ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
2024-25 ಸಾಲಿಗರ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ ಸಂಪುಟ ಅನುಮೋದನೆ
ಪ್ರತಿ ಕ್ವಿಂಟಾಲ್ ಗೆ 285 ರೂ ಏರಿಕೆ
ಕಳೆದ 10 ವರ್ಷಗಳಲ್ಲಿ ಕಚ್ಚಾ ಸೆಣಬಿನ MSP ಶೇಕಡ 122 ಬೆಳವಣಿಗೆ ದಾಖಲು
Posted On:
07 MAR 2024 7:48PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ 2024-25 ರ ಹಂಗಾಮಿಗೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗಳಿಗೆ (MSP) ತನ್ನ ಅನುಮೋದನೆಯನ್ನು ನೀಡಿದೆ.
2024-25 ಋತುವಿನಲ್ಲಿ ಕಚ್ಚಾ ಸೆಣಬಿನ MSP (TDN-3 ಹಿಂದಿನ TD-5 ಗ್ರೇಡ್‌ಗೆ ಸಮನಾಗಿರುತ್ತದೆ) ಪ್ರತಿ ಕ್ವಿಂಟಲ್‌ಗೆ ರೂ.5,335/- ಕ್ಕೆ ನಿಗದಿಪಡಿಸಲಾಗಿದೆ. ಇದು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 64.8 ಪ್ರತಿಶತದಷ್ಟು ಲಾಭವನ್ನು ಖಚಿತಪಡಿಸುತ್ತದೆ. 2024-25ರ ಋತುವಿನ ಕಚ್ಚಾ ಸೆಣಬಿನ MSP ಯನ್ನು 2018-19ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದಂತೆ ಕನಿಷ್ಠ 1.5 ಪಟ್ಟು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಮಟ್ಟದಲ್ಲಿ MSP ಅನ್ನು ನಿಗದಿಪಡಿಸುವ ತತ್ವಕ್ಕೆ ಅನುಗುಣವಾಗಿದೆ.
ಈ ನಿರ್ಧಾರವು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳನ್ನು ಆಧರಿಸಿದೆ.
2024-25ರ ಋತುವಿನ MSPಯು ಹಿಂದಿನ ಋತುವಿಗಿಂತ ಕಚ್ಚಾ ಸೆಣಬಿಗೆ ಪ್ರತಿ ಕ್ವಿಂಟಾಲ್‌ಗೆ ರೂ.285/-ರಷ್ಟು ಹೆಚ್ಚಳವಾಗಿದೆ. ಕಳೆದ 10 ವರ್ಷಗಳಲ್ಲಿ, ಸರ್ಕಾರವು ಕಚ್ಚಾ ಸೆಣಬಿನ MSP ಅನ್ನು 2014-15 ರಲ್ಲಿ ಕ್ವಿಂಟಾಲ್‌ಗೆ ರೂ.2,400 ರಿಂದ 2024-25 ರಲ್ಲಿ ರೂ.5,335/- ಕ್ಕೆ ಹೆಚ್ಚಿಸಿದೆ, ಇದು ಶೇಕಡ 122 ಬೆಳವಣಿಗೆಯನ್ನು ದಾಖಲಿಸಿದೆ.
ಪ್ರಸಕ್ತ ಸಾಲಿನ 2023-24 ರಲ್ಲಿ, ಸರ್ಕಾರವು ರೂ.524.32 ಕೋಟಿ ವೆಚ್ಚದಲ್ಲಿ 6.24 ಲಕ್ಷಕ್ಕೂ ಹೆಚ್ಚು ಕಚ್ಚಾ ಸೆಣಬನ್ನು ದಾಖಲೆ ಪ್ರಮಾಣದಲ್ಲಿ ಸಂಗ್ರಹಿಸಿದೆ, ಸುಮಾರು 1.65 ಲಕ್ಷ ರೈತರಿಗೆ ಪ್ರಯೋಜನವಾಗಿದೆ.
ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ (JCI) ಬೆಲೆ ಬೆಂಬಲ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಮುಂದುವರಿಯುತ್ತದೆ ಮತ್ತು ಅಂತಹ ಕಾರ್ಯಾಚರಣೆಗಳಲ್ಲಿ ಉಂಟಾದ ನಷ್ಟವನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಮರುಪಾವತಿ ಮಾಡುತ್ತದೆ
****
(Release ID: 2012563)
Visitor Counter : 87
Read this release in:
Tamil
,
Telugu
,
Malayalam
,
Odia
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati