ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಚಲನಚಿತ್ರ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸಮಗ್ರವಾಗಿ ಸುಗಮಗೊಳಿಸಲು ಸರ್ಕಾರವು ಸಿನಿಮಾಟೋಗ್ರಫಿ (ಪ್ರಮಾಣೀಕರಣ) ನಿಯಮಗಳು, 2024 ಅನ್ನು ಪ್ರಕಟಿಸಿದೆ.

ಚಲನಚಿತ್ರ ಉದ್ಯಮಕ್ಕೆ ಹೆಚ್ಚಿನ ಪಾರದರ್ಶಕತೆ, ದಕ್ಷತೆ ಮತ್ತು ಸುಲಭವಾಗಿ ವ್ಯವಹರಿಸಲು ಆನ್ ಲೈನ್ ಪ್ರಮಾಣೀಕರಣ ಪ್ರಕ್ರಿಯೆಗಳ ಅಳವಡಿಕೆ

ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ತಾರತಮ್ಯಗಳನ್ನು ತೆಗೆದುಹಾಕಲು ಚಲನಚಿತ್ರಗಳ ಆದ್ಯತೆಯ ಪ್ರದರ್ಶನಕ್ಕಾಗಿ ವ್ಯವಸ್ಥೆ

ಚಲನಚಿತ್ರ ಪ್ರಮಾಣೀಕರಣದ ಪ್ರಕ್ರಿಯೆಗೆ ತೆಗೆದುಕೊಳ್ಳುವ ಸಮಯದ   ಕಡಿತ ಮತ್ತು ಎಲ್ಲಾ ವಹಿವಾಟಿನ ಸಮಯವನ್ನು ತೆಗೆದುಹಾಕಲು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುವುದು

ವಿಶೇಷಚೇತನರನ್ನು ಒಳಗೊಂಡಂತೆ ಚಲನಚಿತ್ರಗಳನ್ನು ವೀಕ್ಷಿಸಲು ಪ್ರಮಾಣೀಕರಣಕ್ಕಾಗಿ ಸುಲಭಲಭ್ಯತೆಯ ವೈಶಿಷ್ಟ್ಯಗಳನ್ನು ಒದಗಿಸುವುದು

ಸಿಬಿಎಫ್.ಸಿ  ಮಂಡಳಿ ಮತ್ತು ಸಿಬಿಎಫ್.ಸಿ ಯ ಸಲಹಾ ಸಮಿತಿಗಳಲ್ಲಿ ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯ

Posted On: 15 MAR 2024 4:28PM by PIB Bengaluru

ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯಿದೆ, 2023ರ ಪ್ರಕಾರ, ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 1983 ಅನ್ನು ರದ್ದುಪಡಿಸಿ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 2024 ಅನ್ನು ಪ್ರಕಟಿಸಿದೆ.   ಸಾರ್ವಜನಿಕ ಪ್ರದರ್ಶನಕ್ಕಾಗಿ ಚಲನಚಿತ್ರಗಳ ಪ್ರಮಾಣೀಕರಣದ ಸಂಪೂರ್ಣ ಪ್ರಕ್ರಿಯೆಯನ್ನು ಸುಧಾರಿಸಲು   ಅವುಗಳನ್ನು ಸಮಗ್ರವಾಗಿ ಕೂಲಂಕಷವಾಗಿ ಪರಿಶೀಲಿಸಲಾಗಿದೆ.

ಹಿನ್ನೆಲೆ:

ಭಾರತೀಯ ಚಲನಚಿತ್ರೋದ್ಯಮವು ವಿಶ್ವದ ಅತಿದೊಡ್ಡ ಮತ್ತು ಜಾಗತೀಕರಣಗೊಂಡ ಉದ್ಯಮಗಳಲ್ಲಿ ಒಂದಾಗಿದ್ದು, ಪ್ರತಿ ವರ್ಸ 40ಕ್ಕೂ ಹೆಚ್ಚು ಭಾಷೆಗಳಲ್ಲಿ 3,000 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುತ್ತದೆ.

ಗೌರವಾನ್ವಿತ ಪ್ರಧಾನಮಂತ್ರಿಯವರು ಭಾರತವು ನಿಜವಾಗಿಯೂ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಭಾರತದ ಶಕ್ತಿಗಳೊಂದಿಗೆ ಪ್ರಪಂಚದ ವಿಷಯಗಳ ಕೇಂದ್ರವಾಗಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎನ್ನುವ ದೃಷ್ಟಿಕೋನವನ್ನು ಹೊಂದಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಖಾತೆಯ ಗೌರವಾನ್ವಿತ ಸಚಿವರು ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದು, ಭಾರತೀಯ ಸಂಸ್ಕೃತಿ, ಸಮಾಜ ಮತ್ತು ಮೌಲ್ಯಗಳನ್ನು ಜಾಗತಿಕವಾಗಿ  ಪಸರಿಸುತ್ತಿರುವ ಭಾರತೀಯ ಚಿತ್ರರಂಗವು ಭಾರತದ ಮೃದು ಸಾಮರ್ಥ್ಯಕ್ಕೆ ಗಮನಾರ್ಹ ಕೊಡುಗೆಯನ್ನು ಪ್ರಧಾನ ಮಂತ್ರಿಯವರು ಗುರುತಿಸಿದ್ದಾರೆ ಎಂದು ಸಚಿವರು ಹೇಳಿದರು.

ಪಾರದರ್ಶಕತೆಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದ ಸಬಲೀಕರಣ, ವ್ಯವಹಾರವನ್ನು ಸುಲಭಗೊಳಿಸುವುದು ಮತ್ತು ಪೈರಸಿಯ (ಕೃತಿಚೌರ್ಯ) ಪಿಡುಗಿನಿಂದ ರಕ್ಷಣೆ, ಭಾರತದಲ್ಲಿ ವಿಷಯ ರಚನೆ ಪರಿಸರ ವ್ಯವಸ್ಥೆಯ ಬೆಳವಣಿಗೆಯಲ್ಲಿ   ಸಹಾಯಕವಾಗುತ್ತದೆ  ಮತ್ತು  ಸಿನಿಮಾರಂಗದಲ್ಲಿ ಕೆಲಸ ಮಾಡುವ ಎಲ್ಲಾ ಕಲಾವಿದರು ಮತ್ತು ಕುಶಲಕರ್ಮಿಗಳ ಹಿತಾಸಕ್ತಿಗಳನ್ನು ಕಾಪಾಡಲು ಸಹಾಯ ಮಾಡುತ್ತದೆ. ಚಲನಚಿತ್ರ ವಲಯ. ಈ ದೃಷ್ಟಿಕೋನದಿಂದ 40 ವರ್ಷಗಳ ನಂತರ 2023 ರಲ್ಲಿ ಸಿನೆಮ್ಯಾಟೋಗ್ರಫಿ ಕಾಯಿದೆಗೆ ಐತಿಹಾಸಿಕ ತಿದ್ದುಪಡಿಯನ್ನು ತರಲಾಯಿತು ಮತ್ತು ಈಗ ಕೂಲಂಕುಷವಾಗಿ ಮಾಡಿದ ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 2024 ರೊಂದಿಗೆ ಸಂಪೂರ್ಣವಾಗಿ ಅಧಿಕಾರ ಪಡೆದಿವೆ. 

ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 2024:

ಈ ಹೊಸ ನಿಯಮಗಳು ಡಿಜಿಟಲ್ ಯುಗಕ್ಕೆ ಚಲನಚಿತ್ರ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವ ಮತ್ತು ಆಧುನೀಕರಿಸುವ ಗುರಿಯನ್ನು ಹೊಂದಿವೆ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಚಲನಚಿತ್ರೋದ್ಯಮದಲ್ಲಿನ ಪ್ರಗತಿಯೊಂದಿಗೆ ಸಮವಾಗಿರುತ್ತವೆ. ಸಚಿವಾಲಯ ಮತ್ತು ಚಲನಚಿತ್ರ ಸೆನ್ಸಾರ್ಗಳ ಕೇಂದ್ರ ಮಂಡಳಿಯು ಚಲನಚಿತ್ರ ನಿರ್ಮಾಪಕರು, ಚಿತ್ರಮಂದಿರಗಳ ಮಾಲೀಕರು, ವಿಶೇಷಚೇತನರ ಹಕ್ಕುಗಳ ಸಂಘಟನೆಗಳು, ಎನ್ ಜಿಒಗಳು, ಚಲನಚಿತ್ರೋದ್ಯಮ ಸಂಸ್ಥೆಗಳು, ಸಾರ್ವಜನಿಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ನಡೆಸಿದೆ. ಇದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರು ಹೇಳುವ “ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನ” ಎನ್ನುವ ಮಾತಿನಲ್ಲಿರುವ  ಆಗಾಗ ಪುನರಾವರ್ತಿಸುವ ಧ್ಯೇಯವಾಕ್ಯದಂತೆ ಎಲ್ಲವನ್ನೂ ಒಳಗೊಳ್ಳುವ, ಎಲ್ಲರನ್ನೂ ಒಳಗೊಳ್ಳುವ ವಿಧಾನವನ್ನು ಖಚಿತಪಡಿಸುತ್ತದೆ. 

ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 2024 ರಲ್ಲಿ ಅಳವಡಿಸಲಾಗಿರುವ ಸುಧಾರಣೆಗಳ ಪ್ರಮುಖ ಅಂಶಗಳು ಹೀಗಿವೆ:

•    ಚಲನಚಿತ್ರೋದ್ಯಮಕ್ಕೆ ಹೆಚ್ಚಿನ ಪಾರದರ್ಶಕತೆ, ದಕ್ಷತೆ ಮತ್ತು ವ್ಯವಹಾರವನ್ನು ಸುಲಭಗೊಳಿಸಲು, ಆನ್ ಲೈನ್ ಪ್ರಮಾಣೀಕರಣ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ನಿಯಮಗಳನ್ನು ಸಮಗ್ರವಾಗಿ ತಿದ್ದುಪಡಿ ಮಾಡಲಾಗಿದೆ.

•    ಚಲನಚಿತ್ರ ಪ್ರಮಾಣೀಕರಣದ ಪ್ರಕ್ರಿಯೆಯ ಸಮಯದಲ್ಲಿ ಕಡಿತ ಮತ್ತು ಎಲ್ಲಾ ವಹಿವಾಟಿನ ಸಮಯವನ್ನು ತೆಗೆದುಹಾಕಲು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುವುದು.

•    ಚಲನಚಿತ್ರಗಳು ಕಾಲಕಾಲಕ್ಕೆ ಈ ನಿಟ್ಟಿನಲ್ಲಿ ಹೊರಡಿಸಲಾದ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿದಂತೆ, ವಿಶೇಷಚೇತನ ವ್ಯಕ್ತಿಗಳನ್ನು ಒಳಗೊಂಡಂತೆ ಪ್ರಮಾಣೀಕರಣಕ್ಕಾಗಿ ಸುಲಭಪ್ರವೇಶದ ವೈಶಿಷ್ಟ್ಯಗಳನ್ನು ಹೊಂದಿರಬೇಕು.

•    ವಯಸ್ಸು-ಆಧಾರಿತ ಪ್ರಮಾಣೀಕರಣ: ಅಸ್ತಿತ್ವದಲ್ಲಿರುವ UA ವರ್ಗವನ್ನು ಮೂರು ವಯಸ್ಸಿನ-ಆಧಾರಿತ ವಿಭಾಗಗಳಾಗಿ ಮತ್ತಷ್ಟು ವಿಭಜಿಸುವ ಮೂಲಕ ಪ್ರಮಾಣೀಕರಣದ ವಯಸ್ಸು ಆಧಾರಿತ ವರ್ಗಗಳ ಪರಿಚಯವನ್ನು ಇದು ಒಳಗೊಂಡಿದೆ, ಅವುಗಳೆಂದರೆ. ಹನ್ನೆರಡು ವರ್ಷಗಳ ಬದಲಿಗೆ ಏಳು ವರ್ಷಗಳು (UA 7+), ಹದಿಮೂರು ವರ್ಷಗಳು (UA 13+), ಮತ್ತು ಹದಿನಾರು ವರ್ಷಗಳು (UA 16+). ಈ ವಯಸ್ಸು ಆಧಾರಿತ ಗುರುತುಗಳು ಕೇವಲ ಶಿಫಾರಸುಗಳಾಗಿವೆ, ಹೆತ್ತವರು ಅಥವಾ ಪೋಷಕರು ತಮ್ಮ ಮಕ್ಕಳು ಅಂತಹ ಚಲನಚಿತ್ರವನ್ನು ವೀಕ್ಷಿಸಬೇಕೆ ಎಂದು ಪರಿಗಣಿಸಲು ಉದ್ದೇಶಿಸಲಾಗಿದೆ. ಯುವ ವೀಕ್ಷಕರು ವಯಸ್ಸಿಗೆ ಸೂಕ್ತವಾದ ವಿಷಯಕ್ಕೆ ತೆರೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಯುಎ ಗುರುತಿನೊಂದಿಗೆ  ವಯಸ್ಸಿನ-ಆಧಾರಿತ ಪ್ರಮಾಣೀಕರಣ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಗ್ರಾಹಕರ ಆಯ್ಕೆಯ ತತ್ವಗಳೊಂದಿಗೆ ಮಕ್ಕಳಂಥ ಮುಗ್ಥ ಪ್ರೇಕ್ಷಕರನ್ನು ರಕ್ಷಿಸುವ ಅಗತ್ಯವನ್ನು ಸಮತೋಲನಗೊಳಿಸುವಲ್ಲಿ ಇದು ಬಹು ಮುಖ್ ಪಾತ್ರವನ್ನು ವಹಿಸುತ್ತದೆ. 

•    ಸಿಬಿಎಫ್.ಸಿ ಮಂಡಳಿ ಮತ್ತು ಸಿಬಿಎಫ್.ಸಿ ಯ ಸಲಹಾ ಸಮಿತಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯಕ್ಕೆ ಒತ್ತು ನೀಡಲಾಗಿದ್ದು, ಅಲ್ಲಿ ಮಂಡಳಿಯಲ್ಲಿ ಮೂರನೇ ಒಂದು ಭಾಗದಷ್ಟು ಸದಸ್ಯರು ಮಹಿಳೆಯರಾಗಿರಬೇಕು ಮತ್ತು ಆದ್ಯತೆ ಅರ್ಧದಷ್ಟು ಮಹಿಳೆಯರು ಇರಬೇಕು ಕೆಂದು ಷರತ್ತು ವಿಧಿಸಲಾಗಿದೆ. 

•    ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ತಾರತಮ್ಯಗಳನ್ನು ತೊಡೆದುಹಾಕಲು ಚಲನಚಿತ್ರಗಳ ಆದ್ಯತೆಯ ಪ್ರದರ್ಶನಕ್ಕಾಗಿ ವ್ಯವಸ್ಥೆ. ವ್ಯವಹಾರ ಮಾಡಲು ಸುಲಭವಾಗುವಂತೆ ಚಲನಚಿತ್ರವನ್ನು ಬಿಡುಗಡೆ ಮಾಡುವ ಅವರ ಮೊದಲೆ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ಚಲನಚಿತ್ರ ನಿರ್ಮಾಪಕರ ಯಾವುದೇ ತುರ್ತು ಸಂದರ್ಭದಲ್ಲಿ, ಪ್ರಮಾಣೀಕರಣಕ್ಕಾಗಿ ಚಲನಚಿತ್ರ ಪ್ರದರ್ಶನದ ಪ್ರದರ್ಶನವನ್ನು ತ್ವರಿತಗೊಳಿಸಲು ಆದ್ಯತೆಯ ಪ್ರದರ್ಶನಕ್ಕಾಗಿ ಅವಕಾಶ. 

•    ಪ್ರಮಾಣಪತ್ರಗಳ ಶಾಶ್ವತ ಮಾನ್ಯತೆ: ಚಲನಚಿತ್ರ ಪ್ರಮಾಣೀಕರಣದ ಕೇಂದ್ರ ಮಂಡಳಿ (ಸಿಬಿಎಫ್.ಸಿ)ಯ ಪ್ರಮಾಣಪತ್ರಗಳ ಶಾಶ್ವತ ಸಿಂಧುತ್ವಕ್ಕಾಗಿ ಕೇವಲ 10ವರ್ಷಗಳವರೆಗೆ ಎಂದಿರುವ ಪ್ರಮಾಣಪತ್ರದ ಮಾನ್ಯತೆಯ ಮೇಲಿನ ನಿರ್ಬಂಧವನ್ನು ತೆಗೆದುಹಾಕುವುದು.  

•    ದೂರದರ್ಶನಕ್ಕಾಗಿ ಚಲನಚಿತ್ರ ವಿಭಾಗದಲ್ಲಿ ಬದಲಾವಣೆಗಳು: ದೂರದರ್ಶನದಲ್ಲಿ ಪ್ರಸಾರಕ್ಕಾಗಿ ಸಂಪಾದಿಸಲಾದ ಚಲನಚಿತ್ರಗಳ ಮರು ಪ್ರಮಾಣೀಕರಣ ಮಾಡಲಾಗಿದೆ, ಕೇವಲ ಅನಿರ್ಬಂಧಿತ ಸಾರ್ವಜನಿಕ ಪ್ರದರ್ಶನ ವಿಭಾಗದ ಚಲನಚಿತ್ರಗಳನ್ನು ಮಾತ್ರ ದೂರದರ್ಶನದಲ್ಲಿ ಪ್ರಸಾರ ಮಾಡಬಹುದು.

ಮೂಲತತ್ವ ನಿಯಮಗಳನ್ನು ಸರ್ಕಾರವು 1983 ರಲ್ಲಿ ಮೊದಲು ಪ್ರಕಟಿಸಿತ್ತು ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲ್ಪಟ್ಟಿದ್ದವು. ಆದರೂ, ಕಳೆದ 40 ವರ್ಷಗಳಿಂದ ಚಲನಚಿತ್ರ ತಂತ್ರಜ್ಞಾನ, ಪ್ರೇಕ್ಷಕರ ಸಂಖ್ಯೆ, ವಿಷಯ ವಿತರಣಾ ವಿಧಾನಗಳಲ್ಲಿನ ಗಮನಾರ್ಹ ಪ್ರಗತಿಯನ್ನು ಗುರುತಿಸಿ, ನಮ್ಮ ಚಲನಚಿತ್ರೋದ್ಯಮದ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಅಗತ್ಯವನ್ನು ಉತ್ತಮವಾಗಿ ಪೂರೈಸಲು ಕೂಲಂಕುಷ ಬದಲಾವಣೆಗಳೊಂದಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ.

ಚಲನಚಿತ್ರ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು ಸುಮಾರು 40 ವರ್ಷಗಳ ಅವಧಿಯ ನಂತರ ಸರ್ಕಾರವು ಕಳೆದ ವರ್ಷ ಸಿನಿಮಾಟೋಗ್ರಾಫ್ ಕಾಯಿದೆ, 1952 ಅನ್ನು ತಿದ್ದುಪಡಿ ಮಾಡಿತ್ತು. ಹೊಸ ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 2024 ರ ಸೂಚನೆಯು ಪ್ರಮಾಣೀಕರಣ ಪ್ರಕ್ರಿಯೆಯನ್ನು ಸರಳ, ಹೆಚ್ಚು ಸಮಕಾಲೀನ ಮತ್ತು ಅತ್ಯುತ್ತಮ ಜಾಗತಿಕ ಅಭ್ಯಾಸಗಳಿಗೆ ಅನುಗುಣವಾಗಿ ಮಾಡುವ ಉದ್ದೇಶವನ್ನು ಹೊಂದಿದೆ.  .

ಈ ನವೀಕರಿಸಿದ ನಿಯಮಗಳು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಅಂತರ್ಗತ ಚಲನಚಿತ್ರ ಪ್ರಮಾಣೀಕರಣ ಪ್ರಕ್ರಿಯೆಗೆ ಪ್ರೋತ್ಸಾಹ ನೀಡುತ್ತದೆ, ಭಾರತೀಯ ಚಿತ್ರರಂಗದ ಮುಂದುವರಿದ ಬೆಳವಣಿಗೆ ಮತ್ತು ಯಶಸ್ಸನ್ನು ಬೆಂಬಲಿಸುತ್ತದೆ.

******



(Release ID: 2015136) Visitor Counter : 39