ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ ನ ಓಖಾದಿಂದ  ಮತ್ತು ಬೇಂಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಸುದರ್ಶನ ಸೇತುವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು.

Posted On: 25 FEB 2024 11:16AM by PIB Bengaluru

ಸುಮಾರು ರೂ.980 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಓಖಾ ಮುಖ್ಯಭೂಮಿ ಮತ್ತು ಬೇಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಸುದರ್ಶನ ಸೇತುವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.  ಇದು ಸುಮಾರು 2.32 ಕಿಮೀ ಉದ್ದವಿದ್ದು, ದೇಶದಲ್ಲೇ ಅತಿ ಉದ್ದದ ಕೇಬಲ್-ಆಧಾರಿತ ಸೇತುವೆಯಾಗಿದೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ:

“ಸುದರ್ಶನ ಸೇತು ಓಖಾದ ಪ್ರಧಾನ ಭೂಪ್ರದೇಶದಿಂದ ಮತ್ತು ಬೇಂಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುತ್ತದೆ. ಸುಮಾರು ರೂ.  980 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 2.32 ಕಿಮೀ ಉದ್ದವಿದ್ದು, ದೇಶದಲ್ಲೇ ಅತಿ ಉದ್ದದ ಕೇಬಲ್-ಆಧಾರಿತ ಸೇತುವೆಯಾಗಿದೆ.

 "ಸುದರ್ಶನ್ ಸೇತು ಅದ್ಬುತವಾಗಿದೆ!"

 

 ಹಿನ್ನೆಲೆ


ಸುದರ್ಶನ ಸೇತು ಒಂದು ವಿಶಿಷ್ಟ ವಿನ್ಯಾಸವನ್ನು ಹೊಂದಿದೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳಿಂದ ಅಲಂಕರಿಸಲ್ಪಟ್ಟ ಕಾಲುದಾರಿ ಮತ್ತು ಎರಡೂ ಬದಿಗಳಲ್ಲಿ ಭಗವಾನ್ ಕೃಷ್ಣನ ಚಿತ್ರಗಳನ್ನು ಒಳಗೊಂಡಿದೆ.  ಇದು ಫುಟ್‌ ಪಾತ್‌ ನ ಮೇಲಿನ ಭಾಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು, ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.  ಈ ಸೇತುವೆಯು ಸಾರಿಗೆಯನ್ನು ಸುಗಮಗೊಳಿಸುತ್ತದೆ ಮತ್ತು ದ್ವಾರಕಾ ಮತ್ತು ಬೇಂಟ್-ದ್ವಾರಕಾ ನಡುವೆ ಪ್ರಯಾಣಿಸುವ ಭಕ್ತರ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.  ಸೇತುವೆಯ ನಿರ್ಮಾಣದ ಮೊದಲು, ಯಾತ್ರಾರ್ಥಿಗಳು ಬೇಂಟ್ ದ್ವಾರಕಾವನ್ನು ತಲುಪಲು ದೋಣಿ ಸಾರಿಗೆಯನ್ನು ಅವಲಂಬಿಸಬೇಕಾಗಿತ್ತು.  ಈ ಸಾಂಪ್ರದಾಯಿಕ ಸೇತುವೆಯು ದೇವಭೂಮಿ ದ್ವಾರಕಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿಯೂ ಕಾರ್ಯನಿರ್ವಹಿಸಲಿದೆ.


ಪ್ರಧಾನಮಂತ್ರಿಯವರೊಂದಿಗೆ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಸಂಸದರಾದ ಶ್ರೀ ಸಿ.ಆರ್. ಪಾಟೀಲ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 *****



(Release ID: 2008900) Visitor Counter : 53