ಪ್ರಧಾನ ಮಂತ್ರಿಯವರ ಕಛೇರಿ

2024 ರ ಅಂತಾರಾಷ್ಟ್ರೀಯ ಯೋಗ ದಿನದಂದು  ಜಮ್ಮು ಮತ್ತು ಕಾಶ್ಮೀರಿನ ಶ್ರೀನಗರದ ದಾಲ್ ಸರೋವರದಲ್ಲಿ ಯೋಗ ಸಾಧಕರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾತನಾಡಿದರು


"ಜಮ್ಮು ಮತ್ತು ಕಾಶ್ಮೀರದ ಜನರು ಯೋಗದ ಬಗ್ಗೆ ಇಂದು ತೋರಿದ ಉತ್ಸಾಹ ಮತ್ತು ಬದ್ಧತೆ ಚಿರಸ್ಥಾಯಿಯಾಗಲಿದೆ"

"ಯೋಗವು ಸ್ವಾಭಾವಿಕವಾಗಿ ಬರಬೇಕು ಮತ್ತು ಜೀವನದ ಸಹಜ ಭಾಗವಾಗಬೇಕು"

"ಧ್ಯಾನವು ಸ್ವಯಂ ಸುಧಾರಣೆಗೆ ಉತ್ತಮ ಸಾಧನವಾಗಿದೆ"

"ಯೋಗವು ಸಮಾಜಕ್ಕೆ ಎಷ್ಟು ಮುಖ್ಯವೋ ಪ್ರತಿಯೊಬ್ಬ ವ್ಯಕ್ತಿಗೂ ಅಷ್ಟೇ ಮುಖ್ಯ"

Posted On: 21 JUN 2024 10:10AM by PIB Bengaluru

ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀನಗರದ  ದಾಲ್ ಸರೋವರದಲ್ಲಿ ಆಯೋಜಿಸದ್ದ ಕಾರ್ಯಕ್ರಮದಲ್ಲಿ  ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು. 
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜಮ್ಮು ಮತ್ತು ಕಾಶ್ಮೀರದ ಜನರು ಯೋಗದ ಬಗ್ಗೆ ತೋರಿದ ಉತ್ಸಾಹ ಮತ್ತು ಬದ್ಧತೆಯ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಹೇಳಿದರು. ಮಳೆಯ ಮತ್ತು ತಾಪಮಾನದಲ್ಲಿನ ಕುಸಿತದಿಂದ ಉಂಟಾದ ಪ್ರತಿಕೂಲ ಹವಾಮಾನದ ಪರಿಣಾಮವಾಗಿ  ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ತಡವಾಗಿದ್ದರೂ ಅದು ಜನರ ಉತ್ಸಾಹವನ್ನು ಕುಗ್ಗಿಸುವಲ್ಲಿ ವಿಫಲವಾಗಿದೆ ಎಂದು ಅವರು ಒತ್ತಿ ಹೇಳಿದರು. 

ಯೋಗ ಜೀವನದ ಸಹಜ ಪ್ರಕ್ರಿಯೆಯನ್ನಾಗಿಸಿಕೊಳ್ಳುವ ಮಹತ್ವವನ್ನು ವಿವರಿಸಿದ ಶ್ರೀ ಮೋದಿ ಅವರು ಯೋಗವು ಸರಳ ರೂಪದಲ್ಲಿ ದೈನಂದಿನ ಜೀವನ ಭಾಗವಾದಾಗ ನಾವು ಅದರ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದರು. ಯೋಗಾಸನದ ಒಂದು ಭಾಗವಾಗಿರುವ ಧ್ಯಾನವು ಅದರ ಆಧ್ಯಾತ್ಮಿಕ ಸೂಚ್ಯಾರ್ಥಗಳ ಕಾರಣದಿಂದಾಗಿ ಸಾಮಾನ್ಯ ಜನರಿಗೆ ಕಠಿಣದಾಯಕವೆನಿಸಬಹುದು. ಆದರೆ ಧ್ಯಾನ  ಏಕಾಗ್ರತೆ ಮತ್ತು ವಸ್ತು ಅಥವಾ ವಿಷಯದ ಮೇಲೆ ಗಮನ ಕೇಂದ್ರೀಕರಿಸುವ ಪ್ರಕ್ರಿಯೆ ಎಂದು ಸುಲಭವಾಗಿ ಇದನ್ನು ಅರ್ಥೈಸಿಕೊಳ್ಳಬಹುದು. 

ಈ ಏಕಾಗ್ರತೆ ಮತ್ತು ಗಮನ ಕೇಂದ್ರೀಕೃತೆಯನ್ನು ಸತತ ಅಭ್ಯಾಸ ಮತ್ತು ಹಲವು ಟೆಕ್ನಿಕ್ ಗಳಿಂದ ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಮನಸ್ಸಿನ ಧ್ಯಾನಸ್ಥ ಸ್ಥಿತಿಯು  ಕನಿಷ್ಠ ಆಯಾಸದೊಂದಿಗೆ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಧ್ಯಾನವು ಅಂತಿಮವಾಗಿ ಒಂದು ಆಧ್ಯಾತ್ಮಿಕ ಪ್ರಯಾಣ. ಆದರೆ ಅದರ ಹೊರತಾಗಿಯೂ ಇದು ವ್ಯಕ್ತಿಗಳ ಸ್ವಯಂ-ಸುಧಾರಣೆ ಮತ್ತು ತರಬೇತಿಗೆ ಒಂದು ಉತ್ತಮ ಸಾಧನವಾಗಿದೆ ಎಂದು ಅವರು ಹೇಳಿದರು. 

"ಯೋಗವು ಸಮಾಜಕ್ಕೆ ಎಷ್ಟು ಮುಖ್ಯವೋ ಪ್ರತಿಯೊಬ್ಬ ವ್ಯಕ್ತಿಯ ಸ್ವಯಂ ಉನ್ನತಿಗೂ ಇದು ಅಷ್ಟೇ ಮುಖ್ಯ," ಎಂದು ಪ್ರಧಾನಿ ಮಂತ್ರಿಗಳುಈ ಒತ್ತಿ ಹೇಳಿದರು. ಯೋಗದಿಂದ ಸಮಾಜಕ್ಕೆ ಲಾಭವಾದಾಗ ಆ ಲಾಭ ಇಡೀ ಮನುಕುಲಕ್ಕೆ ತಲುಪುತ್ತದೆ ಎಂದರು. ಈಜಿಪ್ಟ್‌ನಲ್ಲಿ ಯೋಗದ ಕುರಿತು ಛಾಯಾಗ್ರಹಣ ಅಥವಾ ಯೋಗದ ಮಾಡುವ ಕುರಿತು ಆಯೋಜಿಸಲಾದ ಸ್ಪರ್ಧೆಯನ್ನು ತಾವು ವೀಕ್ಷಿಸಿದ್ದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವರ ಪ್ರಯತ್ನಗಳನ್ನು ಶ್ಲಾಘಿಸಿದರು. "ಯೋಗ ಮತ್ತು ಪ್ರವಾಸೋದ್ಯಮವು ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವಾಗಬಹುದು" ಎಂದು ಪ್ರಧಾನಮಂತ್ರಿ ಹೇಳಿದರು. 

ಭಾಷಣದ  ಅಂತ್ಯದಲ್ಲಿ ಪ್ರಧಾನ ಮಂತ್ರಿಯವರು, ಕಠಿಣ ಹವಾಮಾನ ಪರಿಸ್ಥಿತಿಯಿದ್ದರೂ ಭಾರೀ ಸಂಖ್ಯೆಯಲ್ಲಿ ಆಗಮಿಸಿ  2024 ರ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ ಜಮ್ಮು ಮತ್ತು ಕಾಶ್ಮೀರದ ಜನರ ಬದ್ಧತೆಯನ್ನು ಶ್ಲಾಘಿಸಿದರು. 

 

 

*****



(Release ID: 2027369) Visitor Counter : 28