ಪ್ರಧಾನ ಮಂತ್ರಿಯವರ ಕಛೇರಿ
ಕ್ರಿಕೆಟಿಗ ಶಮಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಪ್ರಧಾನಿ ಮಂತ್ರಿಗಳು
Posted On:
27 FEB 2024 12:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ಶೀಘ್ರವಾಗಿ ಚೇತರಿಸಿಕೊಂಡು ಉತ್ತಮ ಆರೋಗ್ಯ ಹೊಂದಲಿ ಎಂದು ಹಾರೈಸಿದ್ದಾರೆ.
ತಮ್ಮ X ಪೋಸ್ಟ್ ನಲ್ಲಿ, ಮೊಹಮ್ಮದ್ ಶಮಿ ಅವರು ತಮ್ಮ ಹಿಮ್ಮಡಿಯ ಅಚಿಲ್ಲೀಸ್ ಟೆಂಡನ್ ನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆಂದು ತಿಳಿಸಿದ್ದರು.
ಮೊಹಮ್ಮದ್ ಶಮಿ ಅವರ ಎಕ್ಸ್ ಹ್ಯಾಂಡಲ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಗಳು ಹೀಗೆ ಹೇಳಿದ್ದಾರೆ:
“ನೀವು ಶೀಘ್ರವಾಗಿ ಚೇತರಿಸಿಕೊಂಡು ಉತ್ತಮ ಅರೋಗ್ಯ ಹೊಂದಿಲೆಂದು ಹಾರೈಸುತ್ತೇನೆ. @MdShami11! ನಿಮ್ಮ ವ್ಯಕ್ತಿತ್ವದ ಅವಿಭಾಜ್ಯ ಭಾಗವೇ ಆಗಿರುವ ಧೈರ್ಯದ ಮನೋಭಾವದಿಂದ ಈ ಗಾಯವನ್ನು ನೀವು ಯಶಸ್ವಿಯಾಗಿ ಜಯಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ."
***
(Release ID: 2009667)
Visitor Counter : 75
Read this release in:
Tamil
,
English
,
Urdu
,
Marathi
,
Hindi
,
Bengali-TR
,
Bengali
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam