ನೌಕಾ ಸಚಿವಾಲಯ

ಚಬಹಾರ್ ನ ಶಾಹಿದ್ ಬೆಹೆಷ್ಟಿ ಬಂದರು ಟರ್ಮಿನಲ್ ಅಭಿವೃದ್ಧಿಗಾಗಿ ಇಂಡಿಯಾ ಪೋರ್ಟ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಮತ್ತು ಇರಾನ್ ನ ಬಂದರುಗಳು ಮತ್ತು ಕಡಲ ಸಂಸ್ಥೆ (ಪಿಎಂಒ) ನಡುವೆ ದೀರ್ಘಕಾಲೀನ ಮುಖ್ಯ ಗುತ್ತಿಗೆ

Posted On: 13 MAY 2024 6:03PM by PIB Bengaluru

ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು 2024 ರ ಮೇ 13 ರಂದು ಇರಾನ್ ನ ಚಬಹಾರ್ ಗೆ ಭೇಟಿ ನೀಡಿ ಚಬಹಾರ್ ನ ಶಾಹಿದ್ ಬೆಹೆಷ್ಟಿ ಬಂದರು ಟರ್ಮಿನಲ್ ಅಭಿವೃದ್ಧಿಗೆ ದೀರ್ಘಕಾಲೀನ ಮುಖ್ಯ ಒಪ್ಪಂದಕ್ಕೆ ಅಂಕಿತ ಹಾಕುವ ಸಮಾರಂಭಕ್ಕೆ ಸಾಕ್ಷಿಯಾದರು. ಇಂಡಿಯಾ ಪೋರ್ಟ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಮತ್ತು ಇರಾನಿನ ಬಂದರುಗಳು ಮತ್ತು ಕಡಲ ಸಂಸ್ಥೆ (ಪಿಎಂಒ) ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಕೇಂದ್ರ ಸಚಿವರು ಇರಾನ್ ನ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವ ಘನತೆವೆತ್ತ ಮೆಹರ್ದಾದ್ ಬಜ್ರ್ಪಾಶ್ ಅವರೊಂದಿಗೆ ಫಲಪ್ರದ ದ್ವಿಪಕ್ಷೀಯ ಸಭೆ ನಡೆಸಿದರು. ಸಂಪರ್ಕ ಉಪಕ್ರಮಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮತ್ತು ಚಬಹಾರ್ ಬಂದರನ್ನು ಪ್ರಾದೇಶಿಕ ಸಂಪರ್ಕ ಕೇಂದ್ರವನ್ನಾಗಿ ಮಾಡುವ ತಮ್ಮ ನಾಯಕರ ಸಮಾನ  ದೃಷ್ಟಿಕೋನವನ್ನು ಸಚಿವರು ಸ್ಮರಿಸಿಕೊಂಡರು.

ಸಚಿವರ ಭೇಟಿ ಮತ್ತು ದೀರ್ಘಕಾಲೀನ ಒಪ್ಪಂದಕ್ಕೆ ಸಹಿ ಹಾಕಿರುವುದು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಅಫ್ಘಾನಿಸ್ತಾನ ಹಾಗು ವಿಶಾಲ ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ವ್ಯಾಪಾರದ ಹೆಬ್ಬಾಗಿಲಾಗಿ ಚಬಹಾರ್ ನ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಚಬಹಾರ್ ಬಂದರು ಯೋಜನೆಯ ಅಭಿವೃದ್ಧಿಯು ಭಾರತ-ಇರಾನ್ ಗಳ ನಡುವಣ  ಪ್ರಮುಖ ಯೋಜನೆಯಾಗಿದೆ.

*****



(Release ID: 2020499) Visitor Counter : 60