ಸಂಪುಟ

ಪಶುಸಂಗೋಪನೆ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ವಿಸ್ತರಣೆಗೆ ಸಂಪುಟ ಅನುಮೋದನೆ 

Posted On: 01 FEB 2024 11:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಪಶು ಸಂಗೋಪನೆ ಮೂಲ ಸೌಕರ್ಯ ನಿಧಿ [ಎ.ಎಚ್.ಐ.ಡಿ.ಎಫ್] ಯನ್ನು ಮುಂದುವರೆಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಮೂಲಸೌಕರ್ಯ ಅಭಿವೃದ್ಧಿ ನಿಧಿ[ಐಡಿಎಫ್]ಯಡಿ ಮುಂದಿನ ಮೂರು ವರ್ಷಗಳು 2025-26 ರ ವರೆಗೆ 29,610.25 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಈ ಯೋಜನೆಯು ಡೈರಿ ಸಂಸ್ಕರಣೆ, ಉತ್ಪನ್ನ ವೈವಿಧ್ಯೀಕರಣ, ಮಾಂಸ ಸಂಸ್ಕರಣೆ, ಪಶು ಆಹಾರ ಸಂಸ್ಕರಣೆ, ತಳಿ ವೃದ್ಧಿಸುವ ಘಟಕಗಳು, ಪ್ರಾಣಿಗಳ ತ್ಯಾಜ್ಯದಿಂದ ಸಂಪತ್ತು ವೃದ್ಧಿಸುವ [ಕೃಷಿ ತ್ಯಾಜ್ಯ ನಿರ್ವಹಣೆ] ಮತ್ತು ಪಶು ವೈದ್ಯಕೀಯ ಲಸಿಕೆ, ಔಷಧ ಉತ್ಪಾದನಾ ಸೌಲಭ್ಯಗಳಿಗೆ ಹೂಡಿಕೆಯನ್ನು ಪ್ರೋತ್ಸಾಹಿಸಲಿದೆ. ಭಾರತ ಸರ್ಕಾರ ಶೆಡ್ಯೂಲ್ ಬ್ಯಾಂಕ್ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ [ಎನ್.ಸಿ.ಡಿ.ಸಿ], ನಬಾರ್ಡ್ ಮತ್ತು ಎನ್.ಡಿ.ಡಿ.ಬಿಯಿಂದ 90% ರಷ್ಟು ಸಾಲಕ್ಕೆ 8 ವರ್ಷಗಳವರೆಗೆ ಶೇ 3ರಷ್ಟು ಬಡ್ಡಿ ಸಹಾಯಧನ ದೊರೆಯಲಿದೆ. ವ್ಯಕ್ತಿಗಳು, ಖಾಸಗಿ ಕಂಪೆನಿಗಳು, ಎಫ್.ಪಿ.ಒ, ಎಂ.ಎಸ್.ಎಂ.ಇ, ಸೆಕ್ಷನ್ 8 ಕಂಪೆನಿಗಳಿಗೆ ಈ ಸೌಲಭ್ಯ ದೊರೆಯಲಿದೆ. ಹಾಲು ಉತ್ಪಾದಕ ಸಹಕಾರ ಸಂಸ್ಥೆಗಳ ಡೈರಿ ಘಟಕಗಳ ಬಲವರ್ಧನೆ, ಆಧುನೀಕರಣಕ್ಕೆ ಸಹಕಾರಿಯಾಗಲಿದೆ.

750 ಕೋಟಿ ರೂಪಾಯಿ ಸಾಲ ಖಾತರಿ ನಿಧಿಯಿಂದ ಎರವಲು ಪಡೆದ ಸಾಲದ 25% ರವರೆಗೆ ಎಂ.ಎಸ್.ಎಂ.ಇ ಮತ್ತು ಹೈನುಗಾರಿಕೆ ಸಹಕಾರಿಗಳಿಗೆ ಭಾರತ ಸರ್ಕಾರ ಸಾಲದ ಮೇಲೆಸ ಖಾತರಿ ನೀಡಲಿದೆ.  

ಎಎಚ್ ಐಡಿಎಫ್ ಇದುವರೆಗೆ 141.04 ಎಲ್.ಎಲ್.ಪಿ.ಡಿ [ಲಕ್ಷ ಲೀಟರ್ ಪ್ರತಿದಿನ] ಹಾಲು ಸಂಸ್ಕರಣಾ ಸಾಮರ್ಥ್ಯ, 79.24 ಲಕ್ಷ ಮೆಟ್ರಿಕ್ ಟನ್ ಮಾಂಸ ಸಂಸ್ಕರಣಾ ಸಾಮರ್ಥ್ಯವನ್ನು ಪೂರೈಕೆ ಸರಪಳಿಗೆ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ. ಡೈರಿ, ಮಾಂಸ ಮತ್ತು ಜಾನುವಾರುಗಳ ಆಹಾರ ಸಂಸ್ಕರಣೆ ಸಾಮರ್ಥ್ಯವನ್ನು 2 ರಿಂದ 4% ಹೆಚ್ಚಿಸಲು ಯೋಜನೆ ಅವಕಾಶ ಕಲ್ಪಿಸಲಿದೆ.  

ಜಾನುವಾರುಗಳ ವಲಯದಲ್ಲಿ ಹೂಡಿಕೆ ಮಾಡಲು ಪಶುಸಂಗೋಪನಾ ಇಲಾಖೆ ಅವಕಾಶ ಕಲ್ಪಿಸಲಿದ್ದು, ಈ ವಲಯದಲ್ಲಿ ಮೌಲ್ಯ ವರ್ಧನೆ, ಶೀಥಲಗೃಹ  ನಿರ್ಮಾಣ, ಡೈರಿ, ಮಾಂಸ, ಪಶು ಆಹಾರ ಘಟಕಗಳಿಗೆ ತಾಂತ್ರಿಕ ನೆರವು ನೀಡುವ, ಜಾನುವಾರು, ಕೋಳಿ ಸಾಕಾಣೆ, ಪ್ಯಾಣಿತ್ಯಾಜ್ಯದಿಂದ ಸಂಪತ್ತು ನಿರ್ವಹಣೆ, ಪಶು ವೈದ್ಯಕೀಯ ಔಷಧಗಳು/ಲಸಿಕೆ ಘಟಕಗಳ ಸ್ಥಾಪನೆಯಂತಹ ಲಾಭದಾಯಕ ಪ್ರಕ್ರಿಯೆಗೆ ಇದು ಸಹಾಯ ಮಾಡಲಿದೆ. 

ತಳಿ ವೃದ್ಧಿ ಘಟಕಗಳು, ಪಶುವೈದ್ಯಕೀಯ ಔಷಧ, ಲಸಿಕೆ ಘಟಕಗಳು, ಜಾನುವಾರುಗಳ ತ್ಯಾಜ್ಯದಿಂದ ಸಂಪತ್ತು ನಿರ್ವಹಣೆಯ ಕ್ರಮಗಳನ್ನು ಅಳವಡಿಸಿಕೊಂಡ ನಂತರ ಜಾನುವಾರು ವಲಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೂಲಸೌಕರ್ಯ ಹೆಚ್ಚಾಗಿ ಸಾಮರ್ಥ್ಯ ವೃದ್ಧಿಯಾಗಲಿದೆ. 

ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯಮಶೀಲತೆ ಮೂಲಕ 35 ಲಕ್ಷ ಜನರಿಗೆ ಉದ್ಯೋಗ ದೊರಕಿಸಿಕೊಡಲಿದೆ ಮತ್ತು ಜಾನುವಾರು ವಲಯದಲ್ಲಿ ಸಂಪತ್ತು ವೃದ್ಧಿಗೆ ನೆರವಾಗಲಿದೆ. ಈ ವರೆಗೆ ಎಎಚ್ ಐಡಿಎಫ್ ನಿಂದ ಸುಮಾರು 15 ಲಕ್ಷ ರೈತರಿಗೆ ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಅನುಕೂಲವಾಗಿದೆ. ಎಎಚ್ ಐಡಿಎಫ್ ಪ್ರಧಾನಮಂತ್ರಿಯವರ ರೈತರ ಆದಾಯ ದ್ವಿಗುಣಗೊಳಿಸುವ ಪರಿಕಲ್ಪನೆಗೆ ನೆರವಾಗಲಿದೆ. ಜಾನುವಾರು ವಲಯದಲ್ಲಿ ಖಾಸಗಿ ಹೂಡಿಕೆ ಸಂಸ್ಕರಣಾ ವಲಯದಲ್ಲಿ ನವ ತಂತ್ರಜ್ಞಾನ ಅಳವಡಿಕೆ, ಮೌಲ್ಯ ವರ್ಧನೆ, ಕೊನೆಯದಾಗಿ ಜಾನುವಾರುಗಳ ಸಂಪತ್ತು ವೃದ್ಧಿ ಮೂಲಕ ರಾಷ್ಟ್ರದ ಆರ್ಥಿಕತೆಯ ವಿಸ್ತರಣೆಗೆ ಉತ್ತೇಜನ ದೊರೆಯಲಿದೆ.  ಅರ್ಹ ಫಲಾನುಭವಿಗಳಿಂದ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆಯ ಮೂಲ ಸೌಕರ್ಯದಲ್ಲಿ ಇಂತಹ ಹೂಡಿಕೆಗಳಿಂದ ಸಂಸ್ಕರಿಸಿದ ಮತ್ತು ಮೌಲ್ಯವರ್ಧಿತ ಸರಕುಗಳ ರಫ್ತು ಉತ್ತೇಜನಕ್ಕೆ ನೆರವಾಗಲಿದೆ. 

ಹೀಗಾಗಿ ಎಎಚ್ ಐಡಿಎಫ್ ನಲ್ಲಿನ ಪ್ರೋತ್ಸಾಹದ ಹೂಡಿಕೆಯು ಖಾಸಗಿ ಹೂಡಿಕೆಯನ್ನು 7 ಪಟ್ಟು ವೃದ್ಧಿಸಿ, ರೈತರ ಆದಾಯ ಹೆಚ್ಚಿಸಲು ಕಾರಣವಾಗುತ್ತದೆ. ಉತ್ಪಾದನಾ ವಲಯದ ಮೇಲೆ ಹೆಚ್ಚು ಹೂಡಿಕೆ ಮಾಡಲು ಸಹಕಾರಿಯಾಗಲಿದೆ. 

*****



(Release ID: 2001359) Visitor Counter : 80