ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಎಂಎಚ್ಎ ಯಾವಾಗಲೂ ಇದ್ದಂತೆ ರಾಷ್ಟ್ರ ಮತ್ತು ಅದರ ಜನರ ಸುರಕ್ಷತೆಗೆ ಬದ್ಧವಾಗಿರುತ್ತದೆ - ಶ್ರೀ ಅಮಿತ್ ಶಾ

ನರೇಂದ್ರ ಮೋದಿ 3.0 ಸರ್ಕಾರ ಭಾರತದ ಭದ್ರತೆಗಾಗಿ ತನ್ನ ಪ್ರಯತ್ನಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಭಯೋತ್ಪಾದನೆ, ಬಂಡಾಯ ಮತ್ತು ನಕ್ಸಲಿಸಂ ವಿರುದ್ಧ ಭಾರತವನ್ನು ತಡೆಗೋಡೆಯಾಗಿ ನಿರ್ಮಿಸುತ್ತದೆ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು

प्रविष्टि तिथि: 11 JUN 2024 5:40PM by PIB Bengaluru

ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ರಾಷ್ಟ್ರ ಮತ್ತು ಅದರ ಜನರ ಸುರಕ್ಷತೆಗೆ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಶ್ರೀ ಅಮಿತ್ ಶಾ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ನರೇಂದ್ರ ಮೋದಿ 3.0 ಸರ್ಕಾರ ಭಾರತದ ಭದ್ರತೆಗಾಗಿ ತನ್ನ ಪ್ರಯತ್ನಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಭಯೋತ್ಪಾದನೆ, ಬಂಡಾಯ ಮತ್ತು ನಕ್ಸಲಿಸಂ ವಿರುದ್ಧ ಭಾರತವನ್ನು ತಡೆಗೋಡೆಯಾಗಿ ನಿರ್ಮಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

 

IMG_9904 (1)

 

ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು. ರಾಷ್ಟ್ರದ ಗೌರವವನ್ನು ಕಾಪಾಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಮ್ಮ ಪೊಲೀಸ್ ಪಡೆಗಳ ಹುತಾತ್ಮರನ್ನು ಸ್ಮರಿಸುತ್ತೇವೆ ಮತ್ತು ಅವರ ತ್ಯಾಗದ ಕಥೆಯು ದೇಶಭಕ್ತಿಯ ಉತ್ಸಾಹವನ್ನು ಶಾಶ್ವತವಾಗಿ ಅಮರಗೊಳಿಸುತ್ತದೆ ಎಂದು ಅವರು ಹೇಳಿದರು.

 

VIS03019

072A8966

 

 

*****

 


(रिलीज़ आईडी: 2024451) आगंतुक पटल : 122
इस विज्ञप्ति को इन भाषाओं में पढ़ें: Khasi , English , Urdu , Marathi , हिन्दी , Hindi_MP , Manipuri , Punjabi , Gujarati , Odia , Telugu , Malayalam