ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪಿ ಐ ಬಿ ಫೋಟೋ ಲೇಖನ


ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 11 ದಿನಗಳ ವಿಶೇಷ ಆಚರಣೆ

ಪ್ರಧಾನಮಂತ್ರಿಯವರು ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ವಿವಿಧ ಭಾಷೆಗಳಲ್ಲಿ ರಾಮಾಯಣದ ಪಠಣಗಳನ್ನು ಕೇಳುತ್ತಿದ್ದಾರೆ

Posted On: 21 JAN 2024 7:01PM by PIB Bengaluru

ಜನವರಿ 12, 2024 ರಿಂದ, ನಾಸಿಕ್‌ ನ ಕಲಾ ರಾಮ ಮಂದಿರದಲ್ಲಿ ಜನವರಿ 22ರಂದು ಅಯೋಧ್ಯಾ ಧಾಮ್ ದೇವಸ್ಥಾನದಲ್ಲಿ ಶ್ರೀ ರಾಮಲಲ್ಲ (ಬಾಲರಾಮ) ಪ್ರತಿಷ್ಠಾಪನೆಯವರೆಗೂ ನಡೆಸುವ 11 ದಿನಗಳ ಪವಿತ್ರ ಆಚರಣೆಯನ್ನು  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು. ಶ್ರೀ ರಾಮರು  ಹೆಚ್ಚಿನ ಸಮಯವನ್ನು ಕಳೆದ ನಾಸಿಕ್ ಧಾಮ್‌  ಪಂಚವಟಿಯಿಂದ ಅವರು ಆಚರಣೆಯನ್ನು ಪ್ರಾರಂಭಿಸಿದರು.

Image

 ಶ್ರೀ ಕಲಾರಾಮ್ ದೇವಸ್ಥಾನ, ನಾಸಿಕ್

ಜನವರಿ 12, 2024 ರಂದು, ಪ್ರಧಾನಮಂತ್ರಿಯವರು ಮಹಾರಾಷ್ಟ್ರದ ನಾಸಿಕ್‌ ನಲ್ಲಿರುವ ಕಲಾ ರಾಮ ಮಂದಿರದಲ್ಲಿ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿದರು. ಶ್ರೀರಾಮ ಕುಂಡದಲ್ಲಿ ಕೂಡ ದರ್ಶನ ಮಾಡಿದರು ಮತ್ತು ಪೂಜೆ ಸಲ್ಲಿಸಿದರು. ಅಯೋಧ್ಯೆಗೆ ಶ್ರೀರಾಮನ ವಿಜಯೋತ್ಸವದಿಂದ ಮರಳುವುದನ್ನು  ಚಿತ್ರಿಸುವ ರಾಮಾಯಣದ ‘ಯುದ್ಧ ಕಾಂಡ’ ವಿಭಾಗವನ್ನು ಮರಾಠಿ ಭಾಷೆಯಲ್ಲಿ ಪ್ರಧಾನ ಮಂತ್ರಿಯವರಿಗೆ ಪಠಿಸಲಾಯಿತು. ಸಂತ ಏಕನಾಥ್ ಜಿ ಅವರು ಮರಾಠಿಯಲ್ಲಿ ಬರೆದ ಭಾವಾರ್ಥ ರಾಮಾಯಣದ ಶ್ಲೋಕಗಳನ್ನು ಸಹ ಪ್ರಧಾನಮಂತ್ರಿಯವರು ಆಲಿಸಿದರು.

1.png

ವೀರಭದ್ರ ದೇವಸ್ಥಾನ, ಲೇಪಾಕ್ಷಿ, ಆಂಧ್ರ ಪ್ರದೇಶ

 ಮಂಗಳವಾರ, 16 ಜನವರಿ 2024 ರಂದು, ಆಂಧ್ರಪ್ರದೇಶದಲ್ಲಿರುವ ಪುಟ್ಟಪರ್ತಿಯ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಪ್ರಧಾನಮಂತ್ರಿಯವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪ್ರಧಾನಮಂತ್ರಿಯವರು ತೆಲುಗು ಭಾಷೆಯಲ್ಲಿ ರಂಗನಾಥ ರಾಮಾಯಣವನ್ನು ಆಲಿಸಿದರು ಮತ್ತು ಆಂಧ್ರಪ್ರದೇಶದ ಪುರಾತನ ನೆರಳು ಬೊಂಬೆಯಾಟ ಕಲೆಯಾದ ತೊಲು ಬೊಮ್ಮಲಾಟದಲ್ಲಿ ಜಟಾಯು ಕಥೆಯನ್ನು ವೀಕ್ಷಿಸಿದರು.

https://static.pib.gov.in/WriteReadData/userfiles/image/image00348C3.jpg

ಗುರುವಾಯೂರು ದೇವಸ್ಥಾನ, ತ್ರಿಶೂರ್, ಕೇರಳ

 ಪ್ರಧಾನಮಂತ್ರಿಯವರು ಕೇರಳದ ಗುರುವಾಯೂರಿನಲ್ಲಿರುವ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

3.png

 ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನ, ತ್ರಿಶೂರ್, ಕೇರಳ

 ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 17, 2024 ರಂದು ಕೇರಳದ ತ್ರಿಪ್ರಯಾರ್ನಲ್ಲಿರುವ ಶ್ರೀ ರಾಮಸ್ವಾಮಿಯ ದಿವ್ಯ ನಿವಾಸಕ್ಕೆ ಭೇಟಿ ನೀಡಿದರು. ಅವರು ಶ್ರೀ ರಾಮಸ್ವಾಮಿ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ಮಾಡಿದರು. ಪ್ರಧಾನಮಂತ್ರಿಯವರು ಸಾಂಸ್ಕೃತಿಕ ಪ್ರದರ್ಶನವನ್ನು ವೀಕ್ಷಿಸಿದರು ಹಾಗು ಕಲಾವಿದರು ಮತ್ತು ವಟುಗಳನ್ನು ಸಹ ಗೌರವಿಸಿದರು.

4.png

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ತಿರುಚಿರಾಪಳ್ಳಿ, ತಮಿಳುನಾಡು

 ಜನವರಿ 20, 2024 ರ ಶುಭ ದಿನದಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಶ್ರೀ ರಂಗನಾಥಸ್ವಾಮಿಯ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದರು. ಪ್ರಸಿದ್ಧ ಕಂಬನ್ ತನ್ನ ಮೇರುಕೃತಿಯನ್ನು ಜಗತ್ತಿಗೆ ಮೊದಲು ಅನಾವರಣಗೊಳಿಸಿದ ಪವಿತ್ರ ಸ್ಥಳದಲ್ಲಿ ಕಂಬ ರಾಮಾಯಣದ ಕಾವ್ಯಾತ್ಮಕ ನಿರೂಪಣೆಯನ್ನು ಅವರು ಆಲಿಸಿದರು

https://static.pib.gov.in/WriteReadData/userfiles/image/image0065FR7.jpg

ಶ್ರೀ ಅರುಳ್ಮಿಗು  ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿನ ರಾಮೇಶ್ವರಂನ ಅರುಳ್ಮಿಗು ರಾಮನಾಥಸ್ವಾಮಿಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರು. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪೂಜಿಸಲ್ಪಡುವ ಭಗವಂತನಿಗೆ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಸಂಜೆ ದೇವಾಲಯದ ಆವರಣದಲ್ಲಿ ಭಜನಾ ಸಂಧ್ಯಾ, ಅನೇಕ ಆಧ್ಯಾತ್ಮಿಕ ಗೀತೆಗಳು ಇದ್ದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡರು.

6.png

 ಕೋದಂಡರಾಮಸ್ವಾಮಿ ದೇವಸ್ಥಾನ, ಧನುಷ್ಕೋಡಿ

ಇಂದು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿಯವರು ದರ್ಶನ  ಮಾಡಿದರು ಮತ್ತು ಪೂಜೆ ಸಲ್ಲಿಸಿದರು. ಧನುಷ್ಕೋಡಿ ಬಳಿ, ರಾಮಸೇತುವನ್ನು ನಿರ್ಮಿಸಿದ ಸ್ಥಳ ಎಂದು ಹೇಳಲಾಗುವ ಅರಿಚಲ್ ಮುನೈಗೆ ಪ್ರಧಾನಮಂತ್ರಿಯವರು ಭೇಟಿ ನೀಡಿದರು.

setu.png

******

 

 



(Release ID: 1998542) Visitor Counter : 60