿಹಾಸ ನಿರ್ಮಿಸಿದ ದಿವ್ಯಾಂಗರ ಕ್ರಿಕೆಟ್ ತಂಡ!

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ ಭಾರತ ದಿವ್ಯಾಂಗರ ಕ್ರಿಕೆಟ್ ತಂಡ

Posted On: 03 JUL 2024 3:48PM by PIB Bengaluru

ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಅಂತಾರಾಷ್ಟ್ರೀಯ ದಿವ್ಯಾಂಗರ ಕ್ರಿಕೆಟ್ ಸರಣಿಯಲ್ಲಿ ಐತಿಹಾಸಿಕ ಜಯ ಸಾಧಿಸಿದ ಭಾರತೀಯ ದಿವ್ಯಾಂಗರ ಕ್ರಿಕೆಟ್ ತಂಡವನ್ನು ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಇಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್ ಸನ್ಮಾನಿಸಿದರು. ಜೂನ್ 18 ರಿಂದ ಜೂನ್ 27, 2024 ರವರೆಗೆ ಇಂಗ್ಲೆಂಡ್‌ನಲ್ಲಿ ನಡೆದ T20 ಪಂದ್ಯಗಳಲ್ಲಿ ಭಾರತ ತಂಡವು 5-2 ಅಂತರದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, "ಭಾರತೀಯ ದಿವ್ಯಾಂಗರ ಕ್ರಿಕೆಟ್ ತಂಡದ ಈ ಗೆಲುವು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ತಂಡದ ಸಂಕಲ್ಪ ಮತ್ತು ಪರಿಶ್ರಮ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ. ಈ ಗೆಲುವು ಕೇವಲ ನಿಮ್ಮದಲ್ಲ, ಇಡೀ ರಾಷ್ಟ್ರಕ್ಕೆ ಸೇರಿದ್ದು" ಎಂದರು.

ಇದೇ ವೇಳೆ ಮಾತನಾಡಿದ ಸಚಿವರು, ನಮ್ಮ ಆಟಗಾರರು ಅವಕಾಶ ಸಿಕ್ಕರೆ ಉನ್ನತ ಸ್ಥಾನಕ್ಕೇರುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ವಿದೇಶಿ ನೆಲದಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದ್ದು, ನಮಗೆಲ್ಲರಿಗೂ ಹೆಮ್ಮೆಯ ವಿಷಯ, ಕ್ರಿಕೆಟ್ ಮೈದಾನದಲ್ಲಿ ಗೆಲುವು ಶಕ್ತಿ, ಉತ್ಸಾಹವನ್ನು ತುಂಬುತ್ತದೆ. ಮತ್ತು ವ್ಯಕ್ತಿಯ ಜೀವನದಲ್ಲಿ ಸಂತೋಷ, ಕಠಿಣ ಪರಿಸ್ಥಿತಿಗಳನ್ನು ಜಯಿಸಲು ಪ್ರೇರೇಪಿಸುತ್ತದೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಿವ್ಯಾಂಗರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಶ್ರೀ ರಾಜೇಶ್ ಅಗರವಾಲ್, ಉಪ ಮಹಾನಿರ್ದೇಶಕ ಶ್ರೀ ಕಿಶೋರ್ ಬಾಬುರಾವ್ ಸುರ್ವಾಡೆ, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಭಾರತೀಯ ದಿವ್ಯಾಂಗ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು. ತಂಡದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಲಾಯಿತು.

‘ಭಾರತೀಯ ದಿವ್ಯಾಂಗರ ಕ್ರಿಕೆಟ್ ತಂಡದ ಯಶಸ್ಸು ದಿವ್ಯಾಂಗ ಕ್ರೀಡಾಪಟುಗಳ ಜೀವನದಲ್ಲಿ ಭರವಸೆ ಮತ್ತು ಪ್ರೇರಣೆಯನ್ನು ಹೆಚ್ಚಿಸಿದೆ, ಅವರು ಮುಂದೆ ಸಾಗಲು ಮತ್ತು ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುತ್ತದೆ’ ಎಂದು ಸಚಿವ ಡಾ. ವೀರೇಂದ್ರಕುಮಾರ್ ಹೇಳಿದರು.

 

*****
 



(Release ID: 2030669) Visitor Counter : 8