ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು "ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧದ ಅಂತಾರಾಷ್ಟ್ರೀಯ ದಿನ"ದಂದು ರಾಷ್ಟ್ರದ ಜನರಿಗೆ ಶುಭಾಶಯ ಕೋರಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಮ್ಮ ಸರ್ಕಾರವು ಭಾರತವನ್ನು ಮಾದಕ ದ್ರವ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಬದ್ಧವಾಗಿದೆ. ಇಡೀ ಸರ್ಕಾರವೇ ಈ ಗುರಿಯನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು

ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಮೋದಿ ಸರ್ಕಾರವು ಎಲ್ಲ ಹಂತದಲ್ಲಿ ಸಮನ್ವಯತೆ ಸಾಧಿಸಿದೆ

ಡ್ರಗ್ಸ್ ವಿರುದ್ಧ 'ಶೂನ್ಯ ಸಹಿಷ್ಣುತೆ' ನೀತಿ ಹೊಂದಿರುವ  ನಮ್ಮ ಸರ್ಕಾರವು ಮಾದಕ ವ್ಯಸನವನ್ನು ಸಂಪೂರ್ಣವಾಗಿ ತೊಡೆದುಹಾಕಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು‌

ಸರ್ಕಾರದ ಡ್ರಗ್ಸ್ ವಿರುದ್ಧದ ಈ ಹೋರಾಟದಲ್ಲಿ ದೇಶವಾಸಿಗಳು ಸಹ ತಮ್ಮ  ಕೊಡುಗೆಯನ್ನು ನೀಡಬೇಕೆಂದು ನಾನು ವಿನಂತಿಸುತ್ತೇನೆ

ನಾವೆಲ್ಲರೂ ಒಗ್ಗೂಡಿ ಮಾದಕ ದ್ರವ್ಯಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಆರೋಗ್ಯಕರ, ಸಂತೋಷ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಲು ಪ್ರತಿಜ್ಞೆ ಮಾಡೋಣ

Posted On: 26 JUN 2024 6:16PM by PIB Bengaluru

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನ’ದಂದು ರಾಷ್ಟ್ರ ಜನರಿಗೆ ಶುಭಾಶಯ ಕೋರಿದರು. ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಅವರು, “ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನದ ಶುಭಾಶಯಗಳು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ನಮ್ಮ ಸರ್ಕಾರವು ಭಾರತವನ್ನು ಮಾದಕ ದ್ರವ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡುವ ತನ್ನ ಬದ್ಧತೆಯಲ್ಲಿ ದೃಢವಾಗಿದೆ ಮತ್ತು ಸಂಪೂರ್ಣ-ಸರ್ಕಾರದ ವಿಧಾನದೊಂದಿಗೆ ಈ ಗುರಿಯನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ.  ರಾಷ್ಟ್ರವನ್ನು ಮಾದಕ ದ್ರವ್ಯಗಳ ಪಿಡುಗಿನಿಂದ ಮುಕ್ತಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಜಗತ್ತನ್ನು ಉಡುಗೊರೆಯಾಗಿ ನೀಡುವ ನಮ್ಮ ಸಂಕಲ್ಪವನ್ನು ನಾವೆಲ್ಲರೂ ಸೇರಿ ಬಲಪಡಿಸೋಣ.

 

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ‘ಡ್ರಗ್ ಮುಕ್ತ ಭಾರತ’ಕ್ಕಾಗಿ ಶ್ರಮಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದ್ದಾರೆ.

'ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧದ ಅಂತಾರಾಷ್ಟ್ರೀಯ ದಿನ'ವಾದ ಇಂದು ಬಿಡುಗಡೆ ಮಾಡಿದ ತಮ್ಮ ಸಂದೇಶದಲ್ಲಿ, 'ಡ್ರಗ್ ಮುಕ್ತ ಭಾರತ' ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಸಂಕಲ್ಪವನ್ನು ಈಡೇರಿಸಲು ಶ್ರಮಿಸುತ್ತಿರುವ ದೇಶದ ವಿವಿಧ ಏಜೆನ್ಸಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶ್ರೀ ಅಮಿತ್ ಶಾ ಅಭಿನಂದಿಸಿ ಅವರಿಗೆ ಶುಭಾಶಯ ಕೋರಿದರು. ಅಖಿಲ ಭಾರತ 'ಡ್ರಗ್ ಫ್ರೀ ಫೋರ್ಟ್‌ನೈಟ್' ಅನ್ನು ಯಶಸ್ವಿಯಾಗಿ ಆಯೋಜಿಸಿದ  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. 

ಅಮಿತ್ ಶಾ ಅವರು ಮಾದಕ ವಸ್ತುಗಳು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲದೆ ಇಡೀ ಸಮಾಜ ಮತ್ತು ರಾಷ್ಟ್ರದ ಭದ್ರತೆಗೆ ಸವಾಲಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 'ಡ್ರಗ್ ಮುಕ್ತ ಭಾರತ' ನಿರ್ಮಾಣ ಮಾಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಮಾದಕ ವಸ್ತುಗಳ ವಿರುದ್ಧದ ತನ್ನ ಹೋರಾಟದಲ್ಲಿ ಮೋದಿ ಸರ್ಕಾರವು ಎಲ್ಲ ಹಂತದಲ್ಲಿ ಉತ್ತಮ ಸಮನ್ವಯತೆ ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು.

ಮಾದಕ ವಸ್ತುಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿಯಡಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸರ್ಕಾರವು ಮಾದಕ ವ್ಯಸನವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಂಕಲ್ಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಗೃಹ ಸಚಿವಾಲಯದ ಪ್ರಯತ್ನಗಳು, ಎನ್‌ಸಿಒಆರ್‌ಡಿ ಸ್ಥಾಪನೆ ಮತ್ತು ರಾಜ್ಯಗಳ ಪೊಲೀಸ್ ಇಲಾಖೆಗಳಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯ ರಚನೆಯೊಂದಿಗೆ ಈ ಹೋರಾಟವು ಮತ್ತಷ್ಟು ವೇಗವನ್ನು ಪಡೆದುಕೊಂಡಿದ್ದು ಉತ್ತಮ ಫಲಿತಾಂಶ ದೊರಕುತ್ತಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಮಾದಕ ದ್ರವ್ಯ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಎಲ್ಲಾ ಸಕಾರಾತ್ಮಕ ಕ್ರಮಗಳ ಜೊತೆಗೆ ಬೃಹತ್ ಸಾರ್ವಜನಿಕ ಸಹಭಾಗಿತ್ವವನ್ನು ಖಾತ್ರಿಪಡಿಸುವ ಮೂಲಕ ಸಂಪೂರ್ಣ ವಿಜಯವನ್ನು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಡ್ರಗ್ಸ್ ವಿರುದ್ಧ ಸರ್ಕಾರದ ಹೋರಾಟದಲ್ಲಿ ತಮ್ಮ ಕೊಡುಗೆ ನೀಡುವಂತೆ ನಾನು ದೇಶವಾಸಿಗಳನ್ನು ವಿನಂತಿಸುತ್ತೇನೆ. ನಾವೆಲ್ಲರೂ ಒಗ್ಗೂಡಿ ಮಾದಕ ದ್ರವ್ಯಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಆರೋಗ್ಯಕರ, ಸಂತೋಷದಾಯಕ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಲು ಪ್ರತಿಜ್ಞೆ ಮಾಡೋಣ.

ಅಕ್ರಮ ಮಾದಕ ವಸ್ತುಗಳ ವ್ಯಾಪಾರವನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯದ ನಿರಂತರ ಮತ್ತು ವಿವಿಧ ಪ್ರಯತ್ನಗಳ ಕಾರಣದಿಂದಾಗಿ ವಶಪಡಿಸಿಕೊಂಡ ಮಾದಕವಸ್ತುಗಳ ಪ್ರಮಾಣವು ಸುಮಾರು 100% ರಷ್ಟು ಹೆಚ್ಚಾಗಿದೆ ಮತ್ತುಅದಕ ವಸ್ತುಗಳ ವ್ಯಾಪಾರದಲ್ಲಿ ತೊಡಗಿರುವವರ  ವಿರುದ್ಧ ದಾಖಲಾಗಿರುವ ಪ್ರಕರಣಗಳು 152% ರಷ್ಟು ಹೆಚ್ಚಾಗಿವೆ. 

ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2006 ರಿಂದ 2013 ರ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1,257 ರಷ್ಟಿತ್ತು.‌ಈ ಸಂಖ್ಯೆ 2014-2023 ರ ಅವಧಿಯಲ್ಲಿ 3 ಪಟ್ಟು ಏರಿಕೆಯಾಗಿ 3,755 ಕ್ಕೆ ತಲುಪಿದೆ.  ಅದೇ ರೀತಿ ಬಂಧಿತರ ಸಂಖ್ಯೆ 2006-13 ರ ಅವಧಿಯಲ್ಲಿ 1,363 ರಷ್ಟಿತ್ತು. ಈ ಸಂಖ್ಯೆ 2014-23ರ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಾಗಿ 5,745ಕ್ಕೆ ಲುಇದೆ.  2006-13ರ ಅವಧಿಯಲ್ಲಿ   1.52 ಲಕ್ಷ ಕೆಜಿ ಗಳಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, ಕಳೆದ‌ ಹತ್ತು ವರ್ಷಗಳಲ್ಲಿ 3.95 ಲಕ್ಷ ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯವು  30 ಪಟ್ಟು ಹೆಚ್ಚಾಗಿದೆ.  2006-13ರ ಅವಧಿಯಲ್ಲಿ ವಶಪಡಿಸಿಕೊಂಡ ಡ್ರಗ್ಸ್ ನ ಮೌಲ್ಯ  ರೂ.768 ಕೋಟಿಯಾಗಿತ್ತು. ಅದರೆ ನಮ್ಮ ಅವಧಿಯಲ್ಲಿ .22,000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಶಾ ಹೇಳಿದರು. 

ಮೋದಿ ಸರ್ಕಾರದ ಅವಧಿಯಲ್ಲಿ 12,000 ಕೋಟಿ ರೂಪಾಯಿ ಮೌಲ್ಯದ 12 ಲಕ್ಷ ಕೆಜಿ ಡ್ರಗ್ಸ್ ಅನ್ನು ಮಾದಕ ದ್ರವ್ಯ ನಿಗ್ರಹ ಸಂಸ್ಥೆಗಳು ನಾಶಪಡಿಸಿವೆ. ಜೂನ್ 2023 ರವರೆಗೆ, ಎನ್‌ಸಿಬಿ ಅಂತಹ 23 ಪ್ರಕರಣಗಳಲ್ಲಿ ಹಣಕಾಸಿನ ತನಿಖೆ ನಡೆಸಿದ್ದು,  ₹74,75,00,531 ಮೌಲ್ಯದ ಆಸ್ತಿಯನ್ನು ಜಫ್ತು ಮಾಡಲಾಗಿದೆ.  


*****



(Release ID: 2029516) Visitor Counter : 7