ಸಂಪುಟ

2021-26ರ ಅವಧಿಗೆ ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಕಾರ್ಯಕ್ರಮಕ್ಕೆ (ಎಫ್.ಎಂ.ಬಿ.ಎ.ಪಿ.) ಕ್ಯಾಬಿನೆಟ್ ಅನುಮೋದನೆ

Posted On: 21 FEB 2024 10:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಪ್ರಾಯೋಜಿತ ಯೋಜನೆಯ ಮುಂದುವರಿಕೆಗಾಗಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ(ಆರ್.ಡಿ. ಮತ್ತು ಜಿ.ಆರ್.)ದ ಪ್ರಸ್ತಾವನೆಯನ್ನು ಅನುಮೋದಿಸಿತು, ಅಂದರೆ, “ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಕಾರ್ಯಕ್ರಮ (ಎಫ್.ಎಂ.ಬಿ.ಎ.ಪಿ.)” ಕ್ಕಾಗಿ 2021-22 ರಿಂದ 2025-26 (15ನೇ ಹಣಕಾಸು ಆಯೋಗದ ಅವಧಿ) ವರೆಗಿನ 5 ವರ್ಷಗಳ ಅವಧಿಗೆ ಒಟ್ಟು ರೂ.  .4,100 ಕೋಟಿಯನ್ನು ಅನುಮೋದಿಸಿದೆ. ಈ ಯೋಜನೆಯು ಮುಖ್ಯವಾಗಿ ಎರಡು ಘಟಕಗಳನ್ನು ಹೊಂದಿದೆ:

ಎಫ್.ಎಂ.ಬಿ.ಎ.ಪಿ.ಯನ ಪ್ರವಾಹ ನಿರ್ವಹಣೆ ಕಾರ್ಯಕ್ರಮದ ಘಟಕದ ಅಡಿಯಲ್ಲಿ ರೂ.  2940 ಕೋಟಿ, ಪ್ರವಾಹ ನಿಯಂತ್ರಣ, ಕೊರೆತ ತಡೆ, ಒಳಚರಂಡಿ ಅಭಿವೃದ್ಧಿ ಮತ್ತು ಸಮುದ್ರ ಕೊರೆತ ವಿರೋಧಿ, ಇತ್ಯಾದಿಗಳಿಗೆ ಸಂಬಂಧಿಸಿದ ನಿರ್ಣಾಯಕ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಲಾಗುವ ನೆರವಿನ ಮೊತ್ತವಾಗಿದೆ. ಈ ನೆರವು ನಿಧಿಯು ಎರಡು ಮಾದರಿಯಲ್ಲಿವೆ, ಅವುಗಳೆಂದರೆ, 1) ಕೇಂದ್ರದ ಪಾಲು 90% : ಮತ್ತು ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶದ ಗುಡ್ಡಗಾಡು ರಾಜ್ಯಗಳು, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದಾಡಳಿತ ಪ್ರದೇಶ ಮುಂತಾದ ವಿಶೇಷ ವರ್ಗದ ಒಟ್ಟು 8 ರಾಜ್ಯಗಳ ಪಾಲು10%:  2) ಕೇಂದ್ರಪಾಲು 60% : ಮತ್ತು ಸಾಮಾನ್ಯ/ವಿಶೇಷದರ್ಜೆರಹಿತ ರಾಜ್ಯಗಳ ಪಾಲು 40%. - ಎಂಬ ರೀತಿಯಲ್ಲಿರುತ್ತದೆ.

ಎಫ್.ಎಂ.ಬಿ.ಎ.ಪಿಯ ನದಿ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಘಟಕದ ಅಡಿಯಲ್ಲಿ ರೂ.1160 ಕೋಟಿಯ ಅನುಮೋದನೆ, ಜಲವಿಜ್ಞಾನದ ಅವಲೋಕನಗಳು ಮತ್ತು ಪ್ರವಾಹ ಮುನ್ಸೂಚನೆ ಸೇರಿದಂತೆ ನೆರೆಯ ದೇಶಗಳೊಂದಿಗಿನ ಸಾಮಾನ್ಯ ಗಡಿಪ್ರದೇಶದ ನದಿಗಳ ಪ್ರವಾಹ ನಿಯಂತ್ರಣ ಮತ್ತು ಸವೆತ ತಡೆ ಕೆಲಸಗಳು ಮತ್ತು ಸಾಮಾನ್ಯ ಗಡಿಪ್ರದೇಶಗಳ ನದಿಗಳ ಮೇಲಿನ ಜಂಟಿ ಜಲ ಸಂಪನ್ಮೂಲ ಯೋಜನೆಗಳ (ನೆರೆಹೊರೆಯ ದೇಶಗಳೊಂದಿಗೆ) ತನಿಖೆ ಮತ್ತು ಪೂರ್ವ-ನಿರ್ಮಾಣ ಚಟುವಟಿಕೆಗಳನ್ನು 100% ಕೇಂದ್ರ ನೆರವು ಮೂಲಕ ಕೈಗೊಳ್ಳಲಾಗುವುದು. 

ಪ್ರವಾಹ ನಿರ್ವಹಣೆಯ ಪ್ರಾಥಮಿಕ ಜವಾಬ್ದಾರಿಯು ರಾಜ್ಯ ಸರ್ಕಾರಗಳ ಮೇಲಿದೆಯಾದರೂ, ಕೇಂದ್ರ ಸರ್ಕಾರವು ಪ್ರವಾಹ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಪೂರಕವಾಗಿ, ಆಧುನಿಕ ತಂತ್ರಜ್ಞಾನ ಮತ್ತು ನವೀನ ವಸ್ತುಗಳು/ ವಿಧಾನದ ಪ್ರಚಾರ ಮತ್ತು ಅಳವಡಿಕೆಗೆ ಉತ್ತೇಜನ ನೀಡಲು ಅಪೇಕ್ಷಣೀಯವಾಗಿದೆ ಎಂದು ನಿರ್ಧರಿಸಿ ಸಹಾಯ ಮಾಡುತ್ತದೆ.  ಹವಾಮಾನ ಬದಲಾವಣೆಯ ಸಂಭವನೀಯ ಪ್ರಭಾವದ ದೃಷ್ಟಿಯಿಂದ ಕಳೆದ ಕೆಲವು ವರ್ಷಗಳಲ್ಲಿ ವಿಪರೀತ ಘಟನೆಗಳ ಹೆಚ್ಚಿದ ಘಟನೆಗಳು ಸಾಕ್ಷಿಯಾಗಿರುವುದರಿಂದ ಇದು ವಿಶೇಷವಾಗಿ ಪ್ರಸ್ತುತವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಳ್ಳಬಹುದು ಮತ್ತು ವ್ಯಾಪ್ತಿ, ತೀವ್ರತೆ ಮತ್ತು ಆವರ್ತನದ ವಿಷಯದಲ್ಲಿ ಪ್ರವಾಹದ ಸಮಸ್ಯೆಯು ಉಲ್ಬಣಗೊಳ್ಳಬಹುದು.  ಆರ್.ಎಂ.ಬಿ.ಎ. ಘಟಕದ ಅಡಿಯಲ್ಲಿ ಕಾರ್ಯಗತಗೊಳಿಸಲಾಗುವ ಕಾರ್ಯಗಳು ಪ್ರವಾಹ ಮತ್ತು ಸವೆತದಿಂದ ಗಡಿ ನದಿಗಳ ಉದ್ದಕ್ಕೂ ಭದ್ರತಾ ಏಜೆನ್ಸಿಗಳು, ಗಡಿಪ್ರದೇಶದ ಹೊರ-ರಕ್ಷಣಾಕಾರ್ಯ ಇತ್ಯಾದಿಗಳ ಪ್ರಮುಖ ನಿರ್ವಹಣೆಗಳನ್ನು ಒಳಗೊಂಡಿರುತ್ತದೆ. ಪ್ರವಾಹ ನಿರ್ವಹಣೆಗೆ ರಚನಾತ್ಮಕ ಕ್ರಮವಾಗಿ ಗುರುತಿಸಲ್ಪಟ್ಟಿರುವ ಪ್ರವಾಹ ಬಯಲು ವಲಯವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ರಾಜ್ಯಗಳನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುವ ನಿಬಂಧನೆಯನ್ನು ಕೂಡಾ ಈ ಯೋಜನೆಯು  ಹೊಂದಿದೆ.

******



(Release ID: 2008282) Visitor Counter : 49