ವಾರ್ತಾ ಮತ್ತು ಪ್ರಸಾರ ಸಚಿವಾಲಯ

IIMC ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನಮಾನ ಪಡೆದಿದೆ.

Posted On: 31 JAN 2024 6:01PM by PIB Bengaluru

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಪ್ರಮುಖ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ಅನ್ನು ಯುಜಿಸಿಯ ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದ ಅಡಿಯಲ್ಲಿ ಡೀಮ್ಡ್ ವಿಶ್ವವಿದ್ಯಾಲಯವೆಂದು ಘೋಷಿಸಿದೆ. ಈ ಘೋಷಣೆಯು ಐಐಎಂಸಿ ನವದೆಹಲಿ ಮತ್ತು ಜಮ್ಮು (ಜಮ್ಮು ಮತ್ತು ಕಾಶ್ಮೀರ), ಅಮರಾವತಿ (ಮಹಾರಾಷ್ಟ್ರ), ಐಜ್ವಾಲ್ (ಮಿಜೋರಾಂ), ಕೊಟ್ಟಾಯಂ (ಕೇರಳ), ಮತ್ತು ಧೆಂಕನಾಲ್ (ಒಡಿಶಾ) ನಲ್ಲಿರುವ ಅದರ ಐದು ಪ್ರಾದೇಶಿಕ ಕ್ಯಾಂಪಸ್‌ಗಳಿಗೆ ವಿಸ್ತರಣೆಯಾಗಿದೆ.

ಈ ಹೊಸ ಸ್ಥಾನಮಾನದೊಂದಿಗೆ, ಐಐಎಂಸಿ ಈಗ ಡಾಕ್ಟರೇಟ್ ಪದವಿಗಳನ್ನು ಒಳಗೊಂಡಂತೆ ಪದವಿಗಳನ್ನು ನೀಡಲು ಅಧಿಕಾರ ಹೊಂದಿದೆ.

ವಿವರವಾದ ಅಧಿಸೂಚನೆಯನ್ನು ಕೆಳಗಿನ ಲಿಂಕ್‌ನಲ್ಲಿ ನೋಡಬಹುದು.

https://iimc.gov.in/WriteReadData/userfiles/file/2024/Jan/Notification.pdf

****



(Release ID: 2001035) Visitor Counter : 54