ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

​​​​​​​ಮೂರು ತಿಂಗಳಲ್ಲಿ 1.45 ಕೋಟಿ ಯುವಕರು 'ಮೇರಾ ಯುವ ಭಾರತ್' ಪೋರ್ಟಲ್ ನಲ್ಲಿ ನೋಂದಾವಣೆ 

Posted On: 01 FEB 2024 4:43PM by PIB Bengaluru

ಜನವರಿ 31,2024 ರ ವರೆಗೆ 1.45 ಕೋಟಿ ಯುವಕರನ್ನು ನೋಂದಾಯಿಸಿಕೊಳ್ಳುವ ಮೂಲಕ 'ಮೇರಾ ಯುವ ಭಾರತ್' (ಮೈ ಭಾರತ್) ಪೋರ್ಟಲ್ ಐತಿಹಾಸಿಕ ಮೈಲುಗಲೊಂದನ್ನು ತಲುಪಿದೆ. ಕೆಲವೇ ನಿಮಿಷಗಳಲ್ಲಿ ನೋಂದಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾದ ಬಳಕೆದಾರರಿಗೆ ಸುಲಭವಾದ ತಂತ್ರಜ್ಞಾನದಿಂದಾಗಿ ಇದು ಸಾಧ್ಯವಾಗಿದೆ. ದೇಶದ ಯುವಕರನ್ನು ರಚನಾತ್ಮಕ ಮತ್ತು ಪರಿವರ್ತನಾತ್ಮಕ ಕಾರ್ಯಗಳಲ್ಲಿ ತೊಡಗುವಂತೆ ಸಜ್ಜುಗೊಳಿಸಲು ಈ ಪೋರ್ಟಲ್ ಆಗಲೇ ಪರಿಣಾಮ ಬೀರುತ್ತಿದೆ. 

ರಾಷ್ಟ್ರೀಯ ಐಕ್ಯತಾ ದಿನವಾದ ಅಕ್ಟೋಬರ ೩೧, ೨೦೨೩ ರಂದು ದೆಹಲಿಯ ಕರ್ತ್ಯವ್ಯ ಪಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಮೇರಾ ಯುವ ಭಾರತ್'  ಯುವ ವೇದಿಕೆಯನ್ನು ಉದ್ಘಾಟಿಸಿದರು. ತಂತ್ರಜ್ಞಾನದ ಮೂಲಕ ಯುವಕರ ಅಭಿವೃದ್ಧಿ, ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ ಅವರ ಆಕಾಂಕ್ಷೆಗಳನ್ನು ಈಡೇರಿಸುವಂತೆ  ಮಾಡುವುದು, ಆ ಮೂಲಕ ಅವರು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುವಂತೆ ಪ್ರೇರೇಪಿಸುವ ಉದ್ದೇಶ ಈ ಪೋರ್ಟಲ್ ಹೊಂದಿದೆ.  ದೈಹಿಕ ಚಟುವಟಿಕೆ ಜೊತೆ ಜೊತೆಗೆ digital ಸಂಪರ್ಕಕಕ್ಕೂ ಅವಕಾಶ ಕಲ್ಪಿಸುವ ಈ ಪೋರ್ಟಲ್ ಒಂದು Phygital Platform (Physical  + Digital) ಆಗಿದೆ. ದೈಹಿಕ ಚಟುವಟಿಕೆ ಮತ್ತು ಡಿಜಿಟಲ್ ಸಂಪರ್ಕಗಳ ಧ್ರುವೀಕರಣ ಈ ವೇದಿಕೆಯ ನಾವಿನ್ಯತೆ ಮತ್ತು ಕ್ರಿಯಾತ್ಮಕ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ. 

ದೇಶ್ಯಾದ್ಯಾಂತ ಯುವಕರು ಮೈ ಭಾರತ್ ಪೋರ್ಟಲ್ ನಲ್ಲಿ (https://mybharat.gov.in) ನೋಂದಾಯಿಸಿಕೊಂಡು ಅದರಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು. ಪೊಲೀಸ್, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರೆ ಸಚಿವಾಲಯಗಳಲ್ಲಿ ಲಭ್ಯವಿರುವ ಅವಕಾಶಗಳು, ಸ್ವಯಂ ಸೇವಾ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಯುವಕರ ಅಭಿವೃದ್ಧಿಗೆ ಪ್ರಮುಖ ಸಾಧನವಾಗಿ ಈ ಪೋರ್ಟಲ್ ಹೊರಹೊಮ್ಮಿದೆ. ರಾಷ್ಟ್ರೀಯ ಯುವ ದಿನವಾದ ಜನೆವರಿ ೧೨, ೨೦೨೪ ರಂದು ದೇಶ್ಯಾದ್ಯಂತ ಒಂದು  ಲಕ್ಷಕ್ಕೂ ಹೆಚ್ಚು ಯುವಕರು ಸ್ವಯಂ ಸೇವಕರಾಗಿ ಪೊಲೀಸರೊಂದಿಗೆ ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾರಿಗೆ ನಿರ್ವಹಣೆ ಮಾಡಿದರು. 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನೆವರಿ ೨೭ರಂದು RSS ಮತ್ತು NCC ಸ್ವಯಂ ಸೇವಕರ ಜೊತೆ ಮಾತನಾಡುತ್ತ ಅತ್ಯಂತ ಕಡಿಮೆ ಸಮಯದಲ್ಲಿ ಮೈ ಭಾರತ್ ಪೋರ್ಟಲ್ ಎಷ್ಟೊಂದು ಅಗಾಧ ರೀತಿಯ ಪ್ರತಿಕ್ರಿಯೆ ಪಡೆದಿದೆ ಎಂಬುದರ ಬಗ್ಗೆ ವಿವರಿಸಿದರು. ಈ ಪೋರ್ಟಲ್ ನ  ತ್ವರಿತ ಮತ್ತು ಪರಿಣಾಮಕಾರಿ ತಲುಪುವಿಕೆಯ ಕುರಿತು ವಿವರಿಸುತ್ತಾ, ಈ ಪೋರ್ಟಲ್ ೨೧ನೇ ಶತಮಾನದ ಭಾರತದ ಯುವಕರ ದೊರೆತ ಅತೀ ದೊಡ್ಡ ವೇದಿಕೆಯಾಗಿದೆ ಎಂದರು. 

ಮುಂದಿನ ದಿನಗಳಲ್ಲಿ  ಪೋರ್ಟಲ್ ಗೆ ಇನ್ನೂ ಹೆಚ್ಚಿನ ಕ್ರಮಗಳನ್ನು ಮತ್ತು ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ಇದರ ಉಪಯೋಗವನ್ನು ಇನ್ನಷ್ಟು ಹೆಚ್ಚಿಸುವುದು ಮೈ ಭಾರತ್ ನ ಗುರಿಯಾಗಿದೆ. ಉದಯೋನ್ಮುಖ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಯುವಕರಿಗೆ ದೊರಕಿಸಲು, ಶೈಕ್ಷಣಿಕ ಮತ್ತು ಯುವಕರ ಸಂಸ್ಥೆಗಳೊಂದಿಗೆ ಒಡನಾಟ ಹೆಚ್ಚಿಸಲು ಈ ವೇದಿಕೆ ಉತ್ಸುಕವಾಗಿದೆ.  ಮೈ ಭಾರತ್ ವೇದಿಕೆ ಬೆಳೆಯುತ್ತಿರುವಂತೆ, ದೇಶದ ಎಲ್ಲ ಯುವಕರಿಗೆ ಸಮಾನವಾದ ಅವಕಾಶ ಒದಗಿಸುವ ಮತ್ತು ಯುವಕರಲ್ಲಿ ನಿರಂತರ ಕಲಿಕೆಯ ಸಂಸ್ಕೃತಿಯನ್ನು ಬೆಳೆಸುವ ತನ್ನ ಗುರಿಗೆ ಬದ್ಧವಾಗಿರಲಿದೆ. ಲಭ್ಯವಿರುವ ಕಾರ್ಯಕ್ರಮಗಳನ್ನು ಕ್ರೋಢೀಕರಿಸಿ, ಇರುವ ಸಂಪನ್ಮೂಲ ಮತ್ತು ಪ್ರಾವೀಣ್ಯತೆಯನ್ನು ಗರಿಷ್ಠವಾಗಿ ಉಪಯೋಗಿಸಿಕೊಂಡು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದು ಮೇರಾ ಯುವ ಭಾರತ್ ನ ಗುರಿಯಾಗಿದೆ. 

ಕೇವಲ ಇದೊಂದು ಸಂಸ್ಥೆಯಲ್ಲ. ೨೦೪೭ರ ಹೊತ್ತಿಗೆ ಭಾರತವನ್ನು 'ವಿಕಸಿತ ಭಾರತ'  ವನ್ನಾಗಿ ಮಾಡುವ ದೂರದೃಷ್ಟಿಯಾಗಿದೆ. 

***


(Release ID: 2001757) Visitor Counter : 122