ಚುನಾವಣಾ ಆಯೋಗ
ಹಿಂಸಾಚಾರ-ಮುಕ್ತ ಸಾರ್ವತ್ರಿಕ ಚುನಾವಣೆ; ರಾಷ್ಟ್ರಪಿತನಿಗೆ ಸಮರ್ಪಿಸಿದ ಚುನಾವಣಾ ಆಯೋಗ
ಮಹಾತ್ಮ ಗಾಂಧಿ ಅವರ ಅಹಿಂಸೆಯ ಸಂದೇಶವು ಶಾಂತಿಯುತ ಮತ್ತು ಹಿಂಸಾಚಾರ-ಮುಕ್ತ ಚುನಾವಣೆ ನಡೆಸುವ ನಮ್ಮ ಬದ್ಧತೆಗೆ ಪ್ರೇರೇಪಣೆ ನೀಡಿತು: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
Posted On:
06 JUN 2024 7:30PM by PIB Bengaluru
18ನೇ ಲೋಕಸಭೆಗೆ ಚುನಾಯಿತ ಸದಸ್ಯರ ಹೆಸರನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗೆ ಹಸ್ತಾಂತರಿಸಿದ ನಂತರ ಚುನಾವಣಾ ಆಯೋಗವು ಇಂದು ಸಂಜೆ ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿತು. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ, ಉಪ-ಚುನಾವಣೆಗಳ ಕಾರಣ ಮಾದರಿ ನೀತಿ ಸಂಹಿತೆ(ಎಂಸಿಸಿ) ಜಾರಿಯಲ್ಲಿರುವ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳನ್ನು ಹೊರತುಪಡಿಸಿ, ರಾಷ್ಟ್ರಾದ್ಯಂತ ಇಲ್ಲುಳಿದ ಭಾಗಗಳಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಮಾದರಿ ನೀತಿ ಸಂಹಿತೆ ಕಾರ್ಯ ನಿರ್ವಹಿಸುವುದಿಲ್ಲ ಅಥವಾ ಮುಕ್ತಾಯವಾಗಿದೆ.
ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತನಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಆಯೋಗ ನೀಡಿರುವ ಹೇಳಿಕೆ:
“18ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಸುವಂತೆ ರಾಷ್ಟ್ರವು ನಮಗೆ ನಿಯೋಜಿಸಿದ ಪವಿತ್ರ ಕಾರ್ಯವನ್ನು ಪೂರ್ಣಗೊಳಿಸಿದ ನಂತರ, ನಾವು ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಇಲ್ಲಿ ನಿಂತಿದ್ದೇವೆ. ಬಹುತೇಕ ಅಹಿಂಸಾತ್ಮಕ ಮಾರ್ಗದಲ್ಲಿ ಚುನಾವಣೆ ನಡೆಯಬೇಕೆಂಬ ಭಾರತೀಯರ ಇಚ್ಛೆಯನ್ನು ಪೂರೈಸಿದ ನಾವು, ನಮ್ಮ ಹೃದಯಾಂತರಾಳದ ನಮ್ರತೆಯಿಂದ ಇಲ್ಲಿ ನಿಂತಿದ್ದೇವೆ.
"ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ". 2024 ಮಾರ್ಚ್ 16ರಂದು 18ನೇ ಲೋಕಸಭೆ ಚುನಾವಣೆ ಘೋಷಣೆ ಆಗಿರುವುದಕ್ಕೆ ಮುಂಗಡ ಬದ್ಧತೆಯೇ ಇದಾಗಿದೆ. ಇಡೀ ಚುನಾವಣಾ ಪ್ರಕ್ರಿಯೆಯನ್ನು ಹಿಂಸೆಯಿಂದ ಮುಕ್ತವಾಗಿಡುವ ಈ ಸಂಕಲ್ಪಕ್ಕೆ ನಿಜವಾದ ಸ್ಫೂರ್ತಿಯೇ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿ. ಅವರು ಮಾನವರಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು ಮತ್ತು ಎಲ್ಲರಿಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪ್ರತಿಪಾದಿಸಿದರು.
ವಯಸ್ಕ ಮತದಾನ ಹಕ್ಕು "ಎಲ್ಲಾ ರೀತಿಯ ವರ್ಗಗಳ ಎಲ್ಲಾ ಸಮಂಜಸವಾದ ಆಕಾಂಕ್ಷೆಗಳನ್ನು ಪೂರೈಸಲು ಶಕ್ತಗೊಳಿಸುತ್ತದೆ" ಎಂಬುದು ಮಹಾತ್ಮರ ವಿಚಾರಧಾರೆಯಾಗಿದೆ. ಹಬ್ಬದ ಮನಸ್ಥಿತಿಯಲ್ಲಿರುವ ಮತದಾನ ಕೇಂದ್ರಗಳಲ್ಲಿ ಉದ್ದನೆಯ ಸರತಿ ಸಾಲುಗಳು ಮತ್ತು ಮತದಾನದ ಮೂಲಕ ತಮ್ಮ ಉಜ್ವಲ ಭವಿಷ್ಯ ನಿರ್ಧರಿಸುವ ಮತದಾರನ ಸಂಕಲ್ಪವೇ ಮಹಾತ್ಮರ ಮಹಾನ್ ಆದರ್ಶವಾಗಿದೆ ಮತ್ತು ಭಾರತದ ನಾಗರಿಕ ಪರಂಪರೆಗೆ ಸಾಕ್ಷಿಯಾಗಿದೆ.
ಆಯೋಗವು ಹೃನ್ಮನದ ಪ್ರಾಮಾಣಿಕತೆಯಿಂದ, ಅದನ್ನು ಖಚಿತಪಡಿಸಿಕೊಳ್ಳಲು ತನ್ನೆಲ್ಲಾ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದೆ. ಅತ್ಯಂತ ಸಾಮಾನ್ಯ ಭಾರತೀಯನ ಮತದಾನ ಹಕ್ಕನ್ನು ಯಾವುದೇ ದೃಷ್ಟಿಯಿಂದಲೂ ನಿರಾಕರಿಸಿಲ್ಲ, ಬದಲಿಗೆ ಅದನ್ನು ಬಲವಾಗಿ ಸಕ್ರಿಯಗೊಳಿಸಲಾಗಿದೆ. ವಿಶ್ವದ ಅತಿದೊಡ್ಡ ಚುನಾವಣಾ ಸ್ಪರ್ಧೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸೃಷ್ಟಿಸುತ್ತದೆ. ನಮ್ಮ ವಿಶಾಲವಾದ ಭೂದೃಶ್ಯದ ಮೇಲೆ ಕೋಟ್ಯಂತರ ಜನರನ್ನು ಒಳಗೊಂಡಿರುವ ಮತಹಬ್ಬದ ಸಕ್ರಿಯ ಚಟುವಟಿಕೆಯಲ್ಲಿ ಯಾವುದೇ ರೂಪದ ಹಿಂಸಾಚಾರ ಒಳನುಸುಳಲು ಅವಕಾಶ ನೀಡವುದಿಲ್ಲ. ಭಾರತದ ಎಲ್ಲಾ ರಾಜ್ಯಗಳು, ಜಮ್ಮು-ಕಾಶ್ಮೀರ ಮತ್ತು ಮಣಿಪುರ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರಬುದ್ಧ ನಡವಳಿಕೆಯ ಉದಾಹರಣೆ ರೂಪಿಸಿದ್ದು ಅಥವಾ ಸೃಷ್ಟಿಸಿದ್ದು, ಅದು ಭವಿಷ್ಯಕ್ಕೂ ಉತ್ತಮವಾಗಿರಲಿದೆ. ಶಾಂತಿ ಮತ್ತು ಅಭಿವೃದ್ಧಿಗೆ ಬುಲೆಟ್‌ಗಳಲ್ಲ, ಮತಗಳೇ ಮಾರ್ಗಗಳಾಗಿವೆ.
ಈಗ 76ನೇ ವರ್ಷಕ್ಕೆ ಕಾಲಿಡುತ್ತಿರುವ ಭಾರತದ ಚುನಾವಣಾ ಆಯೋಗದ ಸೇವೆಯು ಅಖಂಡ ಸಮರ್ಪಣೆಯೊಂದಿಗೆ ಮುಂದುವರಿಯಲಿದೆ ಎಂಬ ಸಂಕಲ್ದದೊಂದಿಗೆ ನಾವು ಸಹಿ ಹಾಕುತ್ತೇವೆ. ಅಶಾಂತಿ ಹುಟ್ಟು ಹಾಕಬಹುದಾದ ವದಂತಿಗಳು ಮತ್ತು ಆಧಾರರಹಿತ ಅನುಮಾನಗಳೊಂದಿಗೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ಹಾಳು ಮಾಡುವ ಎಲ್ಲಾ ಪ್ರಯತ್ನಗಳನ್ನು ನಾವು ತಿರಸ್ಕರಿಸಿದ್ದೇವೆ. ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಅಗಾಧ ನಂಬಿಕೆಯಿರುವ ಶ್ರೀಸಾಮಾನ್ಯನ ‘ಇಚ್ಛೆ’ ಮತ್ತು ‘ಬುದ್ಧಿವಂತಿಕೆ’ ಮೇಲುಗೈ ಸಾಧಿಸಿವೆ. ಮುಕ್ತ, ನ್ಯಾಯಸಮ್ಮತ ಮತ್ತು ಎಲ್ಲರನ್ನೂ ಒಳಗೊಂಡ ಚುನಾವಣೆ ನಡೆಸುವ ಮೂಲಕ ನಾವು ನೈತಿಕವಾಗಿ ಮತ್ತು ಕಾನೂನುಬದ್ಧವಾಗಿ ಯಾವಾಗಲೂ ಅದನ್ನು ಎತ್ತಿಹಿಡಿಯಲು ಬದ್ಧರಾಗಿದ್ದೇವೆ.
ಜೈ ಹಿಂದ್!”
*****
(Release ID: 2023381)
Visitor Counter : 201