ಉಕ್ಕು ಸಚಿವಾಲಯ

ಉಕ್ಕಿನ ಸಚಿವಾಲಯದ ಉಸ್ತುವಾರಿಯನ್ನು ವಹಿಸಿಕೊಂಡ ಶ್ರೀ ಹೆಚ್.ಡಿ.ಕುಮಾರಸ್ವಾಮಿ 

Posted On: 11 JUN 2024 8:08PM by PIB Bengaluru

ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ದೆಹಲಿಯ ಉದ್ಯೋಗ ಭವನದಲ್ಲಿ ಬೃಹತ್ ಕೈಗಾರಿಕೆಗಳ ಖಾತೆಯ ಜೊತೆಗೆ ಕೇಂದ್ರ ಉಕ್ಕಿನ ಖಾತೆ ಸಚಿವರಾಗಿ ಅಧಿಕಾರವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಉಕ್ಕು ಸಚಿವಾಲಯದ ಕಾರ್ಯದರ್ಶಿಗಳಾದ ನಾಗೇಂದ್ರ ನಾಥ್ ಸಿನ್ಹಾ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಚಿವರನ್ನು ಸ್ವಾಗತಿಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ದೇಶದ ಜಿಡಿಪಿ ಹೆಚ್ಚಳ ಸಾಧಿಸುವ ಉದ್ದೇಶದಿಂದ ಆರ್ಥಿಕತೆಯನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದರು. "ಇಡೀ ದೇಶದ ಸಮೃದ್ಧ ಬೆಳವಣಿಗೆಗೆ, ನಾವು ನಿರಂತರವಾಗಿ ದಣಿವರಿಯದೆ ಕೆಲಸ ಮಾಡುತ್ತೇವೆ" ಎಂದು ಭರವಸೆ ನೀಡಿದರು. 

ಈ ವೇಳೆ ಕೇಂದ್ರ ಸಚಿವರು ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರಿಂದ ಮಾಹಿತಿ ಪಡೆದುಕೊಂಡರು.

*****



(Release ID: 2024461) Visitor Counter : 50