ಉಪರಾಷ್ಟ್ರಪತಿಗಳ ಕಾರ್ಯಾಲಯ
20 ಫೆಬ್ರವರಿ 2024 ರಂದು ಅರುಣಾಚಲ ಪ್ರದೇಶದ ಇಟಾನಗರಕ್ಕೆ ಉಪರಾಷ್ಟ್ರಪತಿಯವರು ಭೇಟಿ ನೀಡಲಿದ್ದಾರೆ
प्रविष्टि तिथि:
19 FEB 2024 11:58AM by PIB Bengaluru
ಅರುಣಾಚಲ ಪ್ರದೇಶದ 38 ನೇ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲು ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿಯವರು ಭಾಗವಹಿಸಲಿದ್ದಾರೆ
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಖರ್ ಅವರು ಫೆಬ್ರವರಿ 20, 2024 ರಂದು ಅರುಣಾಚಲ ಪ್ರದೇಶದ ಇಟಾನಗರಕ್ಕೆ ಭೇಟಿ ನೀಡಲಿದ್ದಾರೆ. ಇದು ಅರುಣಾಚಲ ಪ್ರದೇಶ ರಾಜ್ಯಕ್ಕೆ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಖರ್ ಅವರ ಮೊದಲ ಭೇಟಿಯಾಗಿದೆ.
ಒಂದು ದಿನದ ಪ್ರವಾಸದ ಸಂದರ್ಭದಲ್ಲಿ, ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಖರ್ ಅವರು ಅರುಣಾಚಲ ಪ್ರದೇಶದ 38ನೇ ರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ
ತಮ್ಮ ಪ್ರವಾಸದ ಸಂದರ್ಭದಲ್ಲಿ, ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಖರ್ ಅವರು ಇಟಾನಗರದ ರಾಜಭವನಕ್ಕೆ ಭೇಟಿ ನೀಡಲಿದ್ದಾರೆ.
*****
(रिलीज़ आईडी: 2007120)
आगंतुक पटल : 110