ಚುನಾವಣಾ ಆಯೋಗ
azadi ka amrit mahotsav

ಸಾರ್ವತ್ರಿಕ ಚುನಾವಣೆಯ 3ನೇ ಹಂತದಲ್ಲಿ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಂತಿಯುತ ಮತದಾನ


ಮತದಾನದ ಪ್ರಮಾಣ - ರಾತ್ರಿ 8 ಗಂಟೆಗೆ ಶೇ.61.45

20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 283 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ; ಚುನಾವಣೆಯು ಅರ್ಧ ದಾರಿ ಮುಗಿಸಿದೆ

75 ಅಂತಾರಾಷ್ಟ್ರೀಯ ಪ್ರತಿನಿಧಿಗಳು ಹಂತ 3 ರಲ್ಲಿ ಮತದಾನಕ್ಕೆ ಸಾಕ್ಷಿಯಾದರು; ಭಾರತದ ಚುನಾವಣಾ ಪ್ರಕ್ರಿಯೆಗಳನ್ನು ಶ್ಲಾಘಿಸಿದರು

Posted On: 07 MAY 2024 8:43PM by PIB Bengaluru

 

 

 

2024 ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಮತದಾನವು ಇಂದು ಬೆಳಿಗ್ಗೆ 7 ಗಂಟೆಗೆ 93 ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಯಿತು, ರಾತ್ರಿ 8 ಗಂಟೆಗೆ ಅಂದಾಜು ಶೇ.61.45 ರಷ್ಟು ಮತದಾನವಾಗಿತ್ತು. ಸಂಜೆ 6 ಗಂಟೆಯವರೆಗೆ ಮತದಾನವಿದ್ದರೂ ಹಲವು ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು. 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮತದಾರರು ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಉತ್ಸಾಹದಿಂದ ಪಾಲ್ಗೊಂಡರು, ಕೆಲವು ಪ್ರದೇಶಗಳಲ್ಲಿ ಬಿಸಿಲಿನ ಶಾಖದ ವಾತಾವರಣದ ಪರಿಸ್ಥಿತಿಗಳನ್ನು ಎದುರಿಸಿದರು. ಈ ಹಂತದಿಂದ ಪ್ರಾರಂಭಿಸಿ, ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪ್ರಮುಖ ಟೆಲಿಕಾಂ ಸೇನಾ ಪೂರೈಕೆದಾರರ ಬೆಂಬಲದೊಂದಿಗೆ ರಾಷ್ಟ್ರೀಯ ಮತ್ತು ರಾಜ್ಯ ಐಕಾನ್‌ ಗಳಿಂದ ಎಸ್‌ ಎಂ ಎಸ್‌ ಎಚ್ಚರಿಕೆಗಳು, ವ್ಯಾಟ್ಸ್‌ ಆಪ್ ಸಂದೇಶಗಳು ಮತ್ತು ಧ್ವನಿ ಕರೆಗಳ ವ್ಯವಸ್ಥೆಯನ್ನು ಭಾರತ ಚುನಾವಣಾ ಆಯೋಗ ಪ್ರಾರಂಭಿಸಿದೆ. ಹಂತ-3 ರ ಮುಕ್ತಾಯದೊಂದಿಗೆ, 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2024 ರ ಸಾರ್ವತ್ರಿಕ ಚುನಾವಣೆಗಳಿಗಾಗಿ 283 ಲೋಕಸಭಾ ಕ್ಷೇತ್ರಗಳಲ್ಲಿ ಈಗ ಮತದಾನ ಮುಗಿದಿದೆ. ಈ ಹಂತದಲ್ಲಿ ಒಟ್ಟು 1331 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

 

ImageImageImageImage

ಮತದಾನ ಕೇಂದ್ರಗಳಲ್ಲಿ ಮಹಿಳಾ ಮತದಾರರು

 

ಮತದಾರರ ಅಂಕಿಅಂಶ ಮತ್ತು ಮತದಾನದ ಪ್ರಮಾಣ:

ಮೂರನೇ ಹಂತದಲ್ಲಿ ಮತದಾನ ನಡೆದಿರುವ 93 ಲೋಕಸಭಾ ಕ್ಷೇತ್ರಗಳ ಪ್ರತಿ ರಾಜ್ಯ/ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಅಂದಾಜು ಮತದಾನದ ಡೇಟಾ ಈಗಾಗಲೇ ಮತದಾರರ ಮತದಾನದ ಅಪ್ಲಿಕೇಶನ್ (ವಿಟಿಆರ್ ಅಪ್ಲಿಕೇಶನ್) ಲಭ್ಯವಿದೆ. ಮಾಧ್ಯಮ ಮತ್ತು ಇತರ ಭಾಗೀದಾರರ ಅನುಕೂಲಕ್ಕಾಗಿ ರಾಜ್ಯ/ಲೋಕಸಭಾ ಕ್ಷೇತ್ರ/ವಿಧಾನಸಭಾ ಕ್ಷೇತ್ರವಾರು ಅಂಕಿಅಂಶಗಳ ಜೊತೆಗೆ ಒಟ್ಟು ಹಂತ-ವಾರು ಮತದಾನವನ್ನು ತೋರಿಸಲು ಆಯೋಗವು ವಿಟಿಆರ್ ಅಪ್ಲಿಕೇಶನ್‌ ನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ವಿಟಿಆರ್ ಅಪ್ಲಿಕೇಶನ್ ಈ ಕೆಳಗಿನ ಲಿಂಕ್‌ನಲ್ಲಿ ಲಭ್ಯವಿದೆ:

 

https://play.google.com/store/apps/details?id=in.gov.eci.pollturnout&hl=en_IN

https://apps.apple.com/in/app/voter-turnout-app/id1536366882

 

ವಿವಿಧ ಮತಗಟ್ಟೆಗಳು ಔಪಚಾರಿಕವಾಗಿ ಮತದಾನವನ್ನು ಮುಕ್ತಾಯಗೊಳಿಸಿ ಪ್ರತಿ ಮತಗಟ್ಟೆಯಲ್ಲಿನ ಅಭ್ಯರ್ಥಿಗಳ ಪೋಲಿಂಗ್ ಏಜೆಂಟರಿಗೆ ಫಾರ್ಮ್ 17 ಸಿ ಹಸ್ತಾಂತರಿಸುವುದರಿಂದ ರಾತ್ರಿ 8 ಗಂಟೆಯವರೆಗಿನ ಅಂದಾಜು ಮತದಾನದ ಅಂಕಿಅಂಶಗಳನ್ನು ವಿಟಿಆರ್ ಅಪ್ಲಿಕೇಶನ್‌ನಲ್ಲಿ ನಿರಂತರವಾಗಿ ನವೀಕರಿಸಲಾಗುತ್ತದೆ. ಶಾಸನಬದ್ಧ ಆವಶ್ಯಕತೆಗಳ ಪ್ರಕಾರ, ಪ್ರತಿ ಮತಗಟ್ಟೆಯಲ್ಲಿ ಮತದಾರರ ಮತದಾನದ ಪ್ರಮಾಣವನ್ನು ಫಾರ್ಮ್ 17ಸಿ ಯಲ್ಲಿ ಸಂಪೂರ್ಣ ಸಂಖ್ಯೆಯಲ್ಲಿ ದಾಖಲಿಸಬೇಕು, ಅದು ಚಾಲ್ತಿಯಲ್ಲಿದೆ. ಪಾರದರ್ಶಕತೆಯ ಮಾನದಂಡವಾಗಿ, ಚುನಾವಣಾ ಅಧಿಕಾರಿ ಮತ್ತು ಪ್ರಸ್ತುತ ಎಲ್ಲಾ ಪೋಲಿಂಗ್ ಏಜೆಂಟರಿಂದ ಸಹಿ ಮಾಡಲಾದ ನಮೂನೆ 17ಸಿ ನ ಪ್ರತಿಗಳನ್ನು ಸ್ಪರ್ಧಿಸಿದ ಅಭ್ಯರ್ಥಿಗಳ ಎಲ್ಲಾ ಪೋಲಿಂಗ್ ಏಜೆಂಟರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಹೀಗಾಗಿ, ಮತ ಚಲಾವಣೆಯಾದ ನೈಜ ಸಂಖ್ಯೆಯ ಮತಗಳ ಬೂತ್‌ವಾರು ಡೇಟಾ ಯಾವಾಗಲೂ ಅಭ್ಯರ್ಥಿಗಳ ಬಳಿ ಲಭ್ಯವಿರುತ್ತದೆ, ಇದು ಶಾಸನಬದ್ಧ ಅವಶ್ಯಕತೆಯಾಗಿದೆ.

ಮಾಧ್ಯಮ ಸೇರಿದಂತೆ ಎಲ್ಲಾ ಭಾಗೀದಾರರ ಹೆಚ್ಚಿನ ಪಾರದರ್ಶಕತೆ ಮತ್ತು ಅನುಕೂಲಕ್ಕಾಗಿ ಮತ್ತಷ್ಟು ಕ್ರಮವಾಗಿ, ಹಂತ 1, ಹಂತ 2 ಮತ್ತು ಹಂತ 3 ಕ್ಕಾಗಿ ಲೋಕಸಭಾ ಕ್ಷೇತ್ರವಾರು ಮತದಾರರ ಡೇಟಾವನ್ನು ಅನುಕ್ರಮವಾಗಿ A1, A2 ಮತ್ತು A3 ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಟಿಆರ್ ಆ್ಯಪ್‌ ನಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ಅಂಕಿಅಂಶಗಳೊಂದಿಗೆ ಒಟ್ಟು ಲೋಕಸಭಾ ಕ್ಷೇತ್ರವಾರು ಮತದಾನದ ಅಂಕಿಅಂಶಗಳನ್ನು ನವೀಕರಿಸಿದಾಗ ಮತದಾರರ ಸಂಖ್ಯೆಯನ್ನು ಲೆಕ್ಕಾಚಾರ ಮಾಡಲು ಇದು ಅನುಕೂಲವಾಗುತ್ತದೆ.

ರಾತ್ರಿ 8 ಗಂಟೆಗೆ ರಾಜ್ಯವಾರು ಅಂದಾಜು ಮತದಾನದ ಪ್ರಮಾಣ ಈ ಕೆಳಗಿನಂತಿದೆ:

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲೋಕಸಭಾ ಕ್ಷೇತ್ರಗಳ ಸಂಖ್ಯೆ

ಅಂದಾಜು ಶೇಕಡಾವಾರು ಮತದಾನ

1

ಅಸ್ಸಾಂ

4

75.26

2

ಬಿಹಾರ

5

56.55

3

ಛತ್ತೀಸಗಢ

 

7

66.99

4

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು

2

65.23

5

ಗೋವಾ

2

74.27

6

ಗುಜರಾತ್

25

56.76

7

ಕರ್ನಾಟಕ

14

67.76

8

ಮಧ್ಯಪ್ರದೇಶ

9

63.09

9

ಮಹಾರಾಷ್ಟ್ರ

11

54.77

10

ಉತ್ತರ ಪ್ರದೇಶ

10

57.34

11

ಪಶ್ಚಿಮ ಬಂಗಾಳ

4

73.93

 

11 ರಾಜ್ಯಗಳು (93 ಲೋಕಸಭಾ ಕ್ಷೇತ್ರಗಳು

93

61.45

 

ಈ ಅಂಕಿಅಂಶವು ಕ್ಷೇತ್ರ ಅಧಿಕಾರಿಯು ಸಿಸ್ಟಂಗಳಲ್ಲಿ ತುಂಬಿದ ಮಾಹಿತಿಯ ಪ್ರಕಾರ ಇದೆ.

ಇದು ಅಂದಾಜು ಅಂಕಿಅಂಶವಾಗಿದೆ, ಏಕೆಂದರೆ ಕೆಲವು ಮತದಾನ ಕೇಂದ್ರಗಳಿಂದ (PS) ಡೇಟಾ ಸಮಯ ತೆಗೆದುಕೊಳ್ಳುತ್ತದೆ ಮತ್ತು ಈ ಅಂಕಿಅಂಶವು ಪೋಸ್ಟಲ್ ಬ್ಯಾಲೆಟ್ ಅನ್ನು ಒಳಗೊಂಡಿಲ್ಲ. ಪ್ರತಿ ಮತದಾನ ಕೇಂದ್ರಗಳಲ್ಲಿ ದಾಖಲಾದ ಮತಗಳ ಅಂತಿಮ ವಾಸ್ತವಿಕ ಲೆಕ್ಕವನ್ನು ಫಾರ್ಮ್ 17 ಸಿ ಯಲ್ಲಿ ಎಲ್ಲಾ ಪೋಲಿಂಗ್ ಏಜೆಂಟರೊಂದಿಗೆ ಮತದಾನದ ಕೊನೆಯಲ್ಲಿ ಹಂಚಿಕೊಳ್ಳಲಾಗುತ್ತದೆ.

ಭಾಗೀದಾರರಿಗೆ ಮತ್ತಷ್ಟು ಅನುಕೂಲವಾಗುವಂತೆ, ಆಯೋಗವು ಮೇಲಿನ ಕೋಷ್ಟಕವನ್ನು ನವೀಕರಿಸಲು ನಿರ್ಧರಿಸಿದೆ ಮತ್ತು ಇಂದು ರಾತ್ರಿ 11.30 ರ ಹೊತ್ತಿಗೆ ಅಂದಾಜು ಮತದಾನದ ಪ್ರಮಾಣವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಮತದಾನದಲ್ಲಿ ಭಾಗವಹಿಸಿದವರು ಹಿಂತಿರುಗುತ್ತಲೇ ಇರುವುದರಿಂದ ಕ್ಷೇತ್ರ ಮಟ್ಟದ ಅಧಿಕಾರಿಗಳು ಅದನ್ನು ನವೀಕರಿಸುವುದನ್ನು ಮುಂದುವರಿಸುತ್ತಾರೆ ಮತ್ತು ವಿಟಿಆರ್ ಆ್ಯಪ್‌ನಲ್ಲಿ ಲೋಕಸಭಾ ಕ್ಷೇತ್ರವಾರು (ಆಯಾ ವಿಧಾನಸಭಾ ಕ್ಷೇತ್ರಗಳ ಜೊತೆಗೆ) ಲಭ್ಯವಿರುತ್ತದೆ.

ನಿಗದಿತ ವಿಧಾನದ ಪ್ರಕಾರ, ಚುನಾವಣಾ ಪೇಪರ್‌ ಪರಿಶೀಲನೆಯು ಮತದಾನದ ದಿನದ ನಂತರ ಅಭ್ಯರ್ಥಿಗಳು ಅಥವಾ ಅವರ ಅಧಿಕೃತ ಪೋಲಿಂಗ್ ಏಜೆಂಟರ ಸಮ್ಮುಖದಲ್ಲಿ ನಡೆಯುತ್ತದೆ. ಯಾವುದಾದರೂ ಮರುಮತದಾನವನ್ನು ನಡೆಸುವ ನಿರ್ಧಾರವನ್ನು ಸಹ ನಂತರ ತೆಗೆದುಕೊಳ್ಳಲಾಗುತ್ತದೆ. ಕೆಲವು ಮತಗಟ್ಟೆಗಳವರು ಮತದಾನದ ದಿನದ ನಂತರ ಭೌಗೋಳಿಕ/ವ್ಯವಸ್ಥಾಪನಾ ಪರಿಸ್ಥಿತಿಗಳನ್ನು ಅವಲಂಬಿಸಿ ಹಿಂತಿರುಗುತ್ತಾರೆ. ಆಯೋಗವು ಪರಿಶೀಲನೆಯ ನಂತರ ಮತ್ತು ಮರುಮತದಾನದ ಸಂಖ್ಯೆ/ವೇಳಾಪಟ್ಟಿಯನ್ನು ಅವಲಂಬಿಸಿ, ನವೀಕರಿಸಿದ ಮತದಾರರ ಮತದಾನದ ಪ್ರಮಾಣವನ್ನು 11.5.2024 ರೊಳಗೆ ಲಿಂಗವಾರು ಅಂಕಿಅಂಶಗಳೊಂದಿಗೆ ಪ್ರಕಟಿಸುತ್ತದೆ. ಯಾವುದೇ ಸಂದರ್ಭದಲ್ಲಿ ವಿಟಿಆರ್ ಅಪ್ಲಿಕೇಶನ್ ಎಂದಿನಂತೆ ನವೀಕರಿಸಿದ ಅಂಕಿಅಂಶಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸುತ್ತದೆ.‌

ImageImage

ImageImage

ಮತಗಟ್ಟೆಗಳಲ್ಲಿ ಮತದಾರರು

ಅತಿ ಹೆಚ್ಚು ರೆಸಲ್ಯೂಶನ್ ಇರುವ ಮತದಾನ ದಿನದ ಫೋಟೋಗಳು ಮತ್ತು ಮನುಷ್ಯ ಮತ್ತು ವಸ್ತುಗಳ ಚಲನೆಯ ಸಂಬಂಧಿತ ಲಾಜಿಸ್ಟಿಕ್, ಮತಗಟ್ಟೆ ಅಧಿಕಾರಿಗಳ ಸಾಗಣೆ, ಮತದಾನ ಕೇಂದ್ರಗಳು, ಮತದಾರರ ಉತ್ಸಾಹದ ಫೋಟೋಗಳನ್ನು ಇಲ್ಲಿ ನೋಡಬಹುದುhttps://www.eci.gov.in/ge-2024-photogallery

ಸುಗಮ ಮತ್ತು ಶಾಂತಿಯುತ ಚುನಾವಣೆಯ ಆಯೋಜನೆ

ದೇಶದ ಸಂಪೂರ್ಣ ಈಶಾನ್ಯ ಭಾಗ, ಛತ್ತೀಸಗಢ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಮಾವೋವಾದಿಗಳಿಂದ ಬಾಧಿತ ಮತ್ತು ದುರ್ಬಲ ಪ್ರದೇಶಗಳನ್ನು ಒಳಗೊಂಡ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನವು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಿತು. ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರ ನೇತೃತ್ವದ ಆಯೋಗವು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಅಂಶಗಳ ಮೇಲೆ ನಿಯಮಿತವಾದ ನಿಗಾ ಇರಿಸಿದೆ. ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಮತದಾರರಿಗೆ ಭಯ ಅಥವಾ ಆಮಿಷವಿಲ್ಲದೆ ಮತ ಚಲಾಯಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿವೆ.

 

ImageImage

ಭಾರತದ ಪ್ರಜಾಪ್ರಭುತ್ವವನ್ನು ಜಗತ್ತಿಗೆ ತೋರಿಸುತ್ತಿದೆ

ಹಂತ-3 ರಲ್ಲಿ, 23 ದೇಶಗಳ 75 ಅಂತರರಾಷ್ಟ್ರೀಯ ಪ್ರತಿನಿಧಿಗಳು 6 ರಾಜ್ಯಗಳ ಅನೇಕ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು. ಪ್ರತಿನಿಧಿಗಳು ಮತಗಟ್ಟೆ ತಂಡಗಳಿಗೆ ಮತದಾನ ಸಾಮಗ್ರಿಗಳು ಮತ್ತು ಮತಯಂತ್ರಗಳ ರವಾನೆ ಪ್ರಕ್ರಿಯೆಯನ್ನು ವೀಕ್ಷಿಸಿದರು ಮತ್ತು ಮತದಾರರ ಪ್ರಮಾಣ, ಪಾರದರ್ಶಕತೆ ಮತ್ತು ಮುಖ್ಯವಾಗಿ ಹಬ್ಬದ ಮನಸ್ಥಿತಿಯನ್ನು ಶ್ಲಾಘಿಸಿದರು.

https://static.pib.gov.in/WriteReadData/userfiles/image/image0117AF9.jpghttps://static.pib.gov.in/WriteReadData/userfiles/image/image012VZW2.jpg

ಫಿಲಿಪೈನ್ಸ್ ಮತ್ತು ಶ್ರೀಲಂಕಾದ ಪ್ರತಿನಿಧಿಗಳು ಭೋಪಾಲದಲ್ಲಿ ಮತದಾನ ಕೇಂದ್ರಕ್ಕೆ ಭೇಟಿ ನೀಡಿದರು.

https://static.pib.gov.in/WriteReadData/userfiles/image/image013J6OZ.jpghttps://static.pib.gov.in/WriteReadData/userfiles/image/image014EFQU.jpg

ಗೋವಾದಲ್ಲಿ ಭೂತಾನ್, ಮಂಗೋಲಿಯಾ ಮತ್ತು ಇಸ್ರೇಲ್‌ ಪ್ರತಿನಿಧಿಗಳು

ಮತದಾರರ ಅನುಕೂಲಕ್ಕಾಗಿ ಶಾಮಿಯಾನ, ಕುಡಿಯುವ ನೀರು, ವೈದ್ಯಕೀಯ ಕಿಟ್‌ ಗಳು, ಫ್ಯಾನ್‌ ಗಳನ್ನು ಒದಗಿಸುವುದು ಸೇರಿದಂತೆ ಬಿಸಿಲಿನ ಶಾಖದ ವಾತಾವರಣದ ಪರಿಣಾಮಗಳನ್ನು ತಗ್ಗಿಸಲು ವಿಶೇಷ ವ್ಯವಸ್ಥೆ ಮಾಡಲಾಯಿತು. ಬುಡಕಟ್ಟು ಸಂಸ್ಕೃತಿ ಮತ್ತು ಸ್ಥಳೀಯ ವಿಷಯಗಳಲ್ಲಿ ಅಲಂಕೃತವಾದ ಮತಗಟ್ಟೆಗಳೊಂದಿಗೆ ಬುಡಕಟ್ಟು ಗುಂಪುಗಳ ನಡುವೆ ಮತದಾನವನ್ನು ಸುಲಭಗೊಳಿಸಲು ಆಯೋಗವು ವಿಶೇಷ ಪ್ರಯತ್ನಗಳನ್ನು ಮಾಡಿತು. ಬುಡಕಟ್ಟು ಜನಾಂಗದ ಮಹಿಳಾ ಮತದಾರರು ಮಕ್ಕಳೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಛತ್ತೀಸಗಢದ ಸರ್ಗುಜಾ ಲೋಕಸಭಾ ಕ್ಷೇತ್ರದಲ್ಲಿನ ಮತದಾನ ಕೇಂದ್ರದಲ್ಲಿ ಒಂದು ಕುಟುಂಬದ ಐದು ತಲೆಮಾರುಗಳು ಒಟ್ಟಿಗೆ ಮತ ಚಲಾಯಿಸಿದರು.

https://static.pib.gov.in/WriteReadData/userfiles/image/image015EI4W.jpghttps://static.pib.gov.in/WriteReadData/userfiles/image/image0164220.jpg

ಕರ್ನಾಟಕದ ಶಿವಮೊಗ್ಗದಲ್ಲಿ ಮತಗಟ್ಟೆ ಮತ್ತು ಗುಜರಾತ್‌ನ ವಲ್ಸಾದ್‌ ನಲ್ಲಿ ಪರಿಸರ ಸ್ನೇಹಿ ಮತಗಟ್ಟೆ

https://static.pib.gov.in/WriteReadData/userfiles/image/image0173V11.jpghttps://static.pib.gov.in/WriteReadData/userfiles/image/image01719RU.jpg

ಛತ್ತೀಸಗಢದ ಮತಗಟ್ಟೆಯಲ್ಲಿ  ಪಹಾಡಿ ಕೊರ್ವಾ ಪಿವಿಟಿಜಿಗಳು

https://static.pib.gov.in/WriteReadData/userfiles/image/image019A4HL.jpg https://static.pib.gov.in/WriteReadData/userfiles/image/image020EYX6.jpg

ಗುಜರಾತ್‌ನ ಅಲಿಯಾಬೆಟ್ ದ್ವೀಪದಲ್ಲಿ ಶಿಪ್ಪಿಂಗ್ ಕಂಟೈನರ್ ಮತಗಟ್ಟೆ                         5 ತಲೆಮಾರುಗಳ ಮತದಾರರು ಒಟ್ಟಾಗಿ ಮತ ಚಲಾಯಿಸಿದ ಸೆಮ್ಲಿ ಮತಗಟ್ಟೆ, ಛತ್ತೀಸಗಢ

 

ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಕರ್ನಾಟಕ, ಉತ್ತರ ಪ್ರದೇಶ, ಗೋವಾ ಮತ್ತು ಛತ್ತೀಸಗಢ ಹಂತದಲ್ಲಿ ಮತದಾನ ನಡೆದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾಗಿವೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಮತದಾನವನ್ನು ಹಂತ-6ಕ್ಕೆ ಮರು ನಿಗದಿಪಡಿಸಲಾಗಿದೆ. ಅಲ್ಲದೆ, ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದ ಕಾರಣ ಚುನಾವಣೆ ನಡೆಯಲಿಲ್ಲ.

ಮುಂದಿನ ಹಂತದ (ಹಂತ 4) ಮತದಾನವು ಮೇ 13, 2024 ರಂದು 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 96 ಲೋಕಸಭಾ ಕ್ಷೇತ್ರಗಳಲ್ಲಿ ನಿಗದಿಯಾಗಿದೆ.

ಅನುಬಂಧಗಳು – ಲೋಕಸಭಾ ಕ್ಷೇತ್ರವಾರು ಮತದಾರರ ಡೇಟಾ

ಅನುಬಂಧ-A1

ಹಂತ-1: ಲೋಕಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

ರಾಜ್ಯದ ಹೆಸರು

ಲೋಕಸಭಾ ಕ್ಷೇತ್ರದ ಹೆಸರು

ಮತದಾರರು

ಅರುಣಾಚಲ ಪ್ರದೇಶ

ಅರುಣಾಚಲ ಪಶ್ಚಿಮ

517384

ಅರುಣಾಚಲ ಪ್ರದೇಶ

ಅರುಣಾಚಲ ಪೂರ್ವ

375310

ಅಸ್ಸಾಂ

ಸೋನಿತ್ಪುರ್

1633800

ಅಸ್ಸಾಂ

ಲಖಿಂಪುರ

1577234

ಅಸ್ಸಾಂ

ದಿಬ್ರುಗಢ

1659588

ಅಸ್ಸಾಂ

ಜೋರ್ಹತ್

1727121

ಅಸ್ಸಾಂ

ಕಾಜಿರಂಗ

2050126

ಬಿಹಾರ

ಔರಂಗಾಬಾದ್

1871564

ಬಿಹಾರ

ಗಯಾ

1816815

ಬಿಹಾರ

ನವಾಡ

2006124

ಬಿಹಾರ

ಜಮುಯಿ

1907126

ಮಧ್ಯಪ್ರದೇಶ

ಸಿದ್ಧಿ

2028451

ಮಧ್ಯಪ್ರದೇಶ

ಶಾಹದೋಲ್

1777185

ಮಧ್ಯಪ್ರದೇಶ

ಜಬಲ್ಪುರ

1896346

ಮಧ್ಯಪ್ರದೇಶ

ಬಾಲಾಘಾಟ್

1873653

ಮಧ್ಯಪ್ರದೇಶ

ಮಂಡ್ಲಾ

2101811

ಮಧ್ಯಪ್ರದೇಶ

ಚಿಂದ್ವಾರಾ

1632190

ಮಹಾರಾಷ್ಟ್ರ

ನಾಗಪುರ

2223281

ಮಹಾರಾಷ್ಟ್ರ

ರಾಮ್ಟೆಕ್

2049085

ಮಹಾರಾಷ್ಟ್ರ

ಭಂಡಾರ ಗೊಂಡಿಯಾ

1827188

ಮಹಾರಾಷ್ಟ್ರ

ಗಡಚಿರೋಲಿ-ಚಿಮುರ್

1617207

ಮಹಾರಾಷ್ಟ್ರ

ಚಂದ್ರಾಪುರ್

1837906

ಮಣಿಪುರ

ಒಳ ಮಣಿಪುರ

991574

ಮಣಿಪುರ

ಹೊರ ಮಣಿಪುರ

553078

ಮೇಘಾಲಯ

ಶಿಲ್ಲಾಂಗ್

1400411

ಮೇಘಾಲಯ

ತುರಾ

826156

ಮಿಜೋರಾಂ

ಮಿಜೋರಾಂ

856364

ನಾಗಾಲ್ಯಾಂಡ್

ನಾಗಾಲ್ಯಾಂಡ್

1317536

ರಾಜಸ್ಥಾನ

ಗಂಗಾನಗರ

2102002

ರಾಜಸ್ಥಾನ

ಬಿಕಾನೆರ್

2048399

ರಾಜಸ್ಥಾನ

ಚುರು

2213187

ರಾಜಸ್ಥಾನ

ಜುಂಜುನು

2068540

ರಾಜಸ್ಥಾನ

ಸಿಕರ್

2214900

ರಾಜಸ್ಥಾನ

ಜೈಪುರ

2287350

ರಾಜಸ್ಥಾನ

ಜೈಪುರ ಗ್ರಾಮಾಂತರ

2184978

ರಾಜಸ್ಥಾನ

ಆಳ್ವಾರ್

2059888

ರಾಜಸ್ಥಾನ

ಭರತಪುರ

2114916

ರಾಜಸ್ಥಾನ

ಕರೌಲಿ-ಧೋಲ್ಪುರ್

1975352

ರಾಜಸ್ಥಾನ

ದೌಸಾ

1899304

ರಾಜಸ್ಥಾನ

ನಾಗೌರ್

2146725

ಸಿಕ್ಕಿಂ

ಸಿಕ್ಕಿಂ

464140

ತಮಿಳುನಾಡು

ತಿರುವಳ್ಳೂರು

2085991

ತಮಿಳುನಾಡು

ಚೆನ್ನೈ ಉತ್ತರ

1496224

ತಮಿಳುನಾಡು

ಚೆನ್ನೈ ಸೆಂಟ್ರಲ್

1350161

ತಮಿಳುನಾಡು

ಚೆನ್ನೈ ದಕ್ಷಿಣ

2023133

ತಮಿಳುನಾಡು

ಶ್ರೀಪೆರಂಬದೂರ್

2382119

ತಮಿಳುನಾಡು

ಕಾಂಚೀಪುರಂ

1748866

ತಮಿಳುನಾಡು

ಅರಕ್ಕೋಣಂ

1562871

ತಮಿಳುನಾಡು

ವೆಲ್ಲೂರು

1528273

ತಮಿಳುನಾಡು

ಕೃಷ್ಣಗಿರಿ

1623179

ತಮಿಳುನಾಡು

ತಿರುವಣ್ಣಾಮಲೈ

1533099

ತಮಿಳುನಾಡು

ಅರಣಿ

1496118

ತಮಿಳುನಾಡು

ವಿಲುಪ್ಪುರಂ

1503115

ತಮಿಳುನಾಡು

ಕಲ್ಲಕುರಿಚಿ

1568681

ತಮಿಳುನಾಡು

ಧರ್ಮಪುರಿ

1524896

ತಮಿಳುನಾಡು

ಸೇಲಂ

1658681

ತಮಿಳುನಾಡು

ನಾಮಕ್ಕಲ್

1452562

ತಮಿಳುನಾಡು

ಈರೋಡ್

1538778

ತಮಿಳುನಾಡು

ನೀಲಗಿರಿ

1428387

ತಮಿಳುನಾಡು

ತಿರುಪ್ಪೂರ್

1608521

ತಮಿಳುನಾಡು

ಕೊಯಮತ್ತೂರು

2106124

ತಮಿಳುನಾಡು

ಪೊಲ್ಲಾಚಿ

1597467

ತಮಿಳುನಾಡು

ದಿಂಡಿಗಲ್

1607051

ತಮಿಳುನಾಡು

ಪೆರಂಬಲೂರು

1446352

ತಮಿಳುನಾಡು

ಕಡಲೂರು

1412746

ತಮಿಳುನಾಡು

ಚಿದಂಬರಂ

1519847

ತಮಿಳುನಾಡು

ನಾಗಪಟ್ಟಿಣಂ

1345120

ತಮಿಳುನಾಡು

ಮೈಲಾಡುತುರೈ

1545568

ತಮಿಳುನಾಡು

ತಂಜಾವೂರು

150122

ತಮಿಳುನಾಡು

ಕರೂರ್

1429790

ತಮಿಳುನಾಡು

ತಿರುಚಿರಾಪಳ್ಳಿ

155398

ತಮಿಳುನಾಡು

ಶಿವಗಂಗಾ

1633857

ತಮಿಳುನಾಡು

ಮಧುರೈ

1582271

ತಮಿಳುನಾಡು

ಥೇಣಿ

1622949

ತಮಿಳುನಾಡು

ವಿರುದುನಗರ

1501942

ತಮಿಳುನಾಡು

ರಾಮನಾಥಪುರ

1617688

ತಮಿಳುನಾಡು

ತೂತುಕ್ಕುಡಿ

1458430

ತಮಿಳುನಾಡು

ತೆಂಕಶಿ

1525439

ತಮಿಳುನಾಡು

ತಿರುನೆಲ್ವೇಲಿ

1654503

ತಮಿಳುನಾಡು

ಕನ್ಯಾಕುಮಾರಿ

1557915

ತ್ರಿಪುರಾ

ತ್ರಿಪುರ ಪಶ್ಚಿಮ

1463526

ಉತ್ತರ ಪ್ರದೇಶ

ಕೈರಾನಾ

1722432

ಉತ್ತರ ಪ್ರದೇಶ

ಸಹರಾನ್ಪುರ್

1855310

ಉತ್ತರ ಪ್ರದೇಶ

ಬಿಜ್ನೋರ್

173830

ಉತ್ತರ ಪ್ರದೇಶ

ನಾಗಿನಾ

1644909

ಉತ್ತರ ಪ್ರದೇಶ

ಮೊರಾದಾಬಾದ್

2059578

ಉತ್ತರ ಪ್ರದೇಶ

ರಾಂಪುರ

1731836

ಉತ್ತರ ಪ್ರದೇಶ

ಮುಜಾಫರ್‌ನಗರ

1817472

ಉತ್ತರ ಪ್ರದೇಶ

ಪಿಲಿಭಿತ್

1831699

ಪಶ್ಚಿಮ ಬಂಗಾಳ

ಕೂಚಬೆಹಾರ್

1966893

ಪಶ್ಚಿಮ ಬಂಗಾಳ

ಅಲಿಪುರ್ದುವಾರ್ಸ್

1773252

ಪಶ್ಚಿಮ ಬಂಗಾಳ

ಜಲ್ಪೈಗುರಿ

1885963

ಛತ್ತೀಸಗಢ

ಬಸ್ತಾರ್

1472207

ಉತ್ತರಾಖಂಡ

ಹರಿದ್ವಾರ

2035726

ಉತ್ತರಾಖಂಡ

ಅಲ್ಮೋರಾ

1339327

ಉತ್ತರಾಖಂಡ

ಗರ್ವಾಲ್

1369388

ಉತ್ತರಾಖಂಡ

ನೈನಿತಾಲ್-ಉದಮಸಿಂಗ್‌ ನಗರ

2015809

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

315148

ಲಕ್ಷದ್ವೀಪ

ಲಕ್ಷದ್ವೀಪ

57784

ಪುದುಚೇರಿ

ಪುದುಚೇರಿ

1023699

ಜಮ್ಮು ಮತ್ತು ಕಾಶ್ಮೀರ

ಉಧಂಪುರ

1623195

 

 ‌                              * ಮತದಾರರ ಸಂಖ್ಯೆಯು ಸೇನಾ ಮತದಾರರ ಸಂಖ್ಯೆಯನ್ನು ಒಳಗೊಂಡಿಲ್ಲ

 

ಅನುಬಂಧ-A2

ಹಂತ-2: ಲೋಕಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

ರಾಜ್ಯದ ಹೆಸರು

ಲೋಕಸಭಾ ಕ್ಷೇತ್ರದ ಹೆಸರು

ಮತದಾರರು

ಅಸ್ಸಾಂ

ದರ್ರಂಗ್-ಉದಲ್ಗುರಿ

2209314

ಅಸ್ಸಾಂ

ನಾಗಾನ್

1817204

ಅಸ್ಸಾಂ

ದಿಫು

901032

ಅಸ್ಸಾಂ

ಸಿಲ್ಚಾರ್

1369578

ಅಸ್ಸಾಂ

ಕರೀಂಗಂಜ್

1412148

ಬಿಹಾರ

ಕಿಶನ್‌ಗಂಜ್

1829994

ಬಿಹಾರ

ಕತಿಹಾರ್

1833009

ಬಿಹಾರ

ಪೂರ್ನಿಯಾ

1893698

ಬಿಹಾರ

ಭಾಗಲ್ಪುರ

1983031

ಬಿಹಾರ

ಬಂಕಾ

1856566

ಕರ್ನಾಟಕ

ಉಡುಪಿ-ಚಿಕ್ಕಮಗಳೂರು

1585162

ಕರ್ನಾಟಕ

ಚಿತ್ರದುರ್ಗ

1856876

ಕರ್ನಾಟಕ

ತುಮಕೂರು

1661309

ಕರ್ನಾಟಕ

ಕೋಲಾರ

1726914

ಕರ್ನಾಟಕ

ಬೆಂಗಳೂರು ಉತ್ತರ

3214496

ಕರ್ನಾಟಕ

ಬೆಂಗಳೂರು ಸೆಂಟ್ರಲ್

2433751

ಕರ್ನಾಟಕ

ಬೆಂಗಳೂರು ದಕ್ಷಿಣ

2341759

ಕರ್ನಾಟಕ

ಚಿಕ್ಕಬಳ್ಳಾಪುರ

1981347

ಕರ್ನಾಟಕ

ಬೆಂಗಳೂರು ಗ್ರಾಮಾಂತರ

2802580

ಕರ್ನಾಟಕ

ಹಾಸನ

1736610

ಕರ್ನಾಟಕ

ದಕ್ಷಿಣ ಕನ್ನಡ

1817603

ಕರ್ನಾಟಕ

ಮಂಡ್ಯ

1779243

ಕರ್ನಾಟಕ

ಮೈಸೂರು

2092222

ಕರ್ನಾಟಕ

ಚಾಮರಾಜನಗರ

1778310

ಕೇರಳ

ಕಾಸರಗೋಡು

1452230

ಕೇರಳ

ಕಣ್ಣೂರು

1358368

ಕೇರಳ

ವಡಕರ

1421883

ಕೇರಳ

ಕೋಝಿಕ್ಕೋಡ್

1429631

ಕೇರಳ

ವಯನಾಡ್

1462423

ಕೇರಳ

ಮಲಪ್ಪುರಂ

1479921

ಕೇರಳ

ಪೊನ್ನಾನಿ

1470804

ಕೇರಳ

ಪಾಲಕ್ಕಾಡ್

1398143

ಕೇರಳ

ಆಲತ್ತೂರು

1337496

ಕೇರಳ

ತ್ರಿಶೂರು

1483055

ಕೇರಳ

ಎರ್ನಾಕುಲಂ

1324047

ಕೇರಳ

ಚಾಲಕುಡಿ

1310529

ಕೇರಳ

ಇಡುಕ್ಕಿ

1250157

ಕೇರಳ

ಕೊಟ್ಟಾಯಂ

1254823

ಕೇರಳ

ಪತ್ತನಂತಿಟ್ಟ

1429700

ಕೇರಳ

ಆಲಪ್ಪುಳ

1400083

ಕೇರಳ

ಮಾವೇಲಿಕ್ಕರ

1331880

ಕೇರಳ

ಕೊಲ್ಲಂ

1326648

ಕೇರಳ

ಅಟ್ಟಿಂಗಲ್

1396807

ಕೇರಳ

ತಿರುವನಂತಪುರಂ

1430531

ಮಧ್ಯಪ್ರದೇಶ

ಟಿಕಮ್‌ಘರ್

1826585

ಮಧ್ಯಪ್ರದೇಶ

ದಾಮೋಹ್

1925314

ಮಧ್ಯಪ್ರದೇಶ

ಸತ್ನಾ

1705260

ಮಧ್ಯಪ್ರದೇಶ

ರೇವಾ

1852126

ಮಧ್ಯಪ್ರದೇಶ

ಖಜುರಾಹೊ

1997483

ಮಧ್ಯಪ್ರದೇಶ

ಹೋಶಂಗಾಬಾದ್

1855692

ಮಹಾರಾಷ್ಟ್ರ

ಬುಲ್ಧಾನ

178270

ಮಹಾರಾಷ್ಟ್ರ

ಅಕೋಲಾ

1890814

ಮಹಾರಾಷ್ಟ್ರ

ಅಮರಾವತಿ

1836078

ಮಹಾರಾಷ್ಟ್ರ

ವಾರ್ಧಾ

1682771

ಮಹಾರಾಷ್ಟ್ರ

ಯಾವತ್ಮಲ್- ವಾಶಿಮ್

1940916

ಮಹಾರಾಷ್ಟ್ರ

ನಾಂದೇಡ್

1851843

ಮಹಾರಾಷ್ಟ್ರ

ಹಿಂಗೋಲಿ

1817734

ಮಹಾರಾಷ್ಟ್ರ

ಪರ್ಭಾನಿ

2123056

ಮಣಿಪುರ

ಹೊರ ಮಣಿಪುರ

484949

ರಾಜಸ್ಥಾನ

ಟೋಂಕ್-ಸವಾಯಿ ಮಾಧೋಪುರ್

2148128

ರಾಜಸ್ಥಾನ

ಅಜ್ಮೀರ್

1995699

ರಾಜಸ್ಥಾನ

ಪಾಲಿ

2343232

ರಾಜಸ್ಥಾನ

ಜೋಧಪುರ

2132713

ರಾಜಸ್ಥಾನ

ಬಾರ್ಮರ್

2206237

ರಾಜಸ್ಥಾನ

ಜಾಲೋರ್

2297328

ರಾಜಸ್ಥಾನ

ಉದಯಪುರ

2230971

ರಾಜಸ್ಥಾನ

ಬನ್ಸ್ವಾರಾ

2200438

ರಾಜಸ್ಥಾನ

ಚಿತ್ತೋರಗಢ

2170167

ರಾಜಸ್ಥಾನ

ರಾಜಸಮಂದ್

2060942

ರಾಜಸ್ಥಾನ

ಭಿಲ್ವಾರ

2147159

ರಾಜಸ್ಥಾನ

ಕೋಟಾ

2088023

ರಾಜಸ್ಥಾನ

ಜಲಾವರ್-ಬರನ್

2030525

ತ್ರಿಪುರಾ

ತ್ರಿಪುರಾ ಪೂರ್ವ

1396761

ಉತ್ತರ ಪ್ರದೇಶ

ಮೀರತ್

2000530

ಉತ್ತರ ಪ್ರದೇಶ

ಬಾಗ್ಪತ್

1653146

ಉತ್ತರ ಪ್ರದೇಶ

ಗಾಜಿಯಾಬಾದ್

2945487

ಉತ್ತರ ಪ್ರದೇಶ

ಅಮ್ರೋಹಾ

1716641

ಉತ್ತರ ಪ್ರದೇಶ

ಗೌತಮ ಬುದ್ಧ ನಗರ

2675148

ಉತ್ತರ ಪ್ರದೇಶ

ಬುಲಂದ್‌ಶಹರ್

1859462

ಉತ್ತರ ಪ್ರದೇಶ

ಅಲಿಗಢ

1997234

ಉತ್ತರ ಪ್ರದೇಶ

ಮಥುರಾ

1929550

ಪಶ್ಚಿಮ ಬಂಗಾಳ

ಡಾರ್ಜಿಲಿಂಗ್

1765744

ಪಶ್ಚಿಮ ಬಂಗಾಳ

ರಾಯಗಂಜ್

1790245

ಪಶ್ಚಿಮ ಬಂಗಾಳ

ಬಲೂರ್ಘಾಟ್

1561966

ಛತ್ತೀಸಗಢ

ಮಹಾಸಮುಂಡ್

1762477

ಛತ್ತೀಸಗಢ

ರಾಜನಂದಗಾಂವ್

1868021

ಛತ್ತೀಸಗಢ

ಕಂಕರ್

1654440

ಜಮ್ಮು ಮತ್ತು ಕಾಶ್ಮೀರ

ಜಮ್ಮು

1781545

 

                         * ಮತದಾರರ ಸಂಖ್ಯೆಯು ಸೇನಾ ಮತದಾರರ ಸಂಖ್ಯೆಯನ್ನು ಒಳಗೊಂಡಿಲ್ಲ

 

‌ ಅನುಬಂಧ-A3

ಹಂತ-3: ಲೋಕಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

ರಾಜ್ಯದ ಹೆಸರು

ಲೋಕಸಭಾ ಕ್ಷೇತ್ರದ ಹೆಸರು

ಮತದಾರರು

ಅಸ್ಸಾಂ

ಕೊಕ್ರಜಾರ್

1484571

ಅಸ್ಸಾಂ

ಧುಬ್ರಿ

2660827

ಅಸ್ಸಾಂ

ಬಾರ್ಪೇಟಾ

1966847

ಅಸ್ಸಾಂ

ಗುವಾಹಟಿ

2036846

ಬಿಹಾರ

ಝಂಜರ್ಪುರ್

2003040

ಬಿಹಾರ

ಸುಪಾಲ್

1927207

ಬಿಹಾರ

ಅರಾರಿಯಾ

2018767

ಬಿಹಾರ

ಮಾಧೇಪುರ

2071166

ಬಿಹಾರ

ಖಗಾರಿಯಾ

1840217

ಛತ್ತೀಸಗಢ

ಸರ್ಗುಜಾ

1819347

ಛತ್ತೀಸಗಢ

ರಾಯಗಢ

1838547

ಛತ್ತೀಸಗಢ

ಜಾಂಜ್ಗೀರ್-ಚಂಪಾ

2056047

ಛತ್ತೀಸಗಢ

ಕೊರ್ಬಾ

1618864

ಛತ್ತೀಸಗಢ

ಬಿಲಾಸ್ಪುರ್

2102687

ಛತ್ತೀಸಗಢ

ದುರ್ಗ್

2090414

ಛತ್ತೀಸಗಢ

ರಾಯಪುರ

2375379

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು

ದಮನ್ & ದಿಯು

134189

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು

ದಾದರ್ ಮತ್ತು ನಗರ ಹವೇಲಿ

283024

ಗೋವಾ

ಉತ್ತರ ಗೋವಾ

580577

ಗೋವಾ

ದಕ್ಷಿಣ ಗೋವಾ

598767

ಗುಜರಾತ್

ಕಚ್ಛ್

1943136

ಗುಜರಾತ್

ಬನಸ್ಕಾಂತ

1961924

ಗುಜರಾತ್

ಪಟಾನ್

2019916

ಗುಜರಾತ್

ಮಹೇಸಾನ

1770617

ಗುಜರಾತ್

ಸಬರಕಾಂತ

1976349

ಗುಜರಾತ್

ಗಾಂಧಿನಗರ

2182736

ಗುಜರಾತ್

ಅಹಮದಾಬಾದ್ ಪೂರ್ವ

2038162

ಗುಜರಾತ್

ಅಹಮದಾಬಾದ್ ಪಶ್ಚಿಮ

1726987

ಗುಜರಾತ್

ಸುರೇಂದ್ರನಗರ

2033419

ಗುಜರಾತ್

ರಾಜ್ಕೋಟ್

 

2112273

ಗುಜರಾತ್

ಪೋರಬಂದರ್

1768212

ಗುಜರಾತ್

ಜಾಮ್‌ನಗರ

1817864

ಗುಜರಾತ್

ಜುನಾಗಢ

1795110

ಗುಜರಾತ್

ಅಮ್ರೇಲಿ

1732810

ಗುಜರಾತ್

ಭಾವನಗರ

1916900

ಗುಜರಾತ್

ಆನಂದ್

1780182

ಗುಜರಾತ್

ಖೇಡಾ

2007404

ಗುಜರಾತ್

ಪಂಚಮಹಲ್

1896743

ಗುಜರಾತ್

ದಾಹೋದ್

1875136

ಗುಜರಾತ್

ವಡೋದರಾ

1949573

ಗುಜರಾತ್

ಛೋಟಾ ಉದಯಪುರ

1821708

ಗುಜರಾತ್

ಭರೂಚ್

1723353

ಗುಜರಾತ್

ಬಾರ್ಡೋಲಿ

2048408

ಗುಜರಾತ್

ನವಸಾರಿ

2223550

ಗುಜರಾತ್

ವಲ್ಸಾದ್

1859974

ಕರ್ನಾಟಕ

ಚಿಕ್ಕೋಡಿ

1761694

ಕರ್ನಾಟಕ

ಬೆಳಗಾವಿ

1923788

ಕರ್ನಾಟಕ

ಬಾಗಲಕೋಟೆ

1806183

ಕರ್ನಾಟಕ

ಬಿಜಾಪುರ

1946090

ಕರ್ನಾಟಕ

ಗುಲ್ಬರ್ಗ

2098202

ಕರ್ನಾಟಕ

ರಾಯಚೂರು

2010103

ಕರ್ನಾಟಕ

ಬೀದರ್

1892962

ಕರ್ನಾಟಕ

ಕೊಪ್ಪಳ

1866397

ಕರ್ನಾಟಕ

ಬಳ್ಳಾರಿ

1884040

ಕರ್ನಾಟಕ

ಹಾವೇರಿ

1792774

ಕರ್ನಾಟಕ

ಧಾರವಾಡ

1831975

ಕರ್ನಾಟಕ

ಉತ್ತರ ಕನ್ನಡ

1641156

ಕರ್ನಾಟಕ

ದಾವಣಗೆರೆ

1709244

ಕರ್ನಾಟಕ

ಶಿವಮೊಗ್ಗ

1752885

ಮಧ್ಯಪ್ರದೇಶ

ಮೊರೆನಾ

2006730

ಮಧ್ಯಪ್ರದೇಶ

ಭಿಂಡ್

1900654

ಮಧ್ಯಪ್ರದೇಶ

ಗ್ವಾಲಿಯರ್

2154601

ಮಧ್ಯಪ್ರದೇಶ

ಗುಣ

1889551

ಮಧ್ಯಪ್ರದೇಶ

ಸಾಗರ್

1745690

ಮಧ್ಯಪ್ರದೇಶ

ವಿದಿಶಾ

1945404

ಮಧ್ಯಪ್ರದೇಶ

ಭೋಪಾಲ್

2339411

ಮಧ್ಯಪ್ರದೇಶ

ರಾಜಗಢ

1875211

ಮಧ್ಯಪ್ರದೇಶ

ಬೆತುಲ್

1895331

ಮಹಾರಾಷ್ಟ್ರ

ರಾಯಗಡ

1668372

ಮಹಾರಾಷ್ಟ್ರ

ಬಾರಾಮತಿ

2372668

ಮಹಾರಾಷ್ಟ್ರ

ಉಸ್ಮಾನಾಬಾದ್

1992737

ಮಹಾರಾಷ್ಟ್ರ

ಲಾತೂರ್

1977042

ಮಹಾರಾಷ್ಟ್ರ

ಸೊಲ್ಲಾಪುರ

2030119

ಮಹಾರಾಷ್ಟ್ರ

ಮಧಾ

1991454

ಮಹಾರಾಷ್ಟ್ರ

ಸಾಂಗ್ಲಿ

1868174

ಮಹಾರಾಷ್ಟ್ರ

ಸತಾರಾ

1889740

ಮಹಾರಾಷ್ಟ್ರ

ರತ್ನಗಿರಿ- ಸಿಂಧುದುರ್ಗ

1451630

ಮಹಾರಾಷ್ಟ್ರ

ಕೊಲ್ಲಾಪುರ

1936403

ಮಹಾರಾಷ್ಟ್ರ

ಹತ್ಕನಂಗಳೆ

1814277

ಉತ್ತರ ಪ್ರದೇಶ

ಸಂಭಾಲ್

1898202

ಉತ್ತರ ಪ್ರದೇಶ

ಹತ್ರಾಸ್

1938080

ಉತ್ತರ ಪ್ರದೇಶ

ಆಗ್ರಾ

2072685

ಉತ್ತರ ಪ್ರದೇಶ

ಫತೇಪುರ್ ಸಿಕ್ರಿ

1798823

ಉತ್ತರ ಪ್ರದೇಶ

ಫಿರೋಜಾಬಾದ್

1890772

ಉತ್ತರ ಪ್ರದೇಶ

ಮೈನ್‌ಪುರಿ

1790797

ಉತ್ತರ ಪ್ರದೇಶ

ಇಟಾಹ್

1700524

ಉತ್ತರ ಪ್ರದೇಶ

ಬದೌನ್

2008758

ಉತ್ತರ ಪ್ರದೇಶ

ಓನ್ಲಾ

1891713

ಉತ್ತರ ಪ್ರದೇಶ

ಬರೇಲಿ

1924434

ಪಶ್ಚಿಮ ಬಂಗಾಳ

ಮಲ್ದಹಾ ಉತ್ತರ

1862035

ಪಶ್ಚಿಮ ಬಂಗಾಳ

ಮಲ್ದಹಾ ದಕ್ಷಿಣ

1782159

ಪಶ್ಚಿಮ ಬಂಗಾಳ

ಜಂಗೀಪುರ

1805360

ಪಶ್ಚಿಮ ಬಂಗಾಳ

ಮುರ್ಷಿದಾಬಾದ್

1888097

 

           * ಮತದಾರರ ಸಂಖ್ಯೆಯು ಸೇನಾ ಮತದಾರರ ಸಂಖ್ಯೆಯನ್ನು ಒಳಗೊಂಡಿಲ್ಲ

******

                  

 

 

 


(Release ID: 2019938) Visitor Counter : 172