ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪುರಿ ಬೀಚ್ ನಲ್ಲಿರುವ ಸುದರ್ಶನ್ ಪಟ್ನಾಯಕ್ ಅವರ ಮರಳು ಶಿಲ್ಪವು "ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೆ" ಅಭಿಯಾನಕ್ಕೆ  ಹೊಸ ಆಯಾಮವನ್ನು ನೀಡುತ್ತದೆ.

Posted On: 10 MAR 2024 2:36PM by PIB Bengaluru

ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೆ ಅಭಿಯಾನವು ದೇಶಾದ್ಯಂತ ವೇಗವನ್ನು ಪಡೆಯುತ್ತಿರುವಂತೆಯೇ, ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿ ಬೀಚ್ನಲ್ಲಿ ಮರಳು ಶಿಲ್ಪವನ್ನು ರಚಿಸಿದ್ದಾರೆ.

ಪಟ್ನಾಯಕ್ ಅವರ ಕಲಾಕೃತಿಯನ್ನು ಶ್ಲಾಘಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, "ಮೇಡ್ ಆನ್ ಸ್ಯಾಂಡ್, ಆದರೆ ಅದರ ಪ್ರಭಾವ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿದೆ" ಎಂದು ಹೇಳಿದರು . "#MeraPehlaVoteDeshKeliye, ಅಭಿಯಾನವು ದೇಶದ ಮೂಲೆ ಮೂಲೆಯನ್ನು ತಲುಪುತ್ತಿದ್ದಂತೆ, ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಸಾಟಿಯಿಲ್ಲದ ಉತ್ಸಾಹವನ್ನು ತುಂಬುತ್ತಿದ್ದಂತೆ, ಈ ಅಭಿಯಾನದ ಸುಂದರವಾದ ಅಭಿವ್ಯಕ್ತಿಯನ್ನು ಮರಳಿನ ಮೇಲೆ ಕೆತ್ತಲಾಗಿದೆ" ಎಂದು ಸಚಿವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೆ" ಅಭಿಯಾನವನ್ನು ದೇಶದ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ತರಲಾಗುತ್ತಿದೆ. ಯುವ ಮತದಾರರನ್ನು ಹೊರಗೆ ಬಂದು ಮತ ಚಲಾಯಿಸಲು ಪ್ರೋತ್ಸಾಹಿಸುವುದು ಮತ್ತು ರಾಷ್ಟ್ರದ ದೊಡ್ಡ ಒಳಿತಿಗಾಗಿ ಮತದಾನದ ಮಹತ್ವವನ್ನು ತಿಳಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಉಪಕ್ರಮವು ಚುನಾವಣೆಗಳ ಮಹತ್ವವನ್ನು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಮತದಾನದ ಹೆಮ್ಮೆಯನ್ನು ಸಂಕೇತಿಸುತ್ತದೆ.



(Release ID: 2013230) Visitor Counter : 65