ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಮಹಿಳಾ ಸಬಲೀಕರಣಕ್ಕಾಗಿ ಶೈಕ್ಷಣಿಕ ಸುಧಾರಣೆಗಳ ಪ್ರಭಾವ ಅಗತ್ಯ: ಪ್ರಧಾನಮಂತ್ರಿ

प्रविष्टि तिथि: 27 JAN 2024 8:08PM by PIB Bengaluru

ಮಹಿಳೆಯರ ಸಬಲೀಕರಣಕ್ಕಾಗಿ ಶೈಕ್ಷಣಿಕ ಸುಧಾರಣೆಗಳ ಪರಿಣಾಮದ ಮಹತ್ವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದರು.

ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಪೋಸ್ಟ್ ಅನ್ನು ಹಂಚಿಕೊಂಡ ಅವರು, ಈ ಸುಧಾರಣೆಗಳು ಎಲ್ಲಾ ಕ್ಷೇತ್ರಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.

"ನಮ್ಮ ಶೈಕ್ಷಣಿಕ ಸುಧಾರಣೆಗಳ ಪ್ರಭಾವವು ನಿಜವಾಗಿಯೂ ಪರಿವರ್ತಕವಾಗಿದೆ, ವಿಶೇಷವಾಗಿ ನಮ್ಮ ನಾರಿ ಶಕ್ತಿಯನ್ನು ಸಶಕ್ತಗೊಳಿಸುವುದರಲ್ಲಿ. ಇದು ಎಲ್ಲಾ ಕ್ಷೇತ್ರಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

***


(रिलीज़ आईडी: 2000368) आगंतुक पटल : 124
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam