ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ವೇದಿಕೆಯಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಮನ್ನಣೆ ಹೆಚ್ಚಳ – ಪ್ರಧಾನಮಂತ್ರಿ ಶ್ಲಾಘನೆ

Posted On: 27 JUN 2024 3:03PM by PIB Bengaluru

ಜಾಗತಿಕ ವೇದಿಕೆಯಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಗುರುತಿಸುವಿಕೆ ಹೆಚ್ಚುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಪ್ರಗತಿ ಮತ್ತು ನಾವಿನ್ಯತೆಗೆ ಅವಕಾಶಗಳನ್ನು ಒದಗಿಸುವ ತಮ್ಮ ಸೆ್ಕಾರದ ಬದ್ಧತೆಯ ಬಗ್ಗೆ ಬೆಳಕು ಚೆಲ್ಲಿದರು.   

ಟೈಮ್ಸ್ ಹೈಯರ್ ಎಜುಕೇಷನ್ ನ  ಮುಖ್ಯ ಜಾಗತಿಕ ವ್ಯವಹಾರಾಧಿಕಾರಿ ಶ್ರೀ‌.  ಫಿಲ್ ಬಾಟಿ ಅವರ ಪೋಸ್ಟ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡು ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ :

“ಜಾಗತಿಕ ವೇದಿಕೆಯಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ದಾಪುಗಾಲಿಡುತ್ತಿರುವುದನ್ನು ನೋಡಬಹುದಾಗಿರುವುದು ಉತ್ತಮ ಸಂಗತಿ. ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಆದ್ಯತೆಯು ಪ್ರೇರಣಾದಾಯಕ ಫಲಿತಾಂಶಗಳನ್ನು ನೀಡುತ್ತಿದೆ. ನಮ್ಮ ಶೈಕ್ಷಣಿಕ ಸಂಸ್ಥೆಗಳಿಗೆ ಬೆಂಬಲ ನೀಡುವುದನ್ನು ಹಾಗೂ ಪ್ರಗತಿ ಮತ್ತು ನಾವಿನ್ಯತೆಗೆ ಅವಕಾಶ ಒದಗಿಸುವುದನ್ನು ನಾವು ಮುಂದುವರಿಸುತ್ತೇವೆ. ಇದರಿಂದ ನಮ್ಮ ಯುವಜನತೆಗೆ ಹೆಚ್ಚಿನ ಅನುಕೂಲವಾಗಲಿದೆ.”
 

 

 

*****



(Release ID: 2029294) Visitor Counter : 7