ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಜನತೆಗೆ ಮಹಾ ಶಿವರಾತ್ರಿ ಶುಭಾಶಯ ತಿಳಿಸಿದ ಪ್ರಧಾನ ಮಂತ್ರಿಗಳು

Posted On: 08 MAR 2024 8:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ. ಈ ಶ್ರೇಷ್ಠ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚೈತನ್ಯವನ್ನು ತರಲಿ ಮತ್ತು ಅಮೃತಕಾಲದಲ್ಲಿ ದೇಶದ ಸಂಕಲ್ಪಗಳಿಗೆ ಹೊಸ ಶಕ್ತಿಯನ್ನು ನೀಡಲಿ ಎಂದು ಶ್ರೀ ಮೋದಿ ಹಾರೈಸಿದ್ದಾರೆ.

ಈ ಸಂಬಂಧ "ಎಕ್ಸ್‌" ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು,

“ದೇಶದ ನನ್ನ  ಪರಿವಾರದ ಜನರಿಗೆ ಮಹಾಶಿವರಾತ್ರಿಗೆ ಹಾರ್ದಿಕ ಶುಭಕಾಮನೆಗಳು. ಈ ಮಹಾನ್‌ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲೂ ಹೊಸ ಉತ್ಸಾಹ, ಚೈತನ್ಯ ತರಲಿ. ಹಾಗೆಯೇ ಅಮೃತ ಕಾಲದಲ್ಲಿ ದೇಶದ ಸಂಕಲ್ಪಗಳಿಗೆ ಹೊಸ ಶಕ್ತಿ ಕರುಣಿಸಲಿ. ಜಯ ಭೋಲೋನಾಥ್‌ʼʼ ಎಂದು ಆಶಿಸಿದ್ದಾರೆ

***


(Release ID: 2012715) Visitor Counter : 59