ಸಂಪುಟ

ಬಟ್ಟೆ ಮತ್ತು ಉಡುಪುಗಳ ರಫ್ತಿಗಾಗಿ ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಮತ್ತು ಸುಂಕಗಳ ರಿಯಾಯಿತಿ ಯೋಜನೆ ಮುಂದುವರಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

Posted On: 01 FEB 2024 11:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಮಾರ್ಚ್ 31, 2026ರವರೆಗೆ ಬಟ್ಟೆ  ಮತ್ತು ಉಡುಪುಗಳು ಮತ್ತು ಇತರ ಜವಳಿ ಉತ್ಪನ್ನಗಳ ರಫ್ತಿಗಾಗಿ ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಮತ್ತು  ಸುಂಕಗಳ (ಆರ್ ಒ ಎಸ್ ಸಿ ಟಿ ಎಲ್ ) ರಿಯಾಯಿತಿಯ ಯೋಜನೆಯನ್ನು ಮುಂದುವರೆಸಲು ಅನುಮೋದಿಸಿತು.

ಎರಡು   ವರ್ಷಗಳ ಪ್ರಸ್ತಾವಿತ ಅವಧಿಗೆ ಯೋಜನೆಯ ಮುಂದುವರಿಕೆಯು ದೀರ್ಘಾವಧಿಯ ವ್ಯಾಪಾರ ಯೋಜನೆಗೆ ವಿಶೇಷವಾಗಿ  ದೀರ್ಘಾವಧಿಯ ವಿತರಣೆಗಾಗಿ ಮುಂಚಿತವಾಗಿ ಆರ್ಡರ್ ಗಳನ್ನು  ಮಾಡಬಹುದಾದ ಜವಳಿ ವಲಯದಲ್ಲಿ ಅಗತ್ಯವಾದ ಸ್ಥಿರವಾದ ನೀತಿಯ ಆಡಳಿತವನ್ನು ಒದಗಿಸುತ್ತದೆ,   

ಆರ್ ಒ ಎಸ್ ಸಿ ಟಿ ಎಲ್  ಯೋಜನೆಯ ಮುಂದುವರಿಕೆಯು ನೀತಿ ಆಡಳಿತದಲ್ಲಿ ಭವಿಷ್ಯ ಮತ್ತು ಸ್ಥಿರತೆಯನ್ನು ಖಚಿತಪಡಿಸುತ್ತದೆ, ತೆರಿಗೆಗಳು ಮತ್ತು ಸುಂಕಗಳ  ಹೊರೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು "ಸರಕುಗಳನ್ನು ರಫ್ತು ಮಾಡಲಾಗುತ್ತದೆ ಮತ್ತು ತೆರಿಗೆಗಳನ್ನಲ್ಲ" ಎನ್ನುವ  ತತ್ವದ ಮೇಲೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುತ್ತದೆ.

ಮೊ ದಲು ಕೇಂದ್ರ ಸಚಿವ ಸಂಪುಟವು 31.03.2020 ರವರೆಗೆ ಯೋಜನೆಗೆ ಅನುಮೋದನೆ ನೀಡಿತ್ತು ಮತ್ತು ಆರ್ ಒ ಎಸ್ ಸಿ ಟಿ ಎಲ್  (RoSCTL) ಅನ್ನು 31 ಮಾರ್ಚ್ 2024 ರವರೆಗೆ ಮುಂದುವರಿಸಲು ಹೆಚ್ಚಿನ ಅನುಮೋದನೆಯನ್ನು ನೀಡಲಾಯಿತು. ಪ್ರಸ್ತುತ ವಿಸ್ತರಣೆಯು 31 ಮಾರ್ಚ್ 2026 ರವರೆಗೆ ಉಡುಪುಗಳು ಮತ್ತು ಜವಳಿ ಉತ್ಪನ್ನಗಳ   ರಫ್ತಿನಲ್ಲಿ  ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಬಟ್ಟೆ ಉಡುಪುಗಳ ಮತ್ತು ಬಟ್ಟೆ ಉತ್ಪನ್ನಗಳನ್ನು  ವೆಚ್ಚವನ್ನು ಕಡಿಮೆಯಾಗಿಸುತ್ತದೆ  ಮತ್ತು ಶೂನ್ಯ ತೆರಿಗೆಯ  ರಫ್ತು ತತ್ವವನ್ನು ಅಳವಡಿಸಿಕೊಳ್ಳುತ್ತದೆ. ಆರ್ ಒ ಎಸ್ ಸಿ ಟಿ ಎಲ್  ಅಡಿಯಲ್ಲಿ ಒಳಗೊಳ್ಳದ ಇತರ ಜವಳಿ ಉತ್ಪನ್ನಗಳು (ಅಧ್ಯಾಯ 61, 62 ಮತ್ತು 63 ಹೊರತುಪಡಿಸಿ), ಇತರ ಉತ್ಪನ್ನಗಳೊಂದಿಗೆ ಆರ್ ಒ ಡಿಟಿಇಪಿ (RoDTEP) ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ.

ರಿಯಾಯಿತಿಯ ಮೂಲಕ ಬಟ್ಟೆ ,ಉಡುಪುಗಳು ಮತ್ತು ಇತರ ಜವಳಿ ಉತ್ಪನ್ನಗಳ ರಫ್ತಿನ ಮೇಲಿನ ಸುಂಕದ ಕೊರತೆಯ ಯೋಜನೆಗೆ ಹೆಚ್ಚುವರಿಯಾಗಿ ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಮತ್ತು ಸುಂಕಗಳನ್ನು ಸರಿದೂಗಿಸುವುದು ಯೋಜನೆಯ ಉದ್ದೇಶವಾಗಿದೆ. ಇದು ರಫ್ತಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಮಟ್ಟದ  ಅವಕಾಶಗಳನ್ನು ಸಕ್ರಿಯಗೊಳಿಸಲು, ತೆರಿಗೆಗಳು ಮತ್ತು ಸುಂಕಗಳನ್ನು ರಫ್ತಿನಲ್ಲಿ ಸೇರಿಸಬಾರದು ಎನ್ನುವ ಅಂತಾರಾಷ್ಟ್ರೀಯವಾಗಿ ಸ್ವೀಕಾರಾರ್ಹ ತತ್ವವನ್ನು ಆಧರಿಸಿದೆ.  ಇದರಿಂದಾಗಿ ಖರೀದಿಗಳ (ಇನ್ಪುಟ್) ಮೇಲಿನ ಪರೋಕ್ಷ ತೆರಿಗೆಗಳನ್ನು ರಿಯಾಯಿತಿ ಅಥವಾ ಮರುಪಾವತಿ ಮಾಡುವುದು ಮಾತ್ರವಲ್ಲದೆ ಇತರ ಮರುಪಾವತಿ ಮಾಡದ ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಮತ್ತು ಸುಂಕಗಳಿಂದ ಸಹ ರಿಯಾಯಿತಿ ನೀಡಬೇಕಾಗುತ್ತದೆ.
ಸಾರಿಗೆಯಲ್ಲಿ ಬಳಸುವ ಇಂಧನದ ಮೇಲಿನ ವ್ಯಾಟ್, ಕ್ಯಾಪ್ಟಿವ್ ಪವರ್, ಫಾರ್ಮ್ ಸೆಕ್ಟರ್, ಮಂಡಿ ತೆರಿಗೆ, ವಿದ್ಯುತ್ ಸುಂಕ, ರಫ್ತು ದಾಖಲೆಗಳ ಮೇಲಿನ ಮುದ್ರಾಂಕ ಸುಂಕ, ಕೀಟನಾಶಕಗಳು, ರಸಗೊಬ್ಬರಗಳು ಇತ್ಯಾದಿಗಳ ಮೇಲೆ ಪಾವತಿಸಿದ ಎಸ್ ಜಿಎಸ್ ಟಿ, ಕಚ್ಚಾ ಹತ್ತಿ ಉತ್ಪಾದನೆಯಲ್ಲಿ ಬಳಸುವ, ನೋಂದಾಯಿಸದ ಡೀಲರ್ಗಳಿಂದ ಖರೀದಿ, ಉತ್ಪಾದನೆಯಲ್ಲಿ ಬಳಸುವ ಕಲ್ಲಿದ್ದಲು ವಿದ್ಯುತ್ ಮತ್ತು ಸಾರಿಗೆ ವಲಯದ.ಲ್ಲಿನ ಕರಗಳ  ಮೇಲೆ ರಾಜ್ಯ ತೆರಿಗೆಗಳು ಮತ್ತು ಸುಂಕಗಳ ರಿಯಾಯಿತಿಯು ಒಳಗೊಂಡಿರುತ್ತದೆ.  ಸಾಗಣೆಯಲ್ಲಿ ಬಳಸುವ ಇಂಧನದ ಮೇಲಿನ ಕೇಂದ್ರೀಯ ಅಬಕಾರಿ ಸುಂಕ, ಕೀಟನಾಶಕಗಳು, ರಸಗೊಬ್ಬರ ಇತ್ಯಾದಿಗಳಂತಹ ಮೇಲೆ ಪಾವತಿಸಿದ ಸಿಜಿಎಸ್ ಟಿ, ನೋಂದಾಯಿಸದ ಡೀಲರ್ಗಳಿಂದ ಖರೀದಿ, ಸಾರಿಗೆ ವಲಯಕ್ಕೆ ಒಳಹರಿವು ಮತ್ತು   ಸಿ ಜಿಎಸ್ಟಿ ಮತ್ತು ಪರಿಹಾರ ಸೆಸ್ ವಿದ್ಯುತ್ ಉತ್ಪಾದನೆಯಲ್ಲಿ ಬಳಸುವ ಕಲ್ಲಿದ್ದಲಿನ ಮೇಲಿನ ತೆರಿಗೆಗಳ ಮೇಲೆ ಕೇಂದ್ರ ತೆರಿಗೆಗಳು ಮತ್ತು ಸುಂಕಗಳ ರಿಯಾಯಿತಿಯು ಒಳಗೊಂಡಿರುತ್ತದೆ.

ಆರ್ ಒ ಎಸ್ ಸಿ ಟಿ ಎಲ್   ಒಂದು ಪ್ರಮುಖ ನೀತಿ ಕ್ರಮವಾಗಿದ್ದು ಜವಳಿ  ವಲಯದ ಸರಪಳಿಯ ಮೌಲ್ಯವರ್ಧಿತ ಮತ್ತು ಕಾರ್ಮಿಕ   ವಿಭಾಗಗಳಾದ ಉಡುಪುಗಳು ಮತ್ತು ಜವಳಿ ಉತ್ಪನ್ನಗಳ   ಭಾರತೀಯ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ. ಎರಡು   ವರ್ಷಗಳ ಪ್ರಸ್ತಾವಿತ ಅವಧಿಗೆ ಯೋಜನೆಯ ಮುಂದುವರಿಕೆಯು ದೀರ್ಘಾವಧಿಯ ವ್ಯಾಪಾರ ಯೋಜನೆಗೆ ವಿಶೇಷವಾಗಿ  ದೀರ್ಘಾವಧಿಯ ವಿತರಣೆಗಾಗಿ ಮುಂಚಿತವಾಗಿ ಆರ್ಡರ್ ಗಳನ್ನು  ಮಾಡಬಹುದಾದ ಜವಳಿ ವಲಯದಲ್ಲಿ ಅಗತ್ಯವಾದ ಸ್ಥಿರವಾದ ನೀತಿಯ ಆಡಳಿತವನ್ನು ಒದಗಿಸುತ್ತದೆ,   

*****



(Release ID: 2001351) Visitor Counter : 91