ಪ್ರಧಾನ ಮಂತ್ರಿಯವರ ಕಛೇರಿ
ಹಿರಿಯ ಟಿಎನ್ಎ ನಾಯಕ ಆರ್.ಸಂಪಂತನ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
01 JUL 2024 1:00PM by PIB Bengaluru
ತಮಿಳು ರಾಷ್ಟ್ರೀಯ ಮೈತ್ರಿಕೂಟ (ಟಿಎನ್ಎ) ನಾಯಕ ಆರ್.ಸಂಪಂತನ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದಲ್ಲಿನ ತಮಿಳರಿಗೆ ಶಾಂತಿಯುತ ಜೀವನ, ಭದ್ರತೆ, ಸಮಾನತೆ, ನ್ಯಾಯಬದ್ಧ ಮತ್ತು ಗೌರವಯುತ ಜೀವನ ಸಿಗುವಂತಾಗಲು ಆರ್.ಸಂಪಂತನ್, ನಿರಂತರವಾಗಿ ಶ್ರಮಿಸಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಟಿಎನ್ಎ ಹಿರಿಯ ನಾಯಕ ಆರ್. ಸಂಪಂತನ್ ಅವರ ಕುಟುಂಬ ಮತ್ತು ಸ್ನೇಹಿತ ವರ್ಗಕ್ಕೆ ನನ್ನ ತೀವ್ರ ಸಂತಾಪ. ಅವರ ಭೇಟಿಯ ಸಂದರ್ಭಗಳನ್ನು ಸದಾ ನೆನಪಿಸಿಕೊಳ್ಳುವಂತಹದ್ದು. ಅವರು ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳರು ಶಾಂತಿ, ಭದ್ರತೆ, ಸಮಾನತೆ, ನ್ಯಾಯೋಚಿತ ಮತ್ತು ಗೌರವಯುತ ಜೀವನ ನಡೆಸುವಂತಾಗಲು ಸತತವಾಗಿ ಶ್ರಮಿಸಿದ್ದರು. ಶ್ರೀಲಂಕಾ ಮತ್ತು ಭಾರತದಲ್ಲಿನ ಅವರ ಸ್ನೇಹಿತರು ಮತ್ತು ಅನುಯಾಯಿಗಳಿಗೆ ಆರ್.ಸಂಪಂತನ್ ಅಗಲಿಕೆಯು ತುಂಬಲಾರದ ನಷ್ಟ.”
*****
(Release ID: 2030001)
Visitor Counter : 57
Read this release in:
English
,
Urdu
,
Marathi
,
Hindi
,
Hindi_MP
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam