ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸೈಬರ್ ವಂಚಕರ ವಿರುದ್ಧ ದೂರಸಂಪರ್ಕ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ರಾಜ್ಯ ಪೊಲೀಸ್ ಜಂಟಿ ಕಾರ್ಯಾಚರಣೆ
28,200 ಮೊಬೈಲ್ ಹ್ಯಾಂಡ್ ಸೆಟ್ ಬ್ಲಾಕ್ ಮಾಡಲು ಮತ್ತು 20 ಲಕ್ಷ ಮೊಬೈಲ್ ಸಂಪರ್ಕಗಳ ಮರುಪರಿಶೀಲನೆಗೆ ದೂರಸಂಪರ್ಕ ಇಲಾಖೆ ನಿರ್ದೇಶನ
प्रविष्टि तिथि:
10 MAY 2024 1:21PM by PIB Bengaluru
ಸೈಬರ್ ವಂಚನೆ ಮತ್ತು ಹಣಕಾಸು ವಂಚನೆ ಪ್ರಕರಣಗಳಲ್ಲಿ ದೂರಸಂಪರ್ಕ ಸಂಪನ್ಮೂಲಗಳ ದುರ್ಬಳಕೆ ತಡೆಗೆ ದೂರಸಂಪರ್ಕ ಇಲಾಖೆ (ಡಿಒಟಿ), ಗೃಹ ವ್ಯವಹಾರಗಳ ಸಚಿವಾಲಯ (ಎಂ ಎಚ್ ಎ) ಮತ್ತು ರಾಜ್ಯ ಪೊಲೀಸರು ಕೈಜೋಡಿಸಿದ್ದಾರೆ. ವಂಚಕರ ಜಾಲ ತೊಡೆದು ಹಾಕಿ, ಡಿಜಿಟಲ್ ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸುವುದು ಈ ಸಹಕಾರ ಪ್ರಯತ್ನ ಉದ್ದೇಶವಾಗಿದೆ.
ಸೈಬರ್ ವಂಚನೆಯಲ್ಲಿ 28,200 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ದುರ್ಬಳಕೆ ಮಾಡಲಾಗಿತ್ತು ಎಂಬುದು ಎಂ ಎಚ್ ಎ ಮತ್ತು ರಾಜ್ಯ ಪೊಲೀಸರು ನಡೆಸಿದ ವಿಶ್ಲೇಷಣೆಗಳಿಂದ ತಿಳಿದುಬಂದಿದೆ. ದೂರಸಂಪರ್ಕ ಇಲಾಖೆ ಮುಂದುವರಿದು, ಇನ್ನಷ್ಟು ವಿಶ್ಲೇಷಣೆಗಳನ್ನು ನಡೆಸಿದ್ದು, ಸುಮಾರು 20 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಈ ಹ್ಯಾಂಡ್ ಸೆಟ್ ಗಳಲ್ಲಿ ಬಳಸಲಾಗಿತ್ತು ಎಂಬುದನ್ನು ಪತ್ತೆ ಮಾಡಿದೆ. ಹೀಗಾಗಿ, ದೇಶವ್ಯಾಪಿಯಾಗಿ ದೂರಸಂಪರ್ಕ ಸೇವಾದಾತರು ತಕ್ಷಣವೇ 28,200 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಬ್ಲಾಕ್ ಮಾಡುವಂತೆ ಮತ್ತು ಈ ಹ್ಯಾಂಡ್ ಸೆಟ್ ಗಳಲ್ಲಿ ಬಳಸಲಾದ 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ಪುನಃ ಪರಿಶೀಲಿಸುವಂತೆ (ರಿ-ವೆರಿಫಿಕೇಷನ್) ಮಾಡುವಂತೆ ದೂರಸಂರ್ಪಕ ಇಲಾಖೆ ನಿರ್ದೇಶನ ನೀಡಿದೆ. ಒಂದು ವೇಳೆ ಮರುಪರಿಶೀಲನೆ ಸಾಧ್ಯವಾಗದೇ ಇದ್ದಲ್ಲಿ ಮೊಬೈಲ್ ಸಂಪರ್ಕ ಕಡಿತಗೊಳಿಸುವಂತೆ ಕೂಡ ಸೂಚನೆ ನೀಡಿದೆ.
ಈ ಏಕೀಕೃತ ವಿಧಾನವು ಸಾರ್ವಜನಿಕ ಸುರಕ್ಷತೆಯೆಡೆಗೆ ಮತ್ತು ದೂರಸಂಪರ್ಕ ಮೂಲಸೌಕರ್ಯದ ಸಮಗ್ರತೆಯ ಸಂರಕ್ಷಣೆಗೆ ಸಂಘಟಿತ ಬದ್ಧತೆಯನ್ನು ಪ್ರದರ್ಶಿಸುತ್ತದೆ ಮತ್ತು ಈ ಮೂಲಕ ಸುರಕ್ಷಿತ ಡಿಜಿಟಲ್ ಪರಿಸರ ಖಾತರಿಪಡಿಸುತ್ತದೆ.
*****
(रिलीज़ आईडी: 2020393)
आगंतुक पटल : 126