ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿ ಶ್ರೀ ಜಾರ್ಜ್ ಕುರಿಯನ್ ಅಧಿಕಾರ ಸ್ವೀಕಾರ

ಪ್ರಕಟಣಾ ದಿನಾಂಕ: 11 JUN 2024 6:08PM by PIB Bengaluru

ಶ್ರೀ ಜಾರ್ಜ್ ಕುರಿಯನ್ ಅವರು ಇಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಜೂನ್ 9, 2024 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳು ಶ್ರೀ ಕುರಿಯನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಸಚಿವಾಲಯದ ಕಾರ್ಯದರ್ಶಿಗಳಾದ  ಶ್ರೀ ಶ್ರೀನಿವಾಸ ಕಟಿಕಿತಾಳ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಶ್ರೀ ಕುರಿಯನ್ ಅವರನ್ನು ಸ್ವಾಗತಿಸಿದರು.


ಶ್ರೀ ಕುರಿಯನ್ ಅವರು ಎಟ್ಟುಮನೂರಿನ ನಂಬಿಯಾಕುಲಂನವರು. ಶ್ರೀ ಕುರಿಯನ್ ಅವರು ಎಲ್ ಎಲ್ ಬಿ ಪದವೀಧರರಾಗಿದ್ದು, ಮಾಸ್ಟರ್ ಆಫ್ ಆರ್ಟ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿದ್ದಾರೆ. ಈ ಹಿಂದೆ ಅವರು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಶ್ರೀ ಕುರಿಯನ್ ಅವರು ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ  ಮಾತನಾಡುತ್ತಾ ಈ ಅವಕಾಶವನ್ನು ನೀಡಿದ ಪ್ರಧಾನ ಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ದೇಶದ ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಅವರು ಕೆಲಸ ಮಾಡುವುದಾಗಿ ಹೇಳಿದರು.

*****


(ಪ್ರಕಟಣೆ ಐ.ಡಿ.: 2024776) ವಿಸಿಟರ್ ಕೌಂಟರ್ : 88
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Hindi_MP , Telugu , Malayalam