ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

 ನನ್ನ ಮೊದಲ ಮತದಾನ ದೇಶಕ್ಕಾಗಿ( ‘ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ’ ) ಅಭಿಯಾನಕ್ಕೆ ಸೇರಲು ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕರೆ ನೀಡಿದ್ದಾರೆ

Posted On: 27 FEB 2024 2:55PM by PIB Bengaluru

'ನನ್ನ ಮೊದಲ ಮತದಾನ ದೇಶಕ್ಕಾಗಿ (ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ)' ಅಭಿಯಾನಕ್ಕೆ ಸೇರಲು ಮತ್ತು ಯುವ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸುವಂತೆ ಕೇಂದ್ರ ಐ & ಬಿ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಸಾರ್ವಜನಿಕರಿಗೆ ಒತ್ತಾಯಿಸಿದರು.

ತಮ್ಮ ಎಕ್ಸ್ ಖಾತೆಯಲ್ಲಿ, ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ‘ನನ್ನ ಮೊದಲ ಮತದಾನ ದೇಶಕ್ಕಾಗಿ ( ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ )' ಅಭಿಯಾನದ ಗೀತೆಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಮೂಲಕ , ಅವರು ಈ ರೀತಿ ಹೇಳಿದ್ದಾರೆ;

 “ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ( @narendramodi ji ) ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್  ಭಾಷಣದಲ್ಲಿ ಸ್ಪಷ್ಟವಾದ ಕರೆ ನೀಡಿದ್ದಾರೆ ಮತ್ತು ರಾಷ್ಟ್ರವು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ಸಜ್ಜಾಗುತ್ತಿರುವಾಗ, ನನ್ನ ಮೊದಲ ಮತದಾನ ದೇಶಕ್ಕಾಗಿ ( #MeraPehlaVoteDeshKeLiye ) ಅಭಿಯಾನಕ್ಕೆ ಸೇರಲು ಮತ್ತು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಯುವ ಮತದಾರರನ್ನು ಪ್ರೋತ್ಸಾಹಿಸಲು ನಾನು ನಿಮ್ಮೆಲ್ಲರನ್ನು ಈ ಮೂಲಕ ಕೋರುತ್ತೇನೆ

 ' ನನ್ನ ಮೊದಲ ಮತದಾನ ದೇಶಕ್ಕಾಗಿ' #MeraPehlaVoteDeshKeLiye ಗೀತೆಗೆ ಈಗಲೇ ಟ್ಯೂನ್ ಮಾಡಿ ಮತ್ತು ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ, ಇದರ ಸಂಪರ್ಕ ಕೊಂಡಿ ಇಲ್ಲಿದೆ.

 ನಮ್ಮದೇ ಆದ ರೀತಿಯಲ್ಲಿ ಮತ್ತು ಶೈಲಿಗಳಲ್ಲಿ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯೋಣ.

ಈ ಜವಾಬ್ದಾರಿಯನ್ನು ಸ್ವೀಕರಿಸೋಣ ಮತ್ತು  ಆನ್‌ ಲೈನ್‌ನಲ್ಲಿ ಮೈಗೌ( @mygovindia ) ಮೂಲಕ ಮತ್ತು ಕಾಲೇಜುಗಳಲ್ಲಿ ನಮ್ಮ ಸಾಮೂಹಿಕ ಧ್ವನಿಗಳ ಮಹಾಶಕ್ತಿಯನ್ನು ಆಚರಿಸೋಣ!"
 

***


(Release ID: 2009653) Visitor Counter : 79